ಜೂ.30ರಂದು ಸೌಭಾಗ್ಯಸಿರಿ ಟ್ರಸ್ಟ್‍ಉದ್ಘಾಟನೆ ಸ್ವಾಮಿರಾವ್ ಸೇರಿ 10 ಸಾಧಕರಿಗೆ’ಕಾಯಕರತ್ನ’ ಪ್ರಶಸ್ತಿ
ಕಲಬುರಗಿ:ಜೂ.26: ಇದೇಜೂನ್ 30ರಂದು ಬೆಳಗ್ಗೆ 10.45ಕ್ಕೆ ನಗರದಕನ್ನಡ ಭವನದಲ್ಲಿ ಸೌಭಾಗ್ಯ ಸಿರಿ ಸಾಮಾಜಿಕ ಸೇವಾ ಟ್ರಸ್ಟ್‍ಉದ್ಘಾಟನಾ ಸಮಾರಂಭ ನಡೆಯಲಿದ್ದು, ಇದೇ ವೇಳೆ ಖ್ಯಾತ ಸಾಹಿತಿಡಾ.ಸ್ವಾಮಿರಾವ್‍ಕುಲಕರ್ಣಿ ಸೇರಿದಂತೆ ವಿವಿಧ ಕ್ಷೇತ್ರಗಳ 10 ಗಣ್ಯರಿಗೆ ‘ಕಾಯಕರತ್ನ’ ಪ್ರಶಸ್ತಿ ನೀಡಿಗೌರವಿಸಲಾಗುವುದುಎಂದುಟ್ರಸ್ಟ್‍ಅಧ್ಯಕ್ಷ ಹಾಗೂ ಕನ್ನಡಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದಅವರು, ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೂಜ್ಯಡಾ.ದಾಕ್ಷಾಯಿಣಿಎಸ್. ಅಪ್ಪಅವರು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಮುತ್ತ್ಯಾನ ಬಬಲಾದ ಶ್ರೀಮಠದ ಪೂಜ್ಯಗುರುಪಾದಲಿಂಗ ಮಹಾಶಿವಯೋಗಿಗಳು ನೇತೃತ್ವ ವಹಿಸಲಿದ್ದಾರೆಎಂದು ಮಾಹಿತಿ ನೀಡಿದರು.
ಕಲಬುರಗಿಗ್ರಾಮೀಣಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡಟ್ರಸ್ಟ್‍ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ಹಾಗೂ ಎಚ್‍ಕೆಇಅಧ್ಯಕ್ಷ ಶಶಿಲ್ ನಮೋಶಿ ಸಾಧಕರಿಗೆ ಪ್ರಶಸ್ತಿ ನೀಡಿಗೌರವಿಸಲಿದ್ದಾರೆ. ಲೋಕೋಪಯೋಗಿಇಲಾಖೆಯಅಧೀಕ್ಷಕಅಭಿಯಂತರಡಾ.ಸುರೇಶ್‍ಎಲ್.ಶರ್ಮಅಧ್ಯಕ್ಷತೆ ವಹಿಸಲಿದ್ದು, ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದಅಗಸರ, ಕಾರ್ಯನಿರತ ಪತ್ರಕರ್ತರ ಸಂಘದಜಿಲ್ಲಾಧ್ಯಕ್ಷ ಬಾಬುರಾವ್‍ಯಡ್ರಾಮಿ, ಪಾಲಿಕೆ ಮಾಜಿ ಸದಸ್ಯಉಮೇಶ್ ಶೆಟ್ಟಿ, ಟೆಂಗಳಿ ಜ್ಯೂವೆಲರ್ಸ್ ಮಾಲೀಕರಾದ ಸೋಮಶೇಖರ ಟೆಂಗಳಿ, ಕಲಬುರಗಿಜಿಲ್ಲಾಕನ್ನಡ ಸಾಹಿತ್ಯ ಪರಿಷತ್‍ಅಧ್ಯಕ್ಷ ವಿಜಯಕುಮಾರ್‍ತೇಗಲತಿಪ್ಪಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ. ಸಾಹಿತಿ, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರಆಶಯ ನುಡಿಗಳನ್ನು ಆಡಲಿದ್ದು, ಸುರೇಶ ಬಡಿಗೇರ ನೇತೃತ್ವ ವಹಿಸಲಿದ್ದಾರೆಎಂದು ವಿವರಿಸಿದರು.
ಪ್ರಶಸ್ತಿ ವಿಜೇತರು
ಡಾ.ಎಸ್.ಎಚ್.ಕಟ್ಟಿ (ವೈದ್ಯಕೀಯಕ್ಷೇತ್ರ), ಡಾ.ಸ್ವಾಮಿರಾವ್‍ಕುಲಕರ್ಣಿ (ಸಾಹಿತ್ಯ) ದೇವಯ್ಯಗುತ್ತೇದಾರ್ (ಮಾದ್ಯಮ), ಡಾ.ಎಸ್.ಎಸ್.ಗುಬ್ಬಿ (ವೈದ್ಯ ಸಾಹಿತ್ಯ), ರವೀಂದ್ರ ಶಾಬಾದಿ ಹಾಗೂ ಪವನಕುಮಾರ್ ವಳಕೇರಿ (ಸಮಾಜ ಸೇವೆ), ಲಕ್ಷ್ಮಣ ದಸ್ತಿ (ಸಂಘಟನೆ ಮತ್ತು ಹೋರಾಟ), ಗುಂಡಣ್ಣಡಿಗ್ಗಿ (ಹಾಸ್ಯ ಸಾಹಿತ್ಯ), ಸುರೇಖಾಜೆ.ಡೆಂಗಿ (ಶಿಕ್ಷಣ) ಮತ್ತು ಸೋಮನಾಥಕಟ್ಟಿಮನಿ (ಕನ್ನಡಪರ ಹೋರಾಟ) ಅವರನ್ನುಕಾಯಕರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆಎಂದು ಸೌಭಾಗ್ಯಸಿರಿ ಸಾಮಾಜಿಕ ಸೇವಾ ಟ್ರಸ್ಟ್‍ಅಧ್ಯಕ್ಷ ಸುರೇಶ ಬಡಿಗೇರ ತಿಳಿಸಿದರು.