ಹಬೋಹಳ್ಳಿ : ಮಳೆಗಾಗಿ ಪ್ರಾರ್ಥಿಸಿ ದೇವಸ್ಥಾನಗಳಿಗೆ ಜಲಾಭಿಷೇಕ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜೂ.26 ಪಟ್ಟಣದ ರಾಮನಗರ ರೈತರ ಓಣಿ ಹಾಗೂ ನಾಣಿಕೇರಿ ದೈವಸ್ಥರು ಯುವಕರು ಮಳೆಗಾಗಿ ಪ್ರಾರ್ಥಿಸಿ ಮಂಗಳವಾರ ಬೆಳಗಿನ ಜಾವ ಎಲ್ಲಾ ದೇವಸ್ಥಾನಗಳಿಗೆ ತೆರಳಿ ಕೊಡದಿಂದ ನೀರಿನ ಅಭಿಷೇಕ ನೆರವೇರಿಸಿದರು
 ಆರಂಭದಲ್ಲಿ ಮಳೆ ಚೆನ್ನಾಗಿ ಆಗಿತ್ತು. ರೈತರು ತಮ್ಮ ಹೊಲಗಳಲ್ಲಿ ಬೀಜ ಬಿತ್ತಿ ಬೆಳೆ ಬೆಳೆಯುವ ಸಂದರ್ಭದಲ್ಲಿ ಮಳೆ ಕೈಕೊಟ್ಟಿರುವುದರಿಂದ ಬೆಳೆಗಳು ಮಾಡುತ್ತಿರುವುದನ್ನು ನೋಡಿ ರೈತರು ಆತಂಕದಲ್ಲಿದ್ದಾರೆ. ಸದ್ಯಕ್ಕೆ ಮಳೆಯಾದರೆ ಮಾತ್ರ ಬೆಳೆಗಳು ಉಳಿಯಲು ಸಾಧ್ಯ. ಆದ್ದರಿಂದ ಈ ಭಾಗದ ರೈತರು ಯುವಕರು ದೇವರಿಗೆ ಮೊರೆ ಹೋಗಿದ್ದಾರೆ. ಪಟ್ಟಣದ ಪತ್ರಿ ಬಸವೇಶ್ವರ  ಈಶ್ವರ ವೆಂಕಟೇಶ್ವರ ಆಂಜನೇಯ ದುರ್ಗಮ್ಮ ಮಾರಮ್ಮ ಸೇರಿದಂತೆ ಎಲ್ಲಾ  ದೇವಸ್ಥಾನಗಳಿಗೆ ನೀರಿನ ಅಭಿಷೇಕ ಮಾಡುವ ಮೂಲಕ ಭಕ್ತಿ ಸಮರ್ಪಿಸಲಾಗಿದೆ ಎಂದು ಸರ್ದಾರ್ ಯಮನೂರಪ್ಪ ತಿಳಿಸಿದ್ದಾರೆ.
 ಈ ಸಂದರ್ಭದಲ್ಲಿ ಅರಸೀಕೆರೆ ಹನುಮಂತಪ್ಪ, ಗಾಳೆಪ್ಪ ರಾಮಚಂದ್ರಪ್ಪ  ಬಾಪೂಜಿ ಅಶೋಕ ಓಕೆ ಹುಲುಗಪ್ಪ ರಾಮಣ್ಣ ಪರಶುರಾಮ ಸೇರಿದಂತೆ ನೂರಾರು ಯುವಕರು ಭಾಗವಹಿಸಿದ್ದರು.