ಪ್ರಗತಿಗೆ ಅರಣ್ಯ ಸಂಪತ್ತು ಮೂಲಾಧಾರ: ಹಾರಕೂಡ ಶ್ರೀ
ಬೀದರ್:ಜೂ.26: ಒಂದು ದೇಶದ ಸವಾರ್ಂಗಿಣ ಪ್ರಗತಿಗೆ ಅರಣ್ಯ ಸಂಪತ್ತು ಮೂಲಾಧಾರವಾಗಿದೆ. ಸಾಮಾಜಿಕ ಅರಣ್ಯ ಕರಣ ಪ್ರಜ್ಞಾವಂತ ಸಮಾಜದ ಗುರುತರ ಹೊಣೆಯಾಗಿದೆಯೆಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹಾರಕೂಡ ಹೊರವಲಯದ ಅರಣ್ಯ ಇಲಾಖೆಯ ಭೂಪ್ರದೇಶದಲ್ಲಿ ಸಾಮಾಜಿಕ ಅರಣ್ಯ ವಲಯ ಬಸವಕಲ್ಯಾಣ ವತಿಯಿಂದ ಹಮ್ಮಿಕೊಂಡಿರುವ ಸಸಿ ನೆಡುವ ಕಾರ್ಯಕ್ರಮದಲ್ಲಿ ಪೂಜ್ಯರು ಸಸಿ ನೆಡುವುದರೊಂದಿಗೆ ಮಾತನಾಡಿ, ಪ್ರಾಣಿ, ಪಕ್ಷಿ ಸಂಕುಲಕ್ಕೆ ಜೀವನಾಡಿಯಾದ ಅರಣ್ಯ ಮಾನವ ಬದುಕಿಗೆ ಪ್ರಾಣ ವಾಯು ನೀಡುವ ಸಂಜೀವಿನಿ ಯಾಗಿದೆ.
ಮಣ್ಣಿನ ಸವಕಳಿ ತಪ್ಪಿಸಿ ಅಂತರ್ಜಲ ಹೆಚ್ಚಿಸುವಲ್ಲಿ ಅರಣ್ಯದ ಪಾತ್ರ ಯಾರೂ ಮೀರಿಸುವಂತಿಲ್ಲ.
ಔಷಧಿ ಸಸ್ಯಗಳ ಆಗರವಾದ ಅರಣ್ಯ ನಮ್ಮ ಆರೋಗ್ಯಕ್ಕೆ ಬೇಕಾಗುವ ಔಷಧಿ ಒದಗಿಸುವ ನೈಸರ್ಗಿಕ ವೈದ್ಯೆ ಎಂದರೆ ತಪ್ಪಾಗದು.
ಹಸಿರು ಭೂಮಿ ಮಾಡುವಲ್ಲಿ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆ ಮಾಡುತ್ತಿರುವ ಪ್ರಾಮಾಣಿಕ ಪ್ರಯತ್ನ ಶ್ಲಾಘನೀಯ, ಇಂತಹ ಜನ ಕಲ್ಯಾಣ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಬೀದರ ವಿಭಾಗ ಸಾಮಾಜಿಕ ಅರಣ್ಯ ಉಪ ಸಂರಕ್ಷಣಾಧಿಕಾರಿಗಳಾದ ಎ.ಬಿ.ಪಾಟೀಲ ಮಾತನಾಡಿ ಸಸಿಗಳನ್ನು ನೆಟ್ಟು ಮೂರು ವರ್ಷ ಸಂರಕ್ಷಿಸಿ, ಪೆÇೀಶಿಸಿದರೆ, ಮುಂದೆ ಗಿಡವಾಗಿ ನಮ್ಮನ್ನು ನೂರು ವರ್ಷ ಬದುಕಿಸುತ್ತವೆ.
ಆದಕಾರಣ ಪ್ರತಿಯೊಬ್ಬರು ತಮ್ಮ ಮನೆ ಹೊಲಗಳಲ್ಲಿ ಸಸಿ ನೆಟ್ಟು ಸಂರಕ್ಷಿಸಬೇಕೆಂದು ತಿಳಿಸಿದರು.
ಬಸವಕಲ್ಯಾಣ ಸಾಮಾಜಿಕ ಅರಣ್ಯ ವಲಯ ಅಧಿಕಾರಿ ಕರೆಪ್ಪ ಪೂಜಾರಿ ಸ್ವಾಗತಿಸಿದರು.
ಆನಂದರಾವ ಝಳಕೆ, ಶಿಕ್ಷಕರಾದ ಸುಭಾಶಯ ರೆಡ್ಡಿ, ಉಪ ವಲಯ ಅರಣ್ಯಾಧಿಕಾರಿ ವಿಕ್ರಮ್ ಕೆರೂರೆ, ಬೀಟ್ ಫಾರೇಸ್ಟರ ರಾಜಕುಮಾರ ಮುಂತಾದವರು ಉಪಸ್ಥಿತರಿದ್ದರು.