ನರಕ ಸದೃಶ್ಯ ಜೀವನವೆಂದರೆ ತುರ್ತು ಪರಿಸ್ಥಿತಿಯ ದಿನಗಳು: ಸುರೇಶ್ ಕುಮಾರ್
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.26: ನರಕ ಸದೃಶ್ಯದ ಜೀವನ ಎಂದರೆ ಬೇರೆ ಏನೂ ಅಲ್ಲ. ಈ ದೇಶದಲ್ಲಿ ಪ್ರಧಾನಿಯಾಗಿ ಅಧಿಕಾರದ ದಾಹಕ್ಕಾಗಿ ಸಂವಿಧಾನವನ್ನೇ ಬಲಿಕೊಟ್ಟ ಇಂದಿರಾಗಾಂಧಿ ಅವರು ವಿಧಿಸಿದ್ದ ತುರ್ತು ಪರಿಸ್ಥಿಯಲ್ಲಿ ಜೈಲಿನಲ್ಲಿ ಪೊಲೀಸರು ಕೊಟ್ಟ ಶಿಕ್ಷೆ ಎಂದು ಮಾಜಿ  ಸಚಿವ ಸುರೇಶ್ ಕುಮಾರ್ ಹೇಳಿದರು.
ಅವರು ಬಾಲ ಭಾರತಿ ಶಾಲೆಯಲ್ಲಿ ತುರ್ತು ಪರಿಸ್ಥಿತಿ ಬಗ್ಗೆ ಮಾತನಾಡುತ್ತಿದ್ದರು. ತಾವು ತುರ್ತು ಪರಿಸ್ಥಿಯಲ್ಲಿ 14 ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. 1974 ರಲ್ಲಿ ಗುಜರಾತಿನ ಸೂರತ್ ನ ಹಾಸ್ಟಲ್ ಒಂದರಲ್ಲಿ ಅಡುಗೆ ಚೆನ್ನಾಗಿಲ್ಲ ಎಂಬ ಘಟನೆ. ಆಗ  ಚಿಮಣ್ ಬಾಯಿ‌ಪಾಟೀಲ್ ಸಿಎಂ ಆಗಿದ್ದರು. ಈ ಘಟನೆ ಬೆಳೆದು ಅವರ ಪದವಿಯನ್ನೇ ಬಲಿ ತೆಗೆದುಕೊಂಡಿತು.
ನಂತರ್ ಬಿಹಾರ್ ದಲ್ಲಿನ ವಿದ್ಯಾರ್ಥಿಗಳ ಹೋರಾಟದಿಂದ ಆ ರಾಜ್ಯದ ಸಿಎಂ ಸಹ ಅಧಿಕಾರ ಕಳೆದುಕೊಂಡರು. ಇದೆಲ್ಲ ನಡೆಯುತ್ತಿದ್ದುದು. ಜೆಪಿ ಚಳುವಳಿ ಮೂಲಕ.
ಜೂನ್ 12 1975  ಅಲಹಬಾದ್ ನ್ಯಾಯಾಲಯದ   ಜೆ.ಎನ್.ಸಿಂಹಾ ಅವರು ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಭ್ರಷ್ಟಾಚಾರ ಮಾಡಿದ್ದಾರೆಂದು. ಪ್ರಧಾನಿಯಾಗಬಾರದು ಮತ್ತು ಆರು ವರ್ಷಗಳ‌ಕಾಲ ಚುನಾವಣೇ ನಿಲ್ಲುವಂತಿಲ್ಲ ಎಂಬುದು. ಗುಜರಾತಿನಲ್ಲಿ ಜನಸಂಘ ಅಧಿಕಾರಕ್ಕೆ ಬಂದಿದ್ದೇ ತುರ್ತುಪರಿಸ್ಥಿತಿ ತರಲು ಇಂದಿರಾ ಅವರು ತಮ್ಮ  ಸುತ್ತಮುತ್ತಲಿನ ವಂದಿ ಮಾಗಧರ ಮಾತುಕೇಳಿ ಮುಂದಾದರು.
ಈ ನಡುವೆ ಸುಪ್ರೀಂಕೋರ್ಟ್ ಇಂದಿರಾ ಅವರು ಪ್ರಧಾನಿಯಾಗಲು ಅನುಮತಿಸಿತು. ಇದರಿಂದಾಗಿ ಮೊದಲು ತುರ್ತುಪರಿಸ್ಥಿತಿ ತಂದು ನಂತರ ರಾಷ್ಟ್ರಪತಿಗಳಿಂದ ಘೋಷಣೆ ಮಾಡಿತ್ತು. ಕಾಂಗ್ರೆಸ್ ಮತ್ತು ಇಂದಿರಾ ಅವರು ರಾಷ್ಟ್ರಪತಿ ಭವನವನ್ನು ದುರ್ಬಳಕೆ ಮಾಡಿಕೊಂಡಿದ್ದರೆಂದರು.
ನಾನು ಬೆಂಗಳೂರು ವಿವಿಯಲ್ಲಿ ಕಾನೂನು ಪದವಿ‌ಪಡೆದರೂ ನನಗೆ ನಿಜವಾದ ಶಿಕ್ಷಣ ದೊರೆತಿದ್ದು ತುರ್ತು ಪರಿಸ್ಥಿಯಲ್ಲಿ ಜೈಲುವಾಸದಿಂದ. ಕಾರಣ ದೇಶದ ಅನೇಕ ಗಣ್ಯಮಾನ್ಯರ ಸಂಪರ್ಕದಿಂದ ಎಂದರು.
ಜಾರ್ಜ್ ಪರ್ನಾಂಡೀಸ್ ಅವರ ಸಹೋದರ ಲಾರೆನ್ಸ್ ಅವರಿಗೆ ಸತತ 20 ದಿನ ಕಂಬಳಿ‌ಹುಳದ ಮೂಲಕ ಚಿತ್ರ ಹಿಂಸೆ ನೀಡಿದ್ದರು. ಇನ್ನು ಕೇಂದ್ರದ ಮಾಜಿ ಸಚಿವ ಸುಬ್ರಹ್ಮಣ್ಯಂ ಸ್ವಾಮಿ ಅವರ ವಕಾಲತ್ ಮೂಲಕ ಪ್ರಜಾಪ್ರಭುತ್ವ ಸತ್ತು ಹೋಗಿದೆಂದಿದ್ದರು.
ದೇಶದಲ್ಕಿ ಯಾರು ಸಹ ಸತ್ಯ ಮಾತನಾಡುವಂತಿರಲಿಲ್ಲ. ಸಂವಿಧಾನದ ದುರ್ಬಳಕೆ ಈ ಸಂದರ್ಭದಲ್ಲಿ ಆಗಿದ್ದನ್ನು ಯಾರೂ ಮರೆಯುವಂತಿಲ್ಲ ಎಂದರು. ಅಂದು ಪ್ರಧಾನಿಯಾಗಿದ್ದ ಇಂದಿರಾ ಅವರ ಸರ್ವಾಧಿಕಾರ ಹೇಗಿತ್ತು ಎಂದರೆ ಸತ್ಯ ಹೇಳಿದ. ತಮ್ಮದೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಚಂದ್ರಶೇಖರ್ ಅವರನ್ನು ಸಃ ಬಂಧಿಸಿದ್ದರು.
ತುರ್ತು ಪರಿಸ್ಥಿತಿ ಮೂಲಕ ದೇಶದಲ್ಲಿ ಜನತೆಯನ್ನು ಸಂಕಷ್ಟಕ್ಕೆ ದೂಡಿದ ಇಂದಿರಾ ಅವರ ವಂಶ  ಇಂದಿಗೂ ದೇಶದ ಕ್ಷಮೆ ಕೇಳಿಲ್ಲ.  ಆದರೂ ಬಿಜೆಪಿ ಬಂದರೆ ಸಂವಿಧಾನ ಬದಲಾವಣೆ ಎಂಬ ಕೂಗು ಕೂಗುತ್ತಿದೆ ಕಾಂಗ್ರೆಸ್ ಅದು ಆಗದು. ನಮ್ಮ ದಾನ ದ್ದರೂ ಸಬ್ಕಾ ಸಾಥ್ ಸಬ್ ಕ ವಿಕಾಸ್ ಎಂಬುದಾಗಿದೆ. ಕಾಂಗ್ರೆಸ್ ನ ಹುನ್ನಾರಕ್ಕೆ ಕಿವಿಗೊಡಬೇಡಿ.
ಚುನಾವಣೆಗೋಸ್ಕರ ಸಂವಿಧಾನ ಬದಲಾವಣೆಯ ಸುಳ್ಳುಗಾಳಿ ಬೀಸುವುದು ಬೇಡ. ಸಂವಿಧಾನದ ನಿಜವಾದ ವಿರೋದಿಗಳು ಯಾರು ಎಂಬುದನ್ನು ತಿಳಿಸೋಣ ಎಂದರು.‌
ಪೂರ್ಣಾನಂದ ಶ್ರೀಗಳು ಮಾತನಾಡಿ, ಓದು, ಓಡಾಟ, ವಾಕ್ ಸ್ವಾತಂತ್ರ್ಯವನ್ನು ತುರ್ತು ಪರಿಸ್ಥಿತಿಯಿಂದ ಕಳೆದುಕೊಂಡಿತ್ತು. ರಾಜಕೀಯವಾಗಿ ಅಷ್ಟೇ ಅಕ್ಕ ಮಾನಸಿಕವಾಗಿಯೂ ತುರ್ತುಪರಿಸ್ಥಿತಿ ದೇಶದ ಜನರಿಗೆ ಸಂಕಟ ತಂದಿತ್ತು.  ಸಂವಿಧಾನ ಬದಲಾವಣೆ ಆಗದು‌ ಬದಲಾವಣೆ ಮಾತ್ರ ಸಾಧ್ಯ. ನಾವೆಲ್ಲ ಕಾನೂನಿನ ಅರಿವು ಹೊಂದಬೇಕು ಎಂದರು.