ಜಿಲ್ಲೆಯಲ್ಲಿ ವೀರಶೈವ ಮಹಾಸಭೆಗೆ ಶಾಶ್ವತ ನೆಲೆ ಬೇಕು
ಎನ್.ವೀರಭದ್ರಗೌಡ
ಬಳ್ಳಾರಿ:ಜೂ,26- ವೀರಶೈವ ಲಿಂಗಾಯತ ಸಮುದಾಯದ ಜಾಗೃತಿ‌ ಮತ್ತು ಸಂಘಟನೆ ಕಾರ್ಯನಡೆಸುತ್ತ ಸಮುದಾಯದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಗೆ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಶಾಶ್ವತವಾದ ನೆಲೆ ಬೇಕಾಗಿದೆ.
ಮಹಾಸಭಾ ಹಲವು ದಶಕಗಳಿಂದ ಕಾರಗಯನಿರ್ವಹಿಸುತ್ತಿದೆ. ಆದರೆ ಕಳೆದ ಐದು ವರ್ಷಗಳ ಹಿಂದಿನವರೆಗೆ ಕೇವಲ ಕೆಲ ಸದಸ್ಯರ ಬಳಗದಿಂದ ವರ್ಷಕ್ಕೆ ಒಂದು ಪ್ತಿಭಸ ಪುರಸ್ಕಾರ ಸಮಾರಂಭ ನಡೆಸಿ ಸುಮ್ಮನಾಗುತ್ತಿತ್ತು.
ಆಗಾಗ್ಗೆ ಚುನಾವಣೆ ನಡೆದಾಗ  ಕೊಟ್ಟೂರು ಸ್ವಾಮಿ ಮಠದಲ್ಲಿ  ಸಭೆ ನಡೆಸಿ ತಮಗೆ ಬೇಕಾದವರನ್ನೇ ಆಯ್ಕೆ ಮಾಡಿಕೊಳ್ಳುವ ಪದ್ದತಿ ಇತ್ತು.
ಆದರೆ ಕಳೆದ ಚುನಾವಣೆ ವೇಳೆಗೆ ಅಖಂಡ ಜಿಲ್ಲೆಯಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ನಡೆಸಿ ನೂರಲ್ಲಿ ಇದ್ದ ಸದಸ್ಯರ ಸಂಖ್ಯೆಯನ್ನು ಸಾವಿರದ ಮೇಲೆ ಮಾಡಲಾಯ್ತು.  ಚುನಾವಣೆ ನಡೆಯಿತು ಎರೆಡು ಗುಂಪುಗಳು ಸ್ಪರ್ಧೆ ಮಾಡಿದರು. ಚಾನಾಳ್ ಶೇಖರ್ ಗುಂಪು ಪೂರ್ಣ ಪ್ರಮಾಣದಲ್ಲಿ ಆಯ್ಕೆಯಾಯ್ತು.
ಅಂದಿನಿಂದ ಹಲವು ಕಾರ್ಯಕ್ರಮ ಮಾಡಿದೆಯಾದರೂ ಗಮನಾರ್ಹವಾದುದಲ್ಲ.  ಈಗಾಗಲೇ ಬಹುತೇಖ ಜಿಲ್ಲೆಗಳಲ್ಲಿ ಮಹಾಸಭೆಗೆ ಶಾಶ್ವತ ಕಟ್ಟಡ ಕಚೇರಿಯನ್ನು ಹೊಂದಲಾಗಿದೆ.  ರಾಜ್ಯದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಈ ಜಿಲ್ಲೆಯಲ್ಲಿ ಮತ್ತು ತಾಲೂಕುಗಳಲ್ಲಿ ಶಾಶ್ವತ ನೆಲೆ ಇಲ್ಲದಾಗಿದೆ. ಇದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆದಿದೆ. ಮಹಾಸಭೆಗೆ ಎರೆಡು ಎಕರೆ ಜಮೀನು ಪಡೆಯಲು. ಇದು ನಗರದ ಹೊ್ ವಲಯದಲ್ಲಿ ಆಗಬಹುದು. ಆದರೆ ನಗರದಲ್ಲಿಯೇ ಬುಡಾದಿಂದ ಕಚೇರಿ ನಿರ್ಮಿಸಲು ನಿವೇಶನ ಪಡೆದು ಕಚೇರಿ ಕಟ್ಟಡ ಮಾಡುವ ಅವಶ್ಯಕತೆ ಇದೆ.
ನಗರದಲ್ಲಿ ಕಚೇರಿಯನ್ನು ತೆರೆಯಲು ತಾತ್ಕಾಲಿಕವಾಗಿ ಕೊಟ್ಟೂರು ಸ್ವಾಮಿಗಳ ಮಠದಲ್ಲಿ ಅವಕಾಶ ನೀಡಿದೆ. ತಾಲೂಕು ಮಟ್ಟದಲ್ಲಿ ಕಚೇರಿ ವಿಳಾಸಗಳೇ ಇಲ್ಲ. ಆದರೆ ತಾಲೂಕು ಸಮಿತಿಗಳಿಗೆ ಚುನಾವಣೆ ನಡೆಸಲು ಮುಂದಾಗಿದೆ. ಅನೇಕ ಸಂಘ ಸಂಸ್ಥೆಗಳು ತಾಲೂಕು ಮಟ್ಟದಲ್ಲೂ ತಮ್ಮ ಕಚೇತಿಗಳ ಮೂಲಕ ಸಮುದಾಯದ ಸಂಘಟನೆ ಮಾಡುವಾಗ ರಾಜ್ಯದ ಬೃಹತ್ ಸಮುದಾಯವಾದ ವೀರಶೈವ ಲಿಂಗಾಯತ ಸಂಘಟನೆ ಈ ಕೆಲಸವನ್ನೂ ಈಗಾಗಲೇ ಮಾಡಬೇಕಿತ್ತು.
ಕೇವಲ ಚುನಾವಣೆ ದೃಷ್ಟಿ, ರಾಜಕೀಯದ ದೂರದೃಷ್ಟಿಯಿಂದ ಸದಸ್ಯತ್ವದ ಪ್ರಮಾಣವನ್ನು ಹೆಚ್ಚಿಸಿದರಷ್ಟೇ ಸಾಲದುಹಾಸಭಾಗೆ ಶಾಶ್ವತ ನೆಲೆ ಮಾಡಿ, ಸಮುದಾಯದ ಮಕ್ಕಳ ಶಿಕ್ಷಣ ಅಭಿವೃದ್ದಿಗೆ ಶ್ರಮಿಸುವ ಕೆಲಸ ಮೊದಲು ಆಗಬೇಕಿದೆ.
One attachment • Scanned by Gmail