ರೋವರ್ ಸ್ಕೌಟ್ ಲೀಡರ್ಸ್- ರೇಂಜರ್ಸ್ ಲೀಡರ್ಸ್ ಸಭೆ
ಸಂಜೆವಾಣಿ ವಾರ್ತೆ
ದಾವಣಗೆರೆ, ಜೂ. 26; ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ದಾವಣಗೆರೆ. ಡಿ ಆರ್ ಆರ್ ಸ್ಕೌಟ್  ಭವನದಲ್ಲಿ ಜಿಲ್ಲಾಮಟ್ಟದ (ಪದವಿ ಪೂರ್ವ ಉಪನ್ಯಾಸಕರ) ರೋವರ್ ಸ್ಕೌಟ್ ಲೀಡರ್ಸ್ ಮತ್ತು ರೇಂಜರ್ಸ್ ಲೀಡರ್ಸ್ ಗಳ ಸಭೆಯನ್ನು  ಆಯೋಜಿಸಿದ್ದು 2024-25 ನೇ ಸಾಲಿನ ಘಟಕಗಳನ್ನು ಹೆಚ್ಚಿಸಿ ತರಬೇತಿಯನ್ನು ನೀಡುವುದು  ಸೇವಾ ಕಾರ್ಯ ಚಟುವಟಿಕೆಗಳನ್ನು ಹೆಚ್ಚಿಸುವುದು,  ನಿಪುನ್ ಪರೀಕ್ಷೆಯ ತರಬೇತಿ ನೀಡುವುದು. ಪದಕ ತರಬೇತಿ ನೆಡೆಸುವುದು. ಚಾರಣ ಶಿಬಿರ ಆಯೋಜನೆ ಮಾಡುವುದು,  ವಾರ್ಷಿಕ ಚಟುವಟಿಕೆಗಳ ಬಗ್ಗೆ ಜಿಲ್ಲಾ ಕಾರ್ಯದರ್ಶಿ ಎಂ ರತ್ನ ಮತ್ತು ಅಶ್ವಿನಿ ಎಸ್. ಜಿ. ವಿ. ತಿಳಿಸಿದರು.ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಸ್ಕೌಟ್ಸ್ ಆಯುಕ್ತರಾದ ಎ ಪಿ ಷಡಕ್ಷರಪ್ಪ  ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಜೀವನದಲ್ಲಿ ಹೇಗೆ ಸಹಕಾರಿ ಯಾಗುತ್ತದೆ ಮತ್ತು ಉದ್ಯೋಗದಲ್ಲಿ  ಸಹ ಮೀಸಲಾತಿ ನೀಡಲಾಗುತ್ತಿದೆ ಎಂದು ತಿಳಿಸಿದರು. ಓದುವುದು ಅಂಕಗಳನ್ನು ಗಳಿಸುವುದು. ಒಂದು ಭಾಗವಾದರೂ ಅದನ್ನು ಹೊರತುಪಡಿಸಿ  ಸ್ಕೌಟ್ಸ್ ಮತ್ತು ಗೈಡ್ಸ್  ಜೀವನದ ಪಾಠವನ್ನು ಕಲಿಸುತ್ತದೆ ಎಂದು ಜಿಲ್ಲಾ ಸಹಾಯಕ ಆಯುಕ್ತರಾದ ಎನ್ ಕೆ ಕೊಟ್ರೇಶ್ ಮಾತನಾಡಿದರು. ಜಿಲ್ಲಾ ಸಹ ಕಾರ್ಯದರ್ಶಿ ಸುಖವಾನಿ ಉಪಸ್ಥಿತರಿದ್ದು ರೋವರ್ ಸ್ಕೌಟ್ ಲೀಡರ್ ಮತ್ತು ರೇಂಜರ್ ಲೀಡರ್ಸ್ ರವರು ಮೇಲ್ಕನಿಸಿದ ವಿಷಯಗಳ ಬಗ್ಗೆ  ಚರ್ಚಿಸಿ  ಆಯುಕ್ತರಿಂದ ಮತ್ತು ಪದಾಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು . ಅಶ್ವಿನಿ   ಸ್ವಾಗತಿಸಿ ನಿರೂಪಿಸಿದರು .