ಕಳಪೆ ನೀರಿನ ಟ್ಯಾಂಕ್ ಉರುಳಿ ಪ್ರಾಣ ಅಪಾಯದಿಂದ ಪಾರು
ಯಡ್ರಾಮಿ:ಜೂ.26:ತಾಲ್ಲೂಕಿನ ಕಾಚಾಪೂರ ಹೊಸ ಬಡಾವಣೆಯಲ್ಲಿ ಹೊಸದಾಗಿ ನಿರ್ಮಾಣ ಮಾಡಿದ ನೀರಿನ ಟ್ಯಾಂಕ್ ಉರುಳಿ ಪಕ್ಕದ ಮನೆಯವರು ಪ್ರಾಣ ಅಪಾಯದಿಂದ ಪಾರಾಗಿದ್ದಾರೆ.
ಮಂಗಳವಾರ ಸಾಯಂಕಾಲ 5 ಘಂಟೆಗೆ ಕಾಚಾಪೂರ ಗ್ರಾಮದ ಹೊಸ ಬಡಾವಣೆಯಲ್ಲಿ ಹೊಸದಾಗಿ ನಿರ್ಮಾಣ ಮಾಡಿದ ನೀರು ತುಂಬಿದ ನೀರಿನ ಟ್ಯಾಂಕ್ ನೆಲಕ್ಕೆ ಉರುಳಿದೆ.
ಈ ನೀರಿನ ಟ್ಯಾಂಕ್ ನಿಂದ ಹಳೆಯ ಗ್ರಾಮ ಹಾಗೂ ಹೊಸ ಬಡಾವಣಗೆ ನೀರು ಬರುತಿತ್ತು.ತುಂಬಿದ ನೀರಿನ ಭಾರಕ್ಕೆ ಉರುಳಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಾಮಗಾರಿ ಕಳಪೆ ಮಟ್ಟದ ಮಾಡಿದ್ದರಿಂದ ಈ ಅನಾಹುತ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಮನೆಯ ಪಕ್ಕದಲ್ಲಿ ಬಿದ್ದಿದೆ ಆದರೆ ಮನೆಯ ಮೇಲೆ ಬಿದ್ದರೆ ಹಲವಾರು ಸಾವು ಸಂಭವಿಸುತ್ತಿದ್ದವು.
ತಕ್ಷಣ ಜಿಲ್ಲಾಡಳಿತ ಕಾಮಗಾರಿ ಮಾಡಿರುವ ಗುತ್ತಿಗೆದಾರ ಹಾಗೂ ಸಂಭಂದ ಪಟ್ಟ ಇಲಾಖೆ ವಿರುದ್ಧ ಕ್ರಮ ಜರುಗಿಸಬೇಕು ಹೀಗೆ ಮುಂದುವರಿದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.