ವರುಣದೇವನ ಕೃಪೆಗೆ ಪರ್ಜನ್ಯ ಹೋಮ
ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೨೬; ಶ್ರೀ ದೈವ ಸಂಸ್ಕೃತಿ ಪ್ರತಿಷ್ಠಾನ (ರಿ) ಹೊದಿಗೆರೆ ವತಿಯಿಂದ ಮಳೆರಾಯನ ಕೃಪೆಗೆ ಪರ್ಜನ್ಯ ಹೋಮ ಹಮ್ಮಿಕೊಳ್ಳಲಾಗಿತ್ತು. ಹೊದಿಗೆರೆ ಶ್ರೀ ಬಲಮುರಿ ಮಹಾಗಣಪತಿ ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಟಹರ ಚತುರ್ಥಿ ಪ್ರಯುಕ್ತ ಲೋಕಕಲ್ಯಾಣಕ್ಕಾಗಿ ಅಷ್ಟದ್ರವ್ಯ ಮೋದಕ ಹೋಮ ಹಾಗೂ ವರುಣದೇವನ ಕೃಪೆಗೆ ಪರ್ಜನ್ಯ ಹೋಮ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ವಿದ್ವಾನ್ ಶ್ರೀ ಬುದೀಸ್ವಾಮಿ ಹಿರೇಮಠ ಮಾತನಾಡಿ ಪರ್ಜನ್ಯಹೋಮ‌ ಅಂದರೆ ಇಂದ್ರನ ರೂಪ. ಪರ್ಜನ್ಯ ಅಂದರೆ ಮಳೆ, ಗುಡುಗು, ಸಿಡಿಲು ಇವುಗಳ ದೇವರು. ಪರ್ಜನ್ಯ ಎಂದರೆ ಮಳೆ ಮೂಲಕ, ಇಳೆಗೆ ಕಳೆ ತರುವ ದೇವರು ಪರ್ಜನ್ಯ ದೇವರು ಎಂದು ಹೇಳಿದರು. ಸದಸ್ಯರಾದ ವೇ.ಮೋಹನಶಾಸ್ತ್ರಿಗಳು ಮಾತನಾಡಿ ಮಳೆ ಬಾರದಿದ್ದಾಗ ನೆನಪಾಗುವ ವೈದಿಕವಾದ ಕ್ರಮವೆಂದರೆ, ಅದು ಪರ್ಜನ್ಯ ಜಪ, ಪರ್ಜನ್ಯ ಸೂಕ್ತ ಪಠಣ ಅಥವಾ ಪರ್ಜನ್ಯ ಹೋಮ. ಇದು ಋಗ್ವೇದದಲ್ಲಿ ಬರುವಂಥ ಸೂಕ್ತವಾಗಿದೆ.ಕೆಲವು ಕಡೆ ನೀರನಲ್ಲಿ ಕುಳಿತು ಪರ್ಜನ್ಯ ಆರಾಧನೆ ಮಾಡುವುದನ್ನು ಕಾಣಬಹುದು. ಮತ್ತೆ ಕೆಲವು ಕಡೆ ಕಲಶ ಸ್ಥಾಪನೆಯನ್ನು ಮಾಡಿ, ಆರಾಧನೆ ಮಾಡಲಾಗುತ್ತದೆ.ಅದೆ ರೀತಿಯಲ್ಲಿ ಸದಾ ಲೋಕಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ.ವಿದ್ವಾನ್ ಶ್ರೀ ಬುದೀಸ್ವಾಮಿ ಹಿರೇಮಠ ಅವರ ಸಂಗಡಿಗರು  ಪರ್ಜನ್ಯಹೋಮ ಮೂಲಕ ದೇವರಿಗೆ ಮೊರೆ ಇಟ್ಟಿದ್ದಾರೆ.ಒಟ್ಟಾರೆ ಅವರು ಮಾಡುತ್ತಿರುವ.ಕಾರ್ಯಕ್ರಮಗಳು ಯಶಸ್ವಿಯಾಗಲೆಂದು ನುಡಿನಮನ ಅರ್ಪಿಸಿದರು.ಈ ಸಂದರ್ಭದಲ್ಲಿ ವೇ.ಶಿದ್ರಾಮಯ್ಯಾ.ಶಾಸ್ತ್ರೀಗಳು .ವೇ.ಶ್ರೀ.ಬುದೀಶ್ ಶಾಸ್ತ್ರಿಗಳು ವೇ.ಶ್ರೀ.ಬಸವಣಯ್ಯ ಶಾಸ್ತ್ರಿಗಳು ವೇ.ಶ್ರೀ.ಶಿವಲಿಂಗಯ್ಯಾ ಶಾಸ್ತ್ರಿಗಳು, ಬಸವಲಿಂಗಯ್ಯಾ ಶಾಸ್ತ್ರಿಗಳು,ಪ್ರಜ್ವಲ್ ಶಾಸ್ತ್ರಿಗಳು‌ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.