ಜಿಂದಾಲ್ ಅಪಘಾತದ  ಸತ್ಯ ಹೊರಹಾಕಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.26: ಜಿಲ್ಲೆಯ ತೋರಣಗಲ್ಲಿನ ಜಿಂದಾಕ್ ಉಕ್ಕು ಕಾರ್ಖಾನೆಯಲ್ಲಿ ಕಳೆದ  ಮೇ 9 ರಂದು ಎಸ್ ಹೆಚ್ ಎಂ 3  ಪ್ಲಾಟ್ ನಲ್ಲಿ ಸಂಭವಿಸಿದ  ಅಪಘಾತದಲ್ಲಿ ಮೂರು ಜನ ಸಾವನ್ನಪ್ಪಿದ ಪ್ರಕರಣದ  ತನಿಖೆ  ನಡೆಸಿ ಸತ್ಯವನ್ನು ಬಹಿರಂಗ ಪಡಿಸಲು ಒತ್ತಾಯಿಸಿ.  ಮೃತ ನೌಕರರ ಕುಟುಂಬದ ಪಾಲಕರು ಜಿಂದಾಲ್ ಗೇಟ್ ನ ಮುಂದೆ ನಿನ್ನೆ  ಪ್ರತಿಭಟನೆ ನಡೆಸಿದರು.
ಮೃತ ಯುವ ಶಿವಮಗದೇವ್ ಅವರ ತಂದೆ ಜಿ. ಮಣಿ, ತಾಯಿ ಆನಂದಿಮಣಿ,  ಸುಶಾಂತ್ ಕೃಷ್ಣ ಅವರ ತಂದೆ ಮಹೇಶ್ವರ ತಾಯಿ ಫಣಿಕುಮಾರಿ ಅವರು    ಜಿಂದಾಲ್ ನ  ಮುಖ್ಯ ದ್ವಾರದ ಮುಂದೆ ಪ್ರತಿಭಟಸಿದರು.
ನಮಗೆ ನ್ಯಾಯ ಬೇಕು, ಅಪಘಾತ ಕುರಿತು ಸತ್ಯ ಹೊರ ಬರಬೇಕು ಘಟನೆ ನಡೆದು 45 ದಿನಗಳ ಕಳೆದರೂ ಅಪಘಾತಕ್ಕೆ ಕಾರಣರಾದವರ ಬಗ್ಗೆ  ಜೆ ಎಸ್ ಡಬ್ಲ್ಯೂ ಆಡಳಿತ ಮಂಡಳಿ ದೀರ್ಘ ಮೌನವನ್ನು ಪ್ರಶ್ನಿಸಿ ನ್ಯಾಯ ಬೇಕೆಂದು ಬ್ಯಾನರನ್ನು ಹಿಡಿದು ನಿಂತಿದ್ದರು.
ಆಡಳಿತ ಮಂಡಳಿಯ ನಿರ್ಲಕ್ಷತೆಯಿಂದ ಈ ಅಪಘಾತ ಸಂಭವಿಸಿದರೂ ಮೃತರ ಮೇಲೆ ಇಲ್ಲಸಲ್ಲದ ಸುಳ್ಳು ಹೇಳುವದು, ಮೃತರ ಬಗ್ಗೆ ಅಪಪ್ರಚಾರ ಮಾಡುವದು ನಮಗೆ ಬೇಸರ ಮತ್ತು ದುಃಖ ತಂದಿದೆ.
ಮೃತರ ಮೊಬೈಲ್ ಗಳು ಪತ್ತೆಯಾಗಿಲ್ಲ. ಕೇಸ್ ದಾಖಲಿಸಿ ಅರೋಪಿಗಳನ್ನು ಬಂದಿಸಿಲ್ಲ ಎಂದು ಅವರು ತಮ್ಮ ಅಕ್ರೋಶವನ್ನು  ಹೊರ ಹಾಕಿದರು.  ಜೆಎಸ್‌ಡಬ್ಲ್ಯೂ ಅಧಿಕಾರಿಗಳು ಪ್ರತಿಭಟನೆ ಹತ್ತಿಕ್ಕಲು ಪರದಾಡತ್ತಿದ್ದರು
ಕುಟುಂಬದವರ ಜೊತೆಗೆ ಬೆಂಬಲಿಸಿ. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ. ಜೆ .ಎಂ. ಚನ್ನಬಸವಯ್ಯ. ಸಿಐಟಿಯು. ಸಂಡೂರು ತಾಲೂಕು ಸಂಚಾಲಕ ಎ. ಸ್ವಾಮಿ. ಡಿವೈಎಫ್ಐ ಜಿಲ್ಲಾ ಸಮಿತಿ ಮುಖಂಡರು ಇದ್ದರು.