ಬಿಜೆಪಿ ಯುವ ಮೋರ್ಚಾದಿಂದ ಪೋಸ್ಟರ್ ಅಭಿಯಾನ
ಕಲಬುರಗಿ:ಜೂ.26: ತುರ್ತು ಪರಿಸ್ಥಿತಿ ಕರಾಳ ದಿನದ ಪ್ರಯುಕ್ತ ಮಂಗಳವಾರ ಬಿಜೆಪಿ ಯುವ ಮೋರ್ಚಾದಿಂದ ಪೆÇೀಸ್ಟರ್ ಅಭಿಯಾನವನ್ನು ನಗರದ ರಂಗಮಂದಿರ ಆವರಣದಲ್ಲಿ ನಡೆಸಲಾಯಿತು.
ಸಂವಿಧಾನದ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರಿಗೆ ನೈತಿಕತೆ ಎಲ್ಲಿದೆ? ತುರ್ತು ಪರಿಸ್ಥಿತಿ ಆವತ್ತು ವಿರೋಧಿಸಿದ ಸಿದ್ದರಾಮಯ್ಯ ಇಂದು ಮೌನ, ತುರ್ತು ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸಂವಿಧಾನಕ್ಕೆ ಮಾಡಿದ ದ್ರೋಹಕ್ಕೆ ರಾಹುಲ್ ಗಾಂಧಿ ಕ್ಷಮೆ ಕೇಳಲಿ ಮುಂತಾದ ಬರಹಗಳುಳ್ಳ ಪೆÇೀಸ್ಟರ್‍ಗಳನ್ನು ಮುಖಾಂತರ ವಿರೋಧ ವ್ಯಕ್ತ ಪಡಿಸಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಬಿಜೆಪಿ ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ, ಮುಖಂಡರಾದ ನಿತಿನ್ ಗುತ್ತೇದಾರ, ಉಮೇಶ ಪಾಟೀಲ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಹೇಶ ಚವ್ಹಾಣ, ಪದಾಧಿಕಾರಿಗಳಾದ ವೀರು ಪಾಟೀಲ ರೈಕೋಡ್, ಚನ್ನಬಸಪ್ಪಾ ಭಂಗೆ, ಶಿವಾ ಅಷ್ಟಗಿ, ಸಚಿನ ಬಿರಾದಾರ, ವಿನೋದ ಪಾಟೀಲ, ರಾಜು ಚವ್ಹಾಣ, ನಾರಾಯಣ, ಸೌರಭ, ಪ್ರಿತಮ್ ಸೇರಿದಂತೆ ಇತರರು ಇದ್ದರು.