ಸಮಾಜದಲ್ಲಿ ಬೆಳೆಯಲು ಸ್ನೇಹಿತರ ಪ್ರೋತ್ಸಾಹ ಮುಖ್ಯ
ತಾಳಿಕೋಟೆ:ಜೂ.26:ಪಟ್ಟಣದ ಶ್ರೀ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿ,ದ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಗೊಂಡ ಈರಣ್ಣ ಸಜ್ಜನ ಅವರಿಗೆ ಸ್ನೇಹಿತರ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ರತನಸಿಂಗ್ ಕೊಕಟನೂರ ಮಾತನಾಡಿ ಸಮಾಜದಲ್ಲಿ ಒಬ್ಬ ವ್ಯಕ್ತಿ ಬೆಳೆಯಬೇಕಾದರೆ ಸ್ನೇಹಿತರ ಪ್ರೋತ್ಸಾಹ ಸಹಕಾರ ಮತ್ತು ಸಲಹೆ ಎಂಬುದು ಬಹಳೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಮತ್ತು ಆ ವ್ಯಕ್ತಿ ಸಮಾಜದಲ್ಲಿ ಬೆಳೆದಾಗ ಎಲ್ಲರಿಗಿಂತ ಕುಷಿ ಪಡುವ ವ್ಯಕ್ತಿಗಳು ಸ್ನೇಹಿತರಾಗಿರುತ್ತಾರೆ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿ,ದ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಸ್ನೇಹಿತ ಈರಣ್ಣ ಸಜ್ಜನ ಅವರು ಒಳ್ಳೆಯ ಸ್ನೇಹ ಸಂಬಂದವನ್ನು ಉಳಿಸಿಕೊಂಡು ಬಂದಿದ್ದಾರೆ ಅವರ ಬೆಳವಣಿಗೆ ಇನ್ನಷ್ಟು ಎತ್ತರಕ್ಕೆ ಹೋಗಲೆಂದು ಆಶಿಸುವದಾಗಿ ಹೇಳಿದರು.
ಈ ಸಮಯದಲ್ಲಿ ಸ್ನೇಹಿತರಾದ ರತನಸಿಂಗ್ ಕೊಕಟನೂರ, ಈರಣ್ಣ ಮಣೂರ, ಮುತ್ತುಗೌಡ ಪಾಟೀಲ, ಹಣಮಂತ ಈಳಗೇರ, ನಾರಾಯಣ ಮಾನ್ವಿ, ಶಂಕರಯ್ಯ ಹಿರೇಮಠ, ವಿಠ್ಠಲಸಿಂಗ್ ಹಜೇರಿ, ಎಂ.ಬಿ.ಸರಶೆಟ್ಟಿ, ಮೊದಲಾದವರು ಇದ್ದರು.