ಕಣ್ಣು ಕುಕ್ಕುವ ಹೆಡ್‍ಲೈಟ್ ತೆಗೆಯದಿದ್ದರೆ ದಂಡ: ಪಿಎಸ್‍ಐ
ವಾಡಿ:ಜೂ.26: ಕಣ್ಣು ಕುಕ್ಕುವ ಹೆಡ್ ಲೈಟ್‍ಗಳ ಹೊಂದಿದ್ದರೆ ಕೂಡಲೇ ತೆಗೆದು ಹಾಕಬೇಕು ತೆಗಯದಿದ್ದರೆ ದಂಡ ವಿಧಿಸಲಾಗುವುದು. ಓವರ್ ಸ್ಪೀಡ್ ಸಂಚಾರ ಮಾಡದೇ ವೇಗಮಿತಿ ಅಳವಡಿಸಿಕೊಳ್ಳಬೇಕು. ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಬೈಕ್ ಸವಾರರು ಸಹ ಲೈಸನ್ಸ್ ಹಾಗೂ ವಾಹನ ವಿಮೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಪಿಎಸ್‍ಐ ತಿರುಮಲೇಶ ಕುಂಬಾರ ಹೇಳಿದರು.
ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಮಂಗಳವಾರ ವಾಹನ ಚಾಲಕರು ಹಾಗೂ ಮಾಲೀಕರ ಸಭೆ ನಡೆಸಿ ಮಾತನಾಡಿದ ಅವರು, ವಾಹನ ಚಾಲಕರು ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದರೆ ಹಾಗೂ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದರೆ ವಾಹನಗಳನ್ನು ಜಪ್ತಿ ಮಾಡಲಾಗುವುದು. ಲಾರಿ ಅಸೋಸಿಯೇಶನ್ ಸಂಘ ಸಹ ಇದರ ಬಗ್ಗೆ ತಮ್ಮ ಚಾಲಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಸಭೆ ಉದ್ದೇಶಿಸಿ ಮಾತನಾಡಿದ ಲಾರಿ ಅಸೋಸಿಯೇಶನ್ ಸಂಘ ಕಾರ್ಯದರ್ಶಿ ರಾಜು ಕೋಳಿ, ವಾಡಿ ಪಟ್ಟಣದಲ್ಲಿ ವಾಹನಗಳ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಕಾಡುತ್ತಿದೆ. ಎಸಿಸಿ ಗ್ರೌಂಡ್‍ನಲ್ಲಿ ಸ್ಥಳದ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಲಾರಿ ಅಸೋಸಿಯೇಶನ್ ಸಂಘ ಅಧ್ಯಕ್ಷ ಶಂಕರ ಸಿಂಗ ರಾಠೋಡ, ಮಹ್ಮದ್ ಗೌಸ್, ಶಿವು ಹಡಪದ, ರಾಮು ರಾಠೋಡ, ರಮೇಶ ಜಾಧವ, ಎಂ.ಡಿ ಅಮೀನ್, ಸುನೀಲ ರಾಠೋಡ, ಬಸವರಾಜ್ ಪೂಜಾರಿ, ಸುರೇಶಕುಮಾರ, ಹುಸುನಪ್ಪ ಗುತ್ತೇದಾರ, ಶೇಖರ್ ಗುತ್ತೇದಾರ, ಮಹಾದೇವ ಸಜ್ಜನ್, ಎಂ.ಡಿ ಸಾಧಿಕ್ ಸೇರಿದಂತೆ ಅನೇಕರು ಇದ್ದರು.