ವಿದ್ಯುತ್ ತಂತಿ ತಗುಲಿ ಲಾರಿ ಚಾಲಕ ಸಾವು
ಬಸವಕಲ್ಯಾಣ:ಜೂ.26: ಗ್ಯಾರೇಜ್ ಮೇಲಿಂದ ಹಾದುಹೋದ ಹೈಟೆಂಶನ್ ವಿದ್ಯುತ್ ತಂತಿ ತಗಲಿ ಲಾರಿ ಚಾಲಕನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಸಸ್ತಾಪೂರ ಬಂಗ್ಲಾದ ಸಮೀಪದ ರಾಷ್ಟ್ರೀಯ ಹೆದ್ದಾರಿ-65ರ ಮೇಲಿರುವ ಅಕಾಲ ಆಟೋ ಸರ್ವಿಸ್ ಸೆಂಟರ್’ನಲ್ಲಿ ಶುಕ್ರವಾರ ರಾತ್ರಿ ಜರುಗಿದೆ.
ಉತ್ತರ ಪ್ರದೇಶದ ಮಿರ್ಜಾಪುರ್ ಜಿಲ್ಲೆಯ ಮೂಲದ ಲಾರಿ ಚಾಲಕ ಸುರೇಂದ್ರಕುಮಾರ್ ಪಾಲ್ (32) ವರ್ಷ ಘಟನೆಯಲ್ಲಿ ಮೃತಪಟ್ಟ ಲಾರಿ ಚಾಲಕನಾಗಿದ್ದಾನೆ. ಬಹಿರ್ದೆಸಿಗೆ ಹೋಗಲೆಂದು ಕಟ್ಟಡದ ಮೇಲಿರುವ ಖಾಲಿ ಡಬ್ಬಾ ತಗೆದುಕೊಂಡು ಬರಲು ಹೋದಾಗ ಕಟ್ಟಡ ಮೇಲಿಂದ ಹಾದು ಹೋಗಿರುವ ಹೈಟೆಂಶನ್ ವಿದ್ಯುತ್ ತಂತಿ ತಗುಲಿ ಘಟನೆ ಸಂಭವಿಸಿದೆ.
ಸುದ್ದಿ ತಿಳಿದ ನಗರ ಠಾಣೆ ಪೆÇಲೀಸರುÀ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಈ ಕುರಿತು ನಗರ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.