ಬಗೆ ಬಗೆಯ ಔಷಧಿಯ ಉತ್ಪಾದನೆ-ಚಿಟ್ಟೆಗಳ ಕಲರವ ಕಲ್ಯಾಣ ಕರ್ನಾಟಕದಲ್ಲೇ ತಲೆಎತ್ತಿದ ಕೋರಳ್ಳಿಯ ಮೊದಲ ಚಿಟ್ಟೆಪಾರ್ಕ
ಆಳಂದ:ಜೂ.26: ಆಳಂದ ಪಟ್ಟಣದಿಂದ ಸುಮಾರು 8 ಕಿ.ಮೀ ದೂರದ ಕೋರಳ್ಳಿ ಗ್ರಾಮ ಮಾರ್ಗದಲ್ಲಿನ ವಲಯ ಪ್ರಾದೇಶಿಕ ಅರಣ್ಯ ಇಲಾಖೆಯ ನಿರ್ಮಿಸಿದ ಸಾಲುಮರದ ತಿಮ್ಮಕ್ಕನ್ ವೃಕ್ಷೋದ್ಯಾನವನದಲ್ಲಿ ಈಗ ಮತ್ತೊಂದು ಅಪರೂಪದ ಚೆಟ್ಟೆಪಾರ್ಕ್‍ವೂ (ಪಾತ್ರಗಿತಿ), ಕಲ್ಯಾಣ ಕರ್ನಾಟಕದಲ್ಲೇ ಮೊದಲು ಮತ್ತು ಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾದರೆ, ಇದರ ಜೊತೆಯಲ್ಲೇ ಸಾರ್ವಜನಿಕ ಔಷಧಿಯ ಸಸ್ಯ ಉದ್ಯಾನವನವೂ ಕೈಗೊಂಡಿದ್ದರಿಂದ ಇದು ಸಾರ್ವಜನಿಕರಿಗೆ ಬಹುಪಯೋಗಿ ತಾಣವಾಗಿ ಗಮನ ಸೆಳೆಯುತ್ತಿದೆ.
ಚಿಟ್ಟೆ ಪಾರ್ಕ್ ಜೊತಗೇ ತನ್ನ ಆಕರ್ಷಕ ಔಷಧೀಯ ಉದ್ಯಾನವನ ಸಹ ಈ ಎರಡನ್ನೂ ವೃಕ್ಷೋದ್ಯಾನವನದಲ್ಲಿ ಪ್ರತ್ಯೇಕವಾಗಿ ನಿರ್ಮಿಸುವ ಮೂಲಕ ಪ್ರವಾಸಿಗರನ್ನು ಮತ್ತು ಸ್ಥಳೀಯರನ್ನು ಸೆಳೆಯುವಂತೆ ಮಾಡಿರುವುದು ಉದ್ಯಾನವನವು ಪ್ರಕೃತಿಯ ಸೌಂದರ್ಯವನ್ನು ಮೆರೆಸುವುದರ ಜೊತೆಗೆ ಆರೋಗ್ಯಕರ ಪರಿಸರವನ್ನು ಕಾಪಾಡಿಕೊಳ್ಳಲು ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿ ಜಗನಾಥ ಕೊರಳ್ಳಿ ಮತ್ತವರ ಸಿಬ್ಬಂದಿಗಳ ಸಾರ್ಥಕ ಶ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚಿಗೆ ವ್ಯಕ್ತವಾಗತೊಡಗಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲೇ ವಿಶೇಷ ಎನ್ನುವಂತೆ ತಾಲೂಕಿನ ಈ ಚಿಟ್ಟೆ ಪಾರ್ಕ್ ಉದ್ಯಾನವನದ ಪ್ರಮುಖ ಆಕರ್ಷಣೆಯಾಗಿ ಪರಿಣಮಿಸಿದೆ. ಇಲ್ಲಿ ಚಿಟ್ಟೆಗಳ ವಿವಿಧ ಬಗೆಯುಗಳನ್ನು ಕಾಣಬಹುದು. ಚಿಟ್ಟೆಗಳ ಪ್ರಪಂಚದೊಳಕ್ಕೆ ಪ್ರವಾಸಿಗರನ್ನು ತಂದು, ಅವರ ಜೀವನಚಕ್ರ, ಆಹಾರಪದಾರ್ಥಗಳು ಮತ್ತು ಪರಿಸರದಲ್ಲಿ ಚಿಟ್ಟೆಗಳ ಪಾತ್ರದ ಕುರಿತು ಮಾಹಿತಿ ಲಭ್ಯವಾಗಲಿದೆ. ವಿಶೇಷವಾಗಿ ಮಕ್ಕಳಿಗೆ ಚಿಟ್ಟೆಗಳ ತಾನೇ ಆಗುವ ಕವಿತ್ವದ ಅರಿವನ್ನು ನೀಡುವುದು ಪಾರ್ಕ್‍ನ ಉದ್ದೇಶವಾಗಿ ಈಗ ಎಲ್ಲ ವಯೋಮಾನದವರನ್ನು ಆಕರ್ಶಣಿಯ ಕೇಂದ್ರವಾಗಿ ಕೈಮಾಡಿ ಕರೆಯುತ್ತಿದೆ.
ಇಲ್ಲಿ ಹಮ್ಮಿಕೊಳ್ಳಲ್ಪಡುವ ಸಾಂಸ್ಥಿಕ ಕ್ರಿಯಾಕಲಾಪಗಳಲ್ಲಿ, ಪರಿಸರ ಸಂರಕ್ಷಣೆ ಕುರಿತ ಜಾಗೃತಿ ಶಿಬಿರಗಳು, ಗಿಡಗಳ ರಕ್ಷಣೆ ಮತ್ತು ಸಸಿಗಳನ್ನು ನೆಡುವ ಕಾರ್ಯಕ್ರಮಗಳು, ಮತ್ತು ಪರಿಸರ ಸಂಬಂಧಿ ವೃತ್ತಿಗಳನ್ನು ಉತ್ತೇಜಿಸುವ ಕಾರ್ಯಾಗಾರಗಳನ್ನು ನಿರಂತರವಾಗಿ ಸಾಗಿದ ಭಾಗವಾಗಿ ಇಲ್ಲಿನ ಚಿಟ್ಟೆ ಪಾರ್ಕ್ ಮತ್ತು ಔಷಧಿಯ ಉದ್ಯಾನವನ್ನ ನಿರ್ಮಿಸಿ ಗಮನ ಸೆಳೆದಿದೆ.
ಉದ್ಯಾನವನದ ಔಷಧೀಯ ಸಶೋದ್ಯಾನವನ ಮತ್ತು ಚಿಟ್ಟೆ ಪಾರ್ಕ್ ಒಂದು ತರಹದ ಪರಿಸರ ಶಿಕ್ಷಣ ಕೇಂದ್ರವಾಗಿ ಕಾರ್ಯನಿರ್ವಹಿಸಲು ಮುಂದಾಗಿದೆ. ಈ ವಿಶಿಷ್ಟ ಉದ್ಯಾನವನವು ನಗರ ಜೀವನದ ಗೊಂದಲದಿಂದ ದೂರ, ಸಸ್ಯರಾಶಿಯ ನಡುವೆ ಶಾಂತಿಯನ್ನು ಅನುಭವಿಸಲು ಉತ್ತಮ ಸ್ಥಳವಾಗಿ ಮಾರ್ಪಡಿಸಲಾಗಿದೆ.
ಔಷಧೀಯ ಸಸ್ಯಗಳ ಉದ್ಯಾನವನ: ಇಲ್ಲಿನ ಆವರಣದಲ್ಲಿ 1 ಹೆಕ್ಟೇರ್ ಮೀಸಲು ಕ್ಷೇತ್ರದಲ್ಲಿ ರಾಷ್ಟ್ರೀಯ ಔಷಧಿಯ ಸಸ್ಯಗಳ ಮಂಡಳಿ (ಎನ್.ಎಂ.ಪಿ.ಬಿ), ಅನುದಾನದಲ್ಲಿ ಸಾರ್ವಜನಿಕ ಔಷಧಿಯ ಸಸ್ಯಗಳ ಉದ್ಯಾನವ ಕೈಗೊಳ್ಳಲಾಗಿದೆ.
ಹಲವಾರು ಔಷಧೀಯ ಗಿಡಗಳನ್ನು ಬೆಳೆಸಲಾಗಿದೆ, ಉದಾಹರಣೆಗೆ ತುಳಸಿ, ನೀಲಿ ನಿಂಬೆ, ಅಶ್ವಗಂಧಾ, ಮತ್ತು ಮರಿಗೊಯ ಸೇರಿ ಹಲವು ರೀತಿಯ ಈ ಗಿಡಗಳು ತಮ್ಮ ಔಷಧೀಯ ಗುಣಗಳಿಂದ ಪ್ರಸಿದ್ಧವಾಗಿದ್ದು, ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತವೆ. ಉದ್ಯಾನವನದಲ್ಲಿ ಪ್ರತಿ ಗಿಡದ ಪಕ್ಕದಲ್ಲಿ ಅದರ ವಿಜ್ಞಾನನಾಮ, ಉಪಯೋಗಗಳು ಮತ್ತು ಅದರ ಅರೋಗ್ಯಕ್ಕೆ ನೀಡುವ ಲಾಭದ ಕುರಿತು ಮಾಹಿತಿ ಫಲಕಗಳನ್ನು ಅಳವಡಿಸಿ ಮಾಹಿತಿ ಕೇಂದ್ರವಾಗಿದೆ.
ಟ್ರೀ ಪಾರ್ಕ್: 15 ಎಕರೆ ಪ್ರದೇಶದಲ್ಲಿರುವ ಈ ಸಾಲುಮರದ ತಿಮ್ಮಕ್ಕನ ವೃಕ್ಷೋದ್ಯಾನವು 107 ಜಾತಿಯ ಸಸಿಗಳ ನೆಡುತೋಪವು ನಿರ್ಮಿಸಿದ್ದು, ನೋಡುಗರ ಆಕರ್ಶಿಸುತ್ತಿದೆ. ಈ ಸಾಲಿನಲ್ಲಿ ಪರಿಸರ ಮತ್ತು ನಿಸರ್ಗ ಪ್ರೀಯರಿಗೆ ಹೇಳಿಮಾಡಿಸಿದಂತೆ ಚಿಟ್ಟೆ ಪಾರ್ಕ್ ಮತ್ತು ಸಾರ್ವಜನಿಕ ಔಷಧಿಯ ಸಸ್ಯ ಉದ್ಯಾನವನ ನಿಸರ್ಗದ ಅನುಭವ ಹಂಚಿಕೊಳ್ಳಲು ಅನುಕೂಲಕಲ್ಪಸಿದೆ.
ವೃಕ್ಷೋದ್ಯಾನಕ್ಕೆ ಸೌಲಭ್ಯ:
ಸಂತಷದ ತಾಣ:
ಬಯಲು ಪ್ರದೇಶದಲ್ಲಿ ನಿರ್ಮಿಸಿದ ಉದ್ಯಾನವನ ವಿವಿಧ ಜಾತಿಯ ಗಿಡ, ಮರ ಹೂವು ಹಣ್ಣಿನ ಗಿಡಗಳು ಕೂಡಿದ ಉದ್ಯಾನವನಕ್ಕೆ ಬರುವ ಮಕ್ಕಳನ್ನು ಪರಿಸರ ಪ್ರೇಮಿಗಳನ್ನು ಉಲ್ಲಾಸಭರತವಾಗಿ ಆನಂದ ಒದಗಿಸುವ ತಾಣವಾಗಿದೆ. ಅಧಿಕಾರಿಗಳ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳ ಶ್ರಮದಿಂದಾಗಿ ಒಳ್ಳೆಯ ಕಾರ್ಯವಾಗಿದ್ದು ಇÀದನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಉದ್ಯಾನವಕ್ಕೆ ಬರುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸ್ವಚ್ಛತೆ ಜೊತೆಗೆ ಅವ್ಯವಸ್ಥೆಗೆ ಅವಕಾಶ ನೀಡದಂತೆ ನೋಡಿಕೊಳ್ಳಬೇಕು. ಚುನಾಯಿತ ಪ್ರತಿನಿಧಿಗಳು ಹೆಚ್ಚಿನ ಅಭಿವೃದ್ಧಿಗೆ ಅನುದಾನ ಒದಗಿಸಬೇಕು.
ಔಷಧಿಯ ಸಸ್ಯಲೋಕದಲ್ಲಿ ಚಿಟ್ಟೆಗಳ ಕಲರವ:
ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಭಾಗದಲ್ಲೇ ವಿಶೇಷ ಎನ್ನುವಂತೆ ಚಿಟ್ಟೆಪಾರ್ಕ್ ನಿರ್ಮಿಸಲಾಗಿದೆ. ಇಲ್ಲಿ ಬಣ್ಣ ಬಣ್ಣದ ಚಿಟ್ಟೆಗಳ ಲೋಕ ಸೃಷ್ಟಿಯಾಗಿದೆ. ಜೊತೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ನೂರಾರು ಜಾತಿಯ ಔಷಧಿಯ ಸಸ್ಯ ಒಳಗೊಂಡ ಉದ್ಯಾನವನ್ನ ಕೈಗೊಂಡಿದ್ದು ಇದರಿಂದ ಉದ್ಯಾನವನದ ಗರಿಹೆಚ್ಚಾಗಿ ಪ್ರವಾಸಿಗರನ್ನು ಆಕರ್ಶಿತವನ್ನಾಗಿ ಮತ್ತು ಅವರಿಗೆ ಅನುಕೂಲ ಕಲ್ಪಿಸುವ ಉದ್ದೇಶ ಇದಾಗಿದೆ.
ಜಗನಾಥ ಕೊರಳ್ಳಿ ಆರ್‍ಎಫ್‍ಒ ಆಳಂದ.