ಸಂಡೂರು ತಾಲೂಕಿನ ಗಡಿಗ್ರಾಮಗಳಿಗೆ ಬಸ್ ಸೌಲಭ್ಯಕ್ಕೆ ಮನವಿ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.26: ಜಿಲ್ಲೆಯ ಸಂಡೂರು ತಾಲ್ಲೂಕಿನ ಗಡಿ ಗ್ರಾಮಗಳಾದ ಎಂ.ಬಸಾಪುರ ಗುಂಡ್ಲಹಳ್ಳಿ ರಾಮಸಾಗರ ಲಕ್ಕಲಹಳ್ಳಿ ಈ ನಾಲ್ಕು ಗ್ರಾಮಗಳಿಗೆ ಬಸ್ಸಿಲ್ಲದೆ ದಶಕಗಳೇ ಕಳೆದಿವೆ. ವಿದ್ಯಾರ್ಥಿಗಳು ಸುಮಾರು ವರ್ಷಗಳಿಂದ ಬಸ್ಸಿಗಾಗಿ ಮನವೀಯ ಅರ್ಜಿಗಳನ್ನು ಕೊಡುತ್ತಿದ್ದಾರೆ, ಆದರೆ ಅಧಿಕಾರಿಗಳು ಅವುಗಳನ್ನ ತೆಗೆದುಕೊಂಡು ಯಾವುದೋ ಮೂಲೆಲು ಹಾಕುತ್ತಿದ್ದಾರೆ. ಪ್ರತಿ ವರ್ಷ ಇದೇ ರೀತಿ ನಡಿಯುತ್ತಿದೆ. ಆದರೆ ಯಾವುದೇ ಭರವಸೆ ಕೊಡುತ್ತಿದ್ದಿಲ್ಲ. ಸಂಡೂರುನಲ್ಲಿ ಕೇಳಿದರೆ ಬಳ್ಳಾರಿಗೆ, ಬಳ್ಳಾರಿಯಲ್ಲಿ ಕೇಳಿದರೆ ಹೊಸಪೇಟೆ, ಅಂತ ವಿದ್ಯಾರ್ಥಿಗಳನ್ನು ಮತ್ತು ಸಾರ್ವಜನಿಕರನ್ನು ಅಲೆಸುತ್ತ ಕಳುಸಿತ್ತಿದ್ದರು. ಆದರೆ ಇಂದು ಮತ್ತೆ ಮನವಿಗಳನ್ನ ಕೊಟ್ಟು ” ದಯವಿಟ್ಟು ಸರ್ ನಾವು ವಿದ್ಯಾರ್ಥಿಗಳು ನಮ್ಮ ನಮ್ಮ ಊರುಗಳಿಗೆ ಹೋಗುವುದಕ್ಕೆ ಬರುವುದಕ್ಕೆ ತುಂಬಾ ಸಮಸ್ಯೆಯಾಗುತ್ತಿದೆ. (ಆಂಧ್ರಪ್ರದೇಶ) ಡಿ. ಹಿರೇಹಾಳ್ ವರೆಗೂ ಖಾಸಗಿ ಬಸ್ಗಳಲ್ಲಿ ಅಲ್ಲಿಂದ 8 ಕಿಲೋ ಮೀಟರ್ ಗೆ ಗಾಡಿಗಳಿಗೆ ಅಥವಾ ಟೆಂಪೊಗಳಿಗೆ ಕೈ ಮಾಡಿದರೆ ಮತ್ತೆ ಕೆಲವು ಸಮಯದಲ್ಲಿ ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ. ದಯವಿಟ್ಟು ನಮಗೆ ಮಧ್ಯಾಹ್ನದ ಸಮಯದಲ್ಲಿ ನಮ್ಮ ಗ್ರಾಮಗಳಿಗೆ ಬಸ್ಸನ್ನ ಕಲ್ಪಿಸಿ ಎಂದು ಗ್ರಾಮಗಳ ಮತ್ತು ವಿದ್ಯಾರ್ಥಿಗಳ ಪರವಾಗಿ ಚಂದ್ರಶೇಖರ್ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.
“ನಮಗೆ 15 ದಿನಗಳ ಸಮಯ ಕೊಡಿ ದಯವಿಟ್ಟು ಬಸ್ಸಿನ ವ್ಯವಸ್ಥೆ ಕಲ್ಪಿಸಿ ಕೊಡುತ್ತೇವೆ. ನಿಮ್ಮ ತೊಂದರೆ ನಮಗೆ ಗೊತ್ತು. ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ನಿಮಗೆ ನಿಮ್ಮ ಗ್ರಾಮಗಳಿಗೆ ಬಸ್ ಬಿಡಿಸುತ್ತೇವೆ ಎಂದು ಇನಾಯತ್ ಬಗ್ಬನ್  ಜಿಲ್ಲಾಧಿಕಾರಿಗಳು ಕಲ್ಯಾಣ ಕರ್ನಾಟಕ ರಸ್ತೆಸಾರಿಗೆ ಅಧಿಕಾರಿಗಳು ತಿಳಿಸಿದರು.
ಮನವಿಯಲ್ಲಿ ಊರಿನವರಾದ ಹುಚ್ಚಪ್ಪ ಅಂಡಿಗೆರ್ ವಿದ್ಯಾರ್ಥಿಗಳಾದ ನಟರಾಜ್ ಶಿವರಾಜ್ ವಸಂತ ದೇವರಾಜ್ ಶ್ರೀರಾಮ್ ಮುಂತಾದವರು ಇದ್ದರು.