ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ
ಕಲಬುರಗಿ,ಜೂ.26-ವಿದ್ಯಾರ್ಥಿಗಳು ವರ್ತಮಾನದ ವಿಷಯಗಳ ಜೊತೆಗೆ ಶಿಸ್ತು, ವಿನಯ, ಸಮಯ ಪ್ರಜ್ಞೆ, ಓದು ಬರಹದಲ್ಲಿ ಆಸಕ್ತಿ ಬೆಳಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನ ಶೈಲಿ ಸರಳತೆಯೊಂದಿಗೆ ಉನ್ನತವಾದ ವಿಚಾರಗಳನ್ನು ಬೆಳ ಸಿಕೊಳ್ಳಬೇಕು, ಬದಲಾವಣೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಅವಶ್ಯಕತೆ ಇದೆ. ಶ್ರೇಷ್ಠ ಮಟ್ಟದ ಸಾಧನೆ ಮಾಡಲು ನಿರಂತರವಾದ ಪ್ರಯತ್ನದಲ್ಲಿ ತೊಡಗಿದಾಗ ಯಶಸ್ಸು ಹೊಂದಲು ಸಾಧ್ಯವಿದೆ ಎಂದು ಪ್ರೊ.ಎನ್.ಆರ್.ಬಡಶೇಷಿ ಹೇಳಿದರು.
ನಗರದ ಸಂತ ಜೋಸೆಫ್ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಶಿಬರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಸ್ಪರ್ಧೆಅನಿವಾರ್ಯ ಆಗಿದೆ ಅದಕ್ಕಾಗಿ ಪ್ರತಿ ವಿದ್ಯಾರ್ಥಿಗೆ ಉತ್ತಮವಾದ ಶಿಕ್ಷಣ ಅವಶ್ಯಕತೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಕಾಲೇಜಿನ ಆಡಳಿತ ಅಧಿಕಾರಿ ಸಿಸ್ಟರ್À ಪ್ರಾನ್ಸಿನ್ ಅವರು ಜ್ಯೋತಿ ಬೆಳಗಿಸುವದರ ಮೂಲಕ ಉದ್ಘಾಟನೆ ಮಾಡಿ ಮಾತನಾಡಿ, ವಿದ್ಯಾರ್ಥಿಗಳು ಶಿಬಿರದ ಸದುಪಯೋಗ ಪಡೆಯಬೇಕೆಂದು ತಿಳಿಸಿದರು. ಪ್ರಿನ್ಸಿಪಾಲರಾದ ಡಾ.ಚಿ.ಸಿ.ನಿಂಗಣ್ಣ ಅವರು ಆರಂಭದಲ್ಲಿ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು, ಆರಂಭದಲ್ಲಿ ವಿದ್ಯಾರ್ಥಿಗಳು ಪ್ರಾರ್ಥನೆ ಗೀತೆ ನಡೆಸಿ ಕೊಟ್ಟರು, ಕೊನೆಯಲ್ಲಿ ಉಪನ್ಯಾಸಕಿ ಡಾ.ನಾಗಮ್ಮ ಹೊಸಮನಿ ವಂದನಾರ್ಪಣೆ ಮಾಡಿದರು. ವಿದ್ಯಾರ್ಥಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು.