ಸಂಕಷ್ಟಿ ಚತುರ್ಥಿ: ರೇಜಂತಲ ಸಿದ್ದಿ ವಿನಾಯಕನಿಗೆ ವಿಶೇಷ ಪೂಜೆ
ಬೀದರ: ಜೂ.26:ಪಕ್ಕದ ತೆಲಂಗಾಣಾ ರಾಜ್ಯದ ಜಹಿರಾಬಾದ್ ಮಂಡಲ(ತಾಲೂಕು) ವ್ಯಾಪ್ತಿಯಲ್ಲಿನ ರೇಜಂತಲನಲ್ಲಿ ಸಂಕಷ್ಟಿ ಚತುರ್ಥಿ ಅಂಗವಾಗಿ ಬೀದರ್, ಕಲಬುರಗಿ, ಪಕ್ಕದ ಮಹಾರಾಷ್ಟ್ರ ಹಾಗೂ ತೆಲಂಗಾಣಾ ರಾಜ್ಯಗಳ ಭಕ್ತಾದಿಗಳು ಸಾಗರಲೋಪಾದಿಯಲ್ಲಿ ಹರಿದು ಬಂದಿತು.
ಬೆಳಗ್ಗಿನ 4.00 ಗಂಟೆಯ ಕಾಕಡ ಆರತಿಗಾಗಿ ಬೀಡು ಬಿಟ್ಟರು. ಬಹುತೇಕರು ಪಾದಚಾರಿಗಳಾಗಿ ಭಾಗವಹಿಸಿರುವುದು ವಿಶೇಷ.
ಬೆಳಿಗ್ಗೆಯಿಂದಲೇ ದೇವರ ದರುಶನಕ್ಕಾಗಿ ಸರದಿ ಸಾಲಿನಲ್ಲಿ ಜನ ಜಾತ್ರೆ ನೆರೆಯಿತು. ಆರಂಭದಲ್ಲಿ ಸಿದ್ದಿ ವಿನಾಯಕನಿಗೆ ಅಲ್ಲಿಯ ಅರ್ಚಕರು ಪಂಚಾಮೃತದಿಂದ ಅಭಿಷಕಗೈದು, ಮಹಾ ಮಂಗಳಾರತಿ ನೆರವೇರಿಸಿ ಭಕ್ತಾದಿಗಳಿಗೆ ದೇವರ ದರುಶನಕ್ಕೆ ಅನುವು ಮಾಡಿಕೊಟ್ಟರು. ಬೆಳಗ್ಗೆಯಿಂದ ಸಂಜೆ ವರೆಗೆ ಪ್ರಸಾದ ವಿತರಣೆ ಜರುಗಿ, ನಂತರ ಮಹಾಪ್ರಸಾದ ಆರಂಭವಾಯಿತು.
ಸಿದ್ದಿ ವಿನಾಯಕ ದೇವಸ್ಥಾನ ಟ್ರಸ್ಟಿಗಳಾದ ಅಶೋಕ ರೇಜಂತಲ, ದಿಗಂಬರ ಪೆÇೀಲಾ, ಬಸವರಾಜ ಸಿಂದೋಲ, ಪಿ.ನಾರಾಯಣರಾವ, ರಘುನಾಥ ನಾವಲಕೆಲೆ, ಶರಣಬಸಪ್ಪ ಭೀಮಳ್ಳಿ, ಜಹಿರಾಬಾದದ ನರಸಿಂಹಲು ಅಲ್ಲಾಡಿ, ನೀಲಾ ರಾಜೇಶ್ವರ, ಲಕ್ಷ??ಣ ಚಿದ್ರಿ, ರವಿ ಖುಬ್ಬಾ, ಅಲ್ಲಾಡಿ ವಿರೇಶಂ ಹಲವು ಜವಾನ್ದಾರಿ ಹೊತ್ತು ಸಂಕಷ್ಟಿ ಚತುರ್ಥಿ ಯಶಸ್ವಿಗೊಳಿಸಿದರು.
ಸೇರಿದಂತೆ ಸಹಸ್ರಾರು ಭಕ್ತಾದಿಗಳು ಭಾಗವಹಿಸಿದ್ದರು.