ಪರಿಹಾರದ ಚೆಕ್ ವಿತರಿಸಿದ ಸಚಿವ ಖರ್ಗೆ
ವಾಡಿ:ಜೂ.26: ಜೆಸ್ಕಾಂ ಇಲಾಖೆಯಿಂದ ನೀಡಲಾದ ಪರಿಹಾರದ ಚೆಕ್ ಮೃತ ಕುಟುಂಬಸ್ಥರಿಗೆ ಸಚಿವ ಪ್ರಿಯಾಂಕ್ ಖರ್ಗೆ ನೀಡಿದರು. ಚಿತ್ತಾಪುರ ತಾಲೂಕಿನ ಕಮರವಾಡಿ ಗ್ರಾಪಂ ವ್ಯಾಪ್ತಿಯ ರಾಮಾನಗರ ತಾಂಡಾದ ನಿವಾಸಿ ಮೃತ ಕವಿತಾಬಾಯಿ ಪುಲಾಸಿಂಗ್ ಚವ್ಹಾಣ ಕುಟುಂಬಕ್ಕೆ 2.5 ಲಕ್ಷ ರೂ. ಚೆಕ್ ವಿತರಿಸಿದರು.
ಕಲಬುರ್ಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಕುಟುಂಬಸ್ಥರನ್ನು ಕರೆಸಿಕೊಂಡ ಸಚಿವರು, ಮೃತ ಕವಿತಾಬಾಯಿ ಅವರ ಸುಪುತ್ರ ಅವಿನಾಶ ಚವ್ಹಾಣ ಅವರಿಗೆ ಪರಿಹಾರದ ಚಕ್ ವಿತರಿಸಿ ನಿಮ್ಮ ಕುಟುಂಬದ ಜೋತೆ ನಾವಿದ್ದೇವೆ ಎಂದು ಸಾಂತ್ವಾನ ಹೇಳಿದರು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ, ಜಿಲ್ಲಾಧಿಕಾರಿ ಫೌಜೀಯ್ ತರನ್ನುಮ್, ಜಿಪಂ ಸಿಇಒ ಭನ್ವರ್ ಸಿಂಗ್ ಮೀನಾ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಲಿಂಗನವರ್, ತಾಂತ್ರಿಕ ಸಹಾಯಕ ನಿರ್ದೇಶಕ ಚಂದ್ರೇಶಖರ, ಇಂಜಿನೀಯರ್ ಖಂಡೇಪ್ಪ ಇದ್ದರು.