ದಾರಿಗಾಗಿ ಆಗ್ರಹಿಸಿ ಆಮರಣ ಉಪವಾಸ ಸತ್ಯಾಗ್ರಹ ಆರಂಭ
ತಾಳಿಕೋಟೆ:ಜೂ.26: ತಾಲೂಕಿನ ಗೊಟಗುಣಕಿ ಗ್ರಾಮದ ಸರ್ವೆ ನಂಬರ 55/1, 55/2 ಈ ಜಮೀನಿಗೆ ಹೋಗÀಲು ದಾರಿ ಬಂದ ಮಾಡಿದ್ದರಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗಿದ್ದು ದಾರಿ ಮದ್ಯದಲ್ಲಿ ಮಣ್ಣಿನ ದಿಬ್ಬು ಹಾಕಿದ್ದಾರೆ ಕೂಡಲೆ ತೆರವು ಗೊಳಿಸಿ ದಾರಿ ಮಾಡಿ ಕೊಡಬೇಕೆಂದು ಆಗ್ರಹಿಸಿ ಗೊಟಗುಣಕಿ ಗ್ರಾಮದ ಸಾಹೇಬಗೌಡ ಬಿರಾದಾರ ಕುಟುಂಭಸ್ಥರು ಮಂಗಳವಾರರಂದು ತಹಶಿಲ್ದಾರ ಕಚೇರಿ ಎದುರು ಆಮರಣ ಉಪವಾಸ ಸತ್ಯಾಗ್ರಹ ಪ್ರಾರಂಬಿಸಿದ್ದಾರೆ.
ಗೊಟಗುಣಕಿ ಗ್ರಾಮದ ರೈತರಾದ ಬಸನಗೌಡ ಭೀಮನಗೌಡ ಬಿರಾದಾರ, ಸಾಹೇಬಗೌಡ ಸಂಗನಗೌಡ ಪೋಲೇಸಿ ಈ ಇಬ್ಬರು ರೈತರು ನನ್ನ ಜಮೀನಿಗೆ ಉಳುಮೆ ಮಾಡಲು ಹೋಗಲು ಬಿಡುತ್ತಿಲ್ಲಾ ಸದ್ಯ ಬಿತ್ತನೆ ಕಾರ್ಯ ಎಲ್ಲಡೆ ನಡೆದಿದ್ದು ಆದರೆ ನನ್ನ ಜಮೀನು ಇನ್ನೂ ಹದಗೊಳಿಸಿಲ್ಲಾ ಮತ್ತು ಬಿತ್ತನೆಯೂ ಕೂಡಾ ಮಾಡಿಲ್ಲಾ ಈ ಹಿಂದೆ ತಹಶಿಲ್ದಾರರ ನೇತೃತ್ವದಲ್ಲಿ ಮತ್ತು ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ತಕರಾರು ತೆಗೆಯುವ ರೈತರಿಗೆ ತಿಳಿಹೇಳುವ ಕಾರ್ಯ ಮಾಡಲಾಗಿತ್ತಾದರೂ ಮತ್ತೇ ಆ ರೈತರು ಮೊಂಡತನ ಮುಂದುವರೆಸುವದರೊಂದಿಗೆ ನನ್ನ ಜಮೀನಿಗೆ ಹೋಗದ ಹಾಗೆ ಒಡ್ಡ ವರಿಗಳನ್ನು ಹಾಕಿ ರಸ್ತೆ ಬಂದ್ ಮಾಡಿದ್ದಾರೆ ಇದನ್ನು ಕೇಳಲು ಹೋದರೆ ಬೆದರಿಕೆ ಯೊಡ್ಡುತ್ತಿದ್ದಾರೆ ಕೂಡಲೇ ನನ್ನ ಜಮೀನಿಗೆ ಹೋಗಲು ದಾರಿ ಸಮಸ್ಯೆಯನ್ನು ಬಗೆಹರಿಸಿಕೊಡಬೇಕೆಂದು ಒತ್ತಾಯಿಸಿರುವ ಸಾಹೇಬಗೌಡ ಬಿರಾದಾರ ಕುಟುಂಭ ನನ್ನ ಜೀವಕ್ಕೆ ಏನಾದರೂ ಅನಾಹುತವಾದರೆ ಇವರಿಬ್ಬರೂ ಹಾಗೂ ತಾಲೂಕಾ ಆಡಳಿತವನ್ನು ನೇರ ಹೊಣೆಗಾgರಾಗುತ್ತಾರೆಂದು ಏಚ್ಚರಿಸಿರುವ ಅವರು ಕಳೆದ ತಿಂಗಳು ಅಹೋ ರಾತ್ರಿ ಧರಣಿ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ತಹಶೀಲ್ದಾರರು ಆಗಮಿಸಿ ದಾರಿ ಮಾಡಿಕೊಡುವದಾಗಿ ಭರವಸೆ ನಿಡಿದ್ದರು ಅವರ ಭರವಸೆ ಮೇರೆಗೆ ತಾತ್ಕಾಲಿಕ ಧರಣಿ ಹಿಂಪಡೆಯಲಾಯಿತು ಆದರೆ ಆದರೆ ಮತ್ತೆ ಜಮೀನಿಗೆ ತೆರಳಲು ದಾರಿ ತಕರಾರು ಮಾಡುತ್ತಿದ್ದಾರೆ. ತಹಶೀಲ್ದಾರ ಮಾತು ಕೇಳಿ ನಂಬಿ ದರಣಿ ಹಿಂದಕ್ಕೆ ಪಡದಿದ್ದೇವೆ. ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ಇರುವುದರಿಂದ ಈಗ ಆಮರಣ ಉಪವಾಸ ಸತ್ಯಾಗ್ರಹ ಹಮ್ಮಿಕಳ್ಳುವ ಪರಸ್ಥಿತಿ ಬಂದಿದೆ ನನ್ನ ಜಮೀನು ಮಾತ್ರ ದಾರಿ ಇಲ್ಲದೆ ಬಿತ್ತನೆ ಮಾಡಲಾಗಿಲ್ಲ ಹಿಗಾದರೆ ಇಡಿ ಒಂದು ವರ್ಷ ಕುಟುಂಬ ಬದಕುವದಾದರು ಹೇಗೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಅನೀಲಕುಮಾರ ಕಾಜಾಪೂರ, ಶಂಕ್ರೆಮ್ಮ ರಾಜಾಪುರ, ಶೈಲಶ್ರೀ ಬಾರಾದಾರ ಮೊದಲಾದವರು ಆಮರಣ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.