ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಮನೋಹರ ಶಾಹ
ವಾಡಿ:ಜೂ.26: ಜಗತ್ತಿನ ಜೀವರಾಶಿಗಳಿಗೆ ಆಮ್ಲಜನಕದ ಕೊರತು ಉಂಟಾದರೆ ಮನುಕುಲ ಸಂಕಷ್ಟ ಎದುರಿಸಬೇಕಾಗುತ್ತದೆ. ಪರಿಸರ ಉತ್ತೇಜಿಸಲು ಎಲ್ಲರೂ ಮನೆಗೊಂದು ಸಸಿ ನೇಡಬೇಕೆಂದು ಕರ್ನಾಟಕ ರಾಜ್ಯ ಸೇವಾದಳದ ಮುಖ್ಯಸ್ಥ ಮನೋಹರ ಶಾಹ ಹೇಳಿದರು.
ಪಟ್ಟಣ ಹೊರ ವಲಯದ ಬಳಿರಾಮಚೌಕ್ ವೃತ್ತದಲ್ಲಿ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಶನಿವಾರ ಆಯೋಜಿಸಲಾದ ಎರಡು ಸಾವಿರ ವೃಕ್ಷಾರೋಪಣ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಆಧುನಿಕ ಜೀವನ ಪದ್ಧತಿಯಿಂದಾಗಿ ಪರಿಸರ ಮಾಲಿನ್ಯವಾಗುತ್ತಿದೆ. ಇದರಿಂದ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಪ್ಲಾಸ್ಟಿಕ ವಸ್ತುಗಳು ಸೇರಿದಂತೆ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ವಸ್ತುಗಳ ಬಳಕೆ ಮಾಡದೆ. ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ಇದಕ್ಕೆ ಸಂಬಂದಿಸಿದಂತೆ ಜಾಗೃತಿ ಮೂಡಿಸುವ ಕೆಲಸವಾಗಬೇಕಾಗಿದೆ ಎಂದು ಹೇಳಿದರು.
ನಿರಂಕಾರಿ ಫೌಂಟೇಶನ ಜಿಲ್ಲಾ ಸಂಯೋಜಕ ಶಿವರಾಮ ಪವಾರ ಮಾತನಾಡಿ, ಬದಲಾಗುತ್ತಿರುವ ಹವಾಮಾನದಿಂದ ಜೀವರಾಶಿಗಳು ನಾಶವಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಪರಿಸರ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಸಂತ ನಿರಂಕಾರಿ ಪೌಂಡೇಶನ್ ಜಿಲ್ಲಾ ಸಂಯೋಜಕರಾದ ಶಿವರಾಮ ಪವಾರ ಹೇಳಿದರು.
ಪಟ್ಟಣದ ಬಲರಾಮ ಚೌಕ್‍ನಲ್ಲಿ ಶನಿವಾರ ನಂತ ನಿರಂಕಾರಿ ಚಾರಿಟೆಬಲ್ ಪೌಂಡೇಶನ್ ವತಿಯಿಂದ ಎರಡು ಸಾವಿರ ಸಸಿಗಳನ್ನು ನೆಡುವ ವೃಕ್ಷಾರೋಪಣ ಅಭಿಯಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ನಂತ ನಿರಂಕಾರಿ ಚಾರಿಟೆಬಲ್ ಪೌಂಡೇಶನ್ ಕೇವಲ ಧಾರ್ಮಿಕ ಕಾರ್ಯದಲ್ಲಿ ತೊಡಗದೆ ಸಸಿಗಳನ್ನು ನೆಟ್ಟು ಪರಸರ ರಕ್ಷಿಸುವ ಮೂಲಕ ಸಾಮಾಜಿಕ ಕಾರ್ಯದಲ್ಲಿ ಕಾರ್ಯ ತೊಡಗಿದೆ ಎಂದರು.
ಕಸಾಪ ವಾಡಿ ವಲಯ ಅಧ್ಯಕ್ಷ ಸಿದ್ದಯ್ಯಶಾಸ್ತ್ರಿ ನಂದೂರಮಠ ಮಾತನಾಡಿ, ಒಂದು ಮರ ನೆಟ್ಟರೆ ಅದು ನಮಗೆ ಮಾತ್ರವಲ್ಲ ನಮ್ಮ ಮುಂದಿನ ತಲೆಮಾರಿನವರಿಗೂ ನೆರಳು, ಹಣ್ಣು, ಹಾಗೂ ಜೀವ ವಾಯುವನ್ನೂ ನೀಡುತ್ತದೆ. ಹಾಗಾಗಿ, ಒಂದು ಮನೆಯ ಮುಂದೆ ಕನಿಷ್ಟ ಎರಡು ಮರಗಳನ್ನಾದರೂ ನೆಟ್ಟು ಪರಿಸರ ಪೋಷಿಸಬೇಕು ಎಂದು ಕರೆ ನೀಡಿದರು.
ಮರಗಳು ನಾಶವಾಗುವುದರಿಂದ ಪ್ರಾಣಿ,ಪಕ್ಷಿ, ಜಲಚರಗಳು ಸೇರಿದಂತೆ ಹಲವು ಜೀವರಾಶಿಗಳು ನಾಶವಾಗುತ್ತಿವೆ. ವಾತಾವರಣ ಕಲುಷಿತವಾಗಿ ಕಂಡು ಕೇಳರಿಯದ ಖಾಯಿಲೆಗಳು ಉಲ್ಬಣವಾಗುತ್ತಿವೆ. ಹಾಗಾಗಿ, ಪರಿಸರ ರಕ್ಷಣೆಯಲ್ಲಿ ನಮ್ಮ ಕ್ಷೇಮವಿದೆ ಎಂದರು. ಫೌಂಡೇಶನ್ ಸ್ಥಳೀಯ ಮುಖ್ಯಸ್ಥ ಪ್ರಕಾಶ ಪವಾರ, ಚಿತ್ತಾಪುರ ಮುಖ್ಯಸ್ಥ ವೇಣುಗೋಪಾಲ, ರಾಯಚೂರ ಮುಖ್ಯಸ್ಥ ಮನೋಜ ಕುಮಾರ, ಕಲಬುರ್ಗಿ ಪ್ರಚಾರಕ ಸೀತಾರಾಮ ಮಾತನಾಡಿದರು. ಸ್ಥಳೀಯ ಮುಖಂಡರಾದ ಬಾಳು ಚವ್ಹಾಣ, ರವಿ ಸಿಂಧಗಿಕರ, ಶಕುಂತಲಾ ಪೆÇದ್ದಾರ, ರಾಮಮೂರ್ತಿ, ರಮೇಶ ಕಾರಭಾರಿ ನೆಹರೂ, ಹರಿ ನಾಯಕ, ಹೀರಾ ನಾಯಕ, ನೀಲಸಿಂಗ್ ಚವ್ಹಾಣ, ವಿನಾಯಕ ರಾಠೋಡ, ರಮೇಶ ಕಾರಬಾರಿ, ಆನಂದ ರಾಠೋಡ ಮೊಹಮ್ಮದ್ ಹಾಜಿ ಸಾಬ್, ವಾಲ್ಮೀಕಿ ಜಾಧವ ಸೇರಿದಂತೆ ಇನ್ನಿತರರು ಇದ್ದರು.