ಅಧ್ಯಯನದ ಜೊತೆಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ
ಗುಳೇದಗುಡ್ಡ,ಜೂ.26: ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳಸಿಕೊಂಡು, ದೇಶದ ಸತ್ಪ್ರಜೆಗಳಾಗಿ ದೇಶಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದು ಎಸ್. ಆರ್. ವಸ್ತ್ರದ ರೂರಲ್ ಪಾಲಿಟೆಕ್ನಿಕ್‍ನ ಜವಳಿ ವಿಭಾಗದ ಮುಖ್ಯಸ್ಥ ಜಿ ಜೆ ಹಳ್ಳಿ ಹೇಳಿದರು.
ಅವರು ಇಲ್ಲಿನ ಎಸ್. ಆರ್. ವಸ್ತ್ರದ ರೂರಲ್ ಪಾಲಿಟೆಕ್ನಿಕ್‍ನಲ್ಲಿ ಪ್ರಥಮ ಸೆಮೆಸ್ಟರನ ಎಲ್ಲ ವಿಭಾಗಗಳ ವಿದ್ರ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಇಂಡಕ್ಷನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ವಿಜ್ಞಾನ ವಿಭಾಗದ ಮುಖ್ಯಸ್ಥ ಎಚ್.ಎಲ್. ನಾಯ್ಕರ್ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿಯಾಗಲು ಕಠಿಣ ಪರಿಶ್ರಮ, ಶಿಸ್ತು, ಶ್ರದ್ದೆ ಹಾಗೂ ತಾಳ್ಮೆಯಿಂದ ಅಧ್ಯಯನ ಮಾಡಬೇಕು ಎಂದರು
ಇ ಹಾಗೂ ಸಿ ವಿಭಾಗದ ಮುಖ್ಯಸ್ಥ ಎಮ್ ವಾಯ್ ಗೌಡರ, ಮಾತನಾಡಿದರು. ಜಿ ವಿ ರಾಂಪೂರ ಇವರು ಕಛೇರಿ ಬಗ್ಗೆ ಮಾಹಿತಿ ನೀಡಿದರು.
ಉಪನ್ಯಾಸಕರಾದ ಎಸ್.ಎಚ್. ಮೇಡಿ, ಎಸ್.ಜಿ, ರಾಮೇನಹಳ್ಳಿ, ಸಂಗಮೇಶ ಗೊಬ್ಬಿ, ಪರಶುರಾಮ ಮೇಘರಾಜ, ಸುರೇಶ ರಾಜನಾಳ, ಶಶಿಕಾಂತ ಮೆಗೆನ್ನಿ, ಆರ್.ಎಸ್.ದೊಡಮನಿ ಹಾಗೂ ಸಂಸ್ಥೆಯ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.