ಕೆ ಜಗದೀಶ್, ಎ.ಎಂ.ಪಿ ವೀರೇಶಸ್ವಾಮಿ ಗೆ ಸಾಹಿತ್ಯ ಸಾಮ್ರಾಟ್ ಚಂಪಾ ಪ್ರಶಸ್ತಿ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.26:  ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಕುಡುದರ ಹಾಳು ಗ್ರಾಮದಲ್ಲಿ ತಾಯಮ್ಮದೇವಿ ಜನಸೇವಾ ಹಾಗೂ ಸಾಂಸ್ಕೃತಿಕ ಕಲಾ ಟ್ರಸ್ಟ್ ಇವರು ಆಯೋಜಿಸಿದ ಪಂಡಿತ ಪಂಚಾಕ್ಷರಿ ಗವಾಯಿ, ಪಂಡಿತ ಪುಟ್ಟರಾಜ ಕವಿ ಗವಾಯಿ,ಹಾಗೂ ಯಲಿವಾಳ ಸಿದ್ಧಯನವರ ಜಾತ್ರಾ ಮಹೋತ್ಸವದ ಅಂಗವಾಗಿ ಕವಿ ಹಾಗೂ ಕಲಾವಿದರನ್ನು ಸನ್ಮಾನಿಸಿ ಪ್ರಶಸ್ತಿ ನೀಡಿದರು.ಬಳ್ಳಾರಿಯ ಕಲಾವಿದರು ಸಾಹಿತಿಗಳು ಆದ ಕೆ ಜಗದೀಶ್ ಹಾಗೂ ಎ.ಎಂ.ಪಿ ವೀರೇಶಸ್ವಾಮಿಯವರಿಗೆ  ಸಾಹಿತ್ಯ ಸಾಮ್ರಾಟ್ ಚಂಪಾ ಪ್ರಶಸ್ತಿ ನೀಡಿ  ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಿರುಗುಪ್ಪ ಮಾಜಿ ಎಂ.ಎಲ್ ಎ ಚಂದ್ರಯ್ಯ ಸ್ವಾಮಿ ತಾಯಿಮ್ಮ ದೇವಿ ಕಲಾ ಟ್ರಸ್ಟ್ ನ ಅದ್ಯಕ್ಷರಾದ  ಡಾ ಶಿವಕುಮಾರ ತಾತ ಹಾಗೂ ಗ್ರಾಮ ಪಂಚಾಯತಿ  ಅದ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು.