ನೀಲಗಂಗಾ ಆಯುರ್ವೆದಿಕ್ ಮೆಡಿಕಲ್ ಕಾಲೇಜಿನಲ್ಲಿ ಯೋಗ ದಿನಾಚರಣೆ
ಬಸವಕಲ್ಯಾಣ: ಜೂ.26:ಇಂದಿನ ಯುವ ಸಮೂಹ ನಿತ್ಯ ಯೋಗ ಮಾಡುವುದನ್ನು ರೂಢಿ ಮಾಡಿಕೊಂಡರೆ ಜೀವನ ಉತ್ತಮವಾಗಿರಿಸಲು ಸಹಕಾರಿಯಾಗುತ್ತದೆ ಯಾವುದೇ ರೋಗ ರುಜಿನಗಳು ಬರುವುದಿಲ್ಲ ಹೀಗಾಗಿ ಯೋಗಕ್ಕೆ ಮಹಳ ಮಹತ್ವ ನೀಡಿದರೆ ಬಹಳ ಉಪಯೋಗವಾಗುತ್ತದೆ ಎಂದು ನೀಲಗಂಗಾ ಆಯುರ್ವೆದಿಕ್ ಮೇಡಿಕಲ್ ಕಾಲೇಜಿನ ಅಧ್ಯಕ್ಷೆ ಡಾ. ಅನೀತಾ ಮಹಾಜನ್ ಹೇಳಿದರು.
ತಾಲೂಕಿನ ಯರಬಾಗ ಗ್ರಾಮದ ನೀಲಗಂಗಾ ಆಯುರ್ವೆದಿಕ್ ಮೆಡಿಕಲ್ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡ 10ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಢಿ, ನಾವು ಬದುಕಿನಲ್ಲಿ ಹೇಗೆ ನಿತ್ಯ ಎಲ್ಲಾ ಕಾರ್ಯಗಳು ಮಾಡುತ್ತೇವೆ ಮತ್ತು ನಾವು ಊಟ ಮಾಡುವಂತಹ ಆಹಾರವನ್ನು ಚೆನ್ನಾಗಿ ಜೀರ್ಣವಾಗುವದು ಮತ್ತು ಅದರಿಂದ ಶರೀರಕ್ಕೆ ಸದೃಢವಾಗಿಸಲು ಯೋಗದಿಂದ ಮಾತ್ರ ಸಾಧ್ಯವಿದೆ. ಮುಂದೆ ಯಾವುದೇ ರೋಗಗಳು ಬರದಂತೆ ನಾವು ನಿತ್ಯ ಯೋಗಾಸನ ಮಾಡುವದರಿಂದ ಅವುಗಳನ್ನು ತಡೆ ಹಿಡಿಯಬಹುದಾಗಿದೆ ಎಂದು ತಿಳಿಸಿದರು.
ನ್ಯಾಯವಾದಿ ಸಂಜುರಡ್ಡಿ ಯರಬಾಗ ಮಾತನಾಡಿ, ಇಂದಿನ ಕಲುಷಿತ ಆಹಾರ ತಿನ್ನುವದರಿಂದ ನಾವೆಲ್ಲರು ವಿವಿಧ ರೋಗಗಳಿಗೆ ತುತ್ತಾಗುತ್ತಿರುವಂತ ಸನ್ನಿವೇಶಗಳು ಬರುತ್ತಿವೆ ಹೀಗಾಗಿ ನಾವು ಅಲ್ಲದೆ ನಮ್ಮ ಮುಂದಿನ ಮಕ್ಕಳಿಗೆ ಅಬ್ಯಾಸದ ಜತೆಗೆ ಯೋಗಗಳ ಮಹತ್ವ ತಿಳಿಸಬೇಕು ಎಂದು ಹೇಳಿದರು. ಸಂಸ್ಥೆಯ ಕಾರ್ಯದರ್ಶಿ ಶಂಕರ ಗೌಡ ಮಾತನಾಡಿದರು.
ವೇದಿಕೆಯಲ್ಲಿ ಡಾ. ಸಚಿನ್ ಸೆನೆಟ್, ಡಾ. ಯತಿರಾಜ ದೇಶಪಾಂಡೆ, ವೆಂಕಟರಡ್ಡಿ, ಶಿವಕುಮಾರ ಸ್ವಾಮಿ, ಬಸವರಾಜ ಕೀರ್ತಿಕರ್, ಸ್ವಪ್ನಕುಮಾರ, ಡಾ.ರವಿಚಂದ್ರನ್ ಉಪಸ್ಥಿತರಿದ್ದರು. ಡಾ. ರಾಜಿತಾ ಸ್ವಾಗತಿಸಿದರೆ, ಡಾ. ರೇಣುಕಾ ಮತ್ತು ಡಾ. ನಿವೇದಿತಾ ನಿರೂಪಿಸಿದರು.