ವಿದ್ಯಾರ್ಥಿಗಳು ಸೇವಾ ಮನೋಭಾವನೆ ಹೊಂದಿರಬೇಕು : ನರೇಶಾನಂದ ಸ್ವಾಮೀಜಿ
ವಿಜಯಪುರ,ಜೂ.26 : ನಗರದ ವಿದ್ಯಾವರ್ಧಕ ಸಂಘದ ಬನ್ಸಿಲಾಲ ವಿಠ್ಠಲದಾಸ ದರಬಾರ ಪದವಿ ಮಹಾವಿದ್ಯಾಲಯ ಹಾಗೂ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಇವರ ಅಡಿಯಲ್ಲಿ 2023-2024 ನೇ ಸಾಲಿನ “ರಾಷ್ಟ್ರೀಯ ಸೇವಾ ಯೋಜನೆ ” ವಾರ್ಷಿಕ ವಿಶೇಷ ಶಿಬಿರವನ್ನು ನಗರದ ತೊರವಿ ರಸ್ತೆಯ ಹೊರವಲಯದಲ್ಲಿರುವ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಜೂ. 25 ರಿಂದಬಜುಲೈ 1ರವರೆಗೆ 7 ದಿನಗಳ ಕಾಲ ವಾರ್ಷಿಕ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ನರೇಶಾನಂದ ಸ್ವಾಮೀಜಿ ಸಸಿಗೆ ನೀರು ಹಾಕುವುದರ ಮೂಲಕ ಮಾಡಿದರು. ನಂತರ
ದರಬಾರವಮಹಾ ವಿದ್ಯಾಲಯದ ಎನ್.ಎಸ್.ಎಸ್ ಕಾರ್ಯಕ್ರಮದ ಅಧಿಕಾರಿ ರಾಜು ಕಪಾಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವ್ಯಕ್ಯತೆ ಹಾಗೂ ಸಹ ಬಾಳ್ವೆ ಬೆಳೆಯುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಹಾಗೂ ನಿಸ್ವಾರ್ಥ ಸೇವೆ ಮತ್ತು ಸಮಾಧಾನ ಸಮಾಜದ ವಿವಿಧ ಸಮಸ್ಯೆಗಳು ಸ್ಪಂದಿಸುವ ವ್ಯಕ್ತಿತ್ವ ವನ್ನು ರೂಪಿಸಿಕೊಳ್ಳಲು ಸಹಾಯ ವಾಗುತ್ತದೆ ಎಂದು ನುಡಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಆಶ್ರಮದ ಡಾ. ನರೇಶಾನಂದ ಸ್ವಾಮೀಜಿಗಳು ವಹಿಸಿಕೊಂಡು ಮಾತನಾಡಿ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಜೀವನದ ಪ್ರತಿಯೊಂದು ಹಂತದಲ್ಲಿ ನಾವು ಸೇವೆಯನ್ನು ಮಾಡಬೇಕು. ಸಮಾಜದಲ್ಲಿನ ಇತರ ವ್ಯಕ್ತಿಗಳಿಗಿಂತ ನಾವು ಭಿನ್ನರಾಗಿ ಮತ್ತೊಬರಿಗೆ ಆದರ್ಶವಾಗಿ ನಮ್ಮ ಬದುಕನ್ನು ಸವೆಸಬೇಕು ಎಂದು ಶಿಬಿರಾರ್ಥಿಗಳಿಗೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ. ಆರ್.ಜಿ. ಮಂಗಲಗಿ ಅವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಸಮಾಜದಲ್ಲಿನ ಜನರಿಗೆ ಆದರ್ಶ ವ್ಯಕ್ತಿಗಳಾಗಿ ಬದುಕಬೇಕು ಎಂದು ಹೇಳಿದರು. ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಎನ್.ಎಸ್.ಎಸ್ ಜಿಲ್ಲಾ ನೋಡಲ್ ಅಧಿಕಾರಿ ಡಾ. ಪ್ರಕಾಶ ರಾಠೋಡ ಅವರು ಮಾತನಾಡಿ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಜಿಲ್ಲೆಯ ಎಲ್ಲ ಮಹಾವಿದ್ಯಾಲಯಗಳಲ್ಲಿ ದರಬಾರ ಮಹಾವಿದ್ಯಾಲಯವು ಎಲ್ಲದರಲ್ಲೂ ಪ್ರಥಮ ಸ್ಥಾನದಲ್ಲಿ , ಕಾರಣ ವಿದ್ಯಾರ್ಥಿಗಳು ಹಾಗೂ ಎಲ್ಲ ಉಪನ್ಯಾಸಕರು ಅತ್ಯಂತ ಉತ್ಸಾಹ ತುಂಬಿದ ವ್ಯಕ್ತಿಗಳಿಗಿದ್ದಾರೆ ಎಂದರು. ದರಬಾರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಎಚ್. ಮಣ್ಣೂರ ಅವರು ಮಾತನಾಡಿ, ನಮ್ಮ ಮಹಾವಿದ್ಯಾಲಯದಲ್ಲಿ ಕಳೆದ 23 ವರ್ಷಗಳಿಂದ ನಾವು ಈ ರೀತಿಯ ಶಿಬಿರಗಳನ್ನು ನಡೆಸುತ್ತಿದ್ದೇವೆ. ಇಂತಹ ಶಿಬಿರದಲ್ಲಿ ಭಾಗವಹಿಸಿ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿ ಇದ್ದಾರೆ. ಈ ರಾಷ್ಟೀಯ ಸೇವಾ ಯೋಜನೆಯಿಂದ ನಮ್ಮ ಮಹಾವಿದ್ಯಾಲಯಕ್ಕೆ ಅನೇಕ ಪ್ರಶಸ್ತಿಗಳು ದೊರಕಿವೆ. ಮುಂದಿನ ದಿನಗಳಲ್ಲಿ ನೀವು ಕೂಡ ನಮ್ಮ ಮಹಾವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಸುಭಾಸಗೌಡ ಪಾಟೀಲ, ಬಸವರಾಜ ಕುಂಬಾರ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.