ತಿಂಗಳಿಂದ ಹಗಲು ಸಹ ಬೀದಿ ದೀಪಗಳು ಉರಿಯುತ್ತಿವೆ; ಡಾ. ಎಚ್. ಕೆ. ಎಸ್. ಸ್ವಾಮಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ. ಜೂ.೨೬; ಮೆದೇಹಳ್ಳಿ ಗ್ರಾಮ ಪಂಚಾಯಿತಿ ಅಡಿಯಲ್ಲಿ ಬರುವ ಕೊಡೆಯ್ಯನಟ್ಟಿ, ಮಲ್ಲನಕಟ್ಟೆ ಗ್ರಾಮದಲ್ಲಿ ತಿಂಗಳಿAದ ಹಗಲು ಸಹ ಬೀದಿ ರಾತ್ರಿ ಉರಿಯುತ್ತಿದ್ದು, ಯಾರು ಸಹ ನಿಲ್ಲಿಸುವ ಕ್ರಮ ಜರುಗಿಸುಗುತ್ತಿಲ್ಲ, ಕಾರಣ ಕೆಲವೊಂದು ಬಲ್ಪ್ಗಳಿಗೆ ಕಂಬದಿAದ ನೇರವಾಗಿ ಸಂಪರ್ಕ ಕಲ್ಪಿಸಿದ್ದಾರೆ, ಅವುಗಳನ್ನ ನಂದಿಸಲು ಸ್ವಿಚ್‌ಗಳೇ ಇಲ್ಲ, ಅಗಾಗಿ ಅವುಗಳು ಉರಿಯುತ್ತಲೇ ಇರುತ್ತವೆ. ಪಂಚಾಯಿತಿಯವರು ಕೆಇಬಿಯವರ ಸಹಾಯ ಪಡೆದು, ಬೀದಿ ದೀಪಗಳಿಗೆ ಸ್ವಿಚ್‌ಗಳನ್ನ ಅಳವಡಿಸಿ, ವಿದ್ಯುತ್ ಆರಿಸುವಂತಹ ವ್ಯವಸ್ಥೆ ಮಾಡಿಸಿದರೆ ಉತ್ತಮ ಎಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿಯವರು ವಿನಂತಿಸಿಕೊAಡಿದ್ದಾರೆ.ಸಾರ್ವಜನಿಕರು ಕೆಇಬಿಯವರಿಗೆ ದೂರವಾಣಿ ಕರೆ ಮುಖಾಂತರ ವಿಚಾರಿಸಿದರೆ, ಅವರು ನಾವು ಕರೆಂಟ್‌ನ ಸಂಪರ್ಕ ಕಲ್ಪಿಸಿ ಕೊಡುತ್ತೇವೆ ಹೊರತು, ಅದನ್ನ ಆರಿಸುವುದು ಬಿಡುವುದು ಗ್ರಾಮ ಪಂಚಾಯಿತಿಗೆ ಸೇರಿದ್ದು ಎನ್ನುತ್ತಿದ್ದಾರೆ. ಗ್ರಾಮ ಪಂಚಾಯಿತಿಯವರು ಲೈಟ್ ಆಫ್ ಮಾಡಲು ಯಾವುದೇ ಸರಿಯಾದ ಸ್ವಿಚ್ ವ್ಯವಸ್ಥೆ ಇಲ್ಲ ಎಂದು ಕಾರಣ ಹೇಳುತ್ತಿದ್ದಾರೆ. ಇವರಿಬ್ಬರ ಮಧ್ಯೆ ಸಾರ್ವಜನಿಕರ ಕಟ್ಟಿದ ತೆರಿಗೆ ಹಣ ಪೋಲಾಗುತ್ತಿರುವುದೆಂದು ಸಾರ್ವಜನಿಕರು ದೂರುತ್ತಿದ್ದಾರೆ.ಒಂದು ಯೂನಿಟ್ ಕರೆಂಟ್ ಉಳಿಸಿದರೆ, ಒಂದು ಯೂನಿಟ್ ಉತ್ಪಾದನೆ ಮಾಡಿದಂತೆ ಎಂಬ ಘೋಷಣೆಯನ್ನ ಪ್ರಚಾರಮಾಡಿದ ಸರ್ಕಾರದ ಇಲಾಖೆಗಳು, ಈಗ ರಾತ್ರಿ ಹಗಲು ಎನ್ನದೇ, ಬೀದಿ ದೀಪಗಳನ್ನು ಉರಿಸುತ್ತಿದೆ. ಈಗಾಗಲೇ ನಮ್ಮಲ್ಲಿ ವಿದ್ಯುತ್ತಿನ ಕೊರತೆಯಿಂದ ಸಾಕಷ್ಟು ಉದ್ಯಮಗಳು ನಷ್ಟವಾಗಿವೆ, ಗ್ರಾಮದಲ್ಲೇ ಕೆಲವೊಮ್ಮೆ ರಾತ್ರಿ ವಿದ್ಯುತ್ ಸಪ್ಲೆ ಇಲ್ಲದೆ, ಜನ ಕತ್ತಲಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕೆಲವೊಂದು ಕಡೆ ನಾವು ಇನ್ನೂ ವಿದ್ಯುತ್ ಸಂಪರ್ಕವನ್ನೇ ನೀಡಿಲ್ಲ. ಬಡತನ ಮತ್ತು ಬಂಡವಾಳದ ಕೊರತೆಯಿಂದ ಕೆಲವೊಂದಿಷ್ಟು ಗ್ರಾಮಗಳನ್ನ ಪೂರ್ತಿಯಾಗಿ ವಿದ್ಯುತ್‌ಕರಣಗೊಳಿಸಿಲ್ಲ. 24 ಗಂಟೆ ವಿದ್ಯುತ್ ನೀಡಲಾರದೆ ರೈತರಿಗೆ ನಾವು ಸಾಕಷ್ಟು ನೋವನ್ನ ಕೊಟ್ಟಿದ್ದೇವೆ, ಇಂತಹ ಸಂದರ್ಭದಲ್ಲಿ ಸಹ ನಾವು ಈ ರೀತಿ ಹಗಲು ಹೊತ್ತಿನಲ್ಲಿ ಬೀದಿ ದೀಪಗಳನ್ನು ಉರಿಸುವುದು ಸರಿಯಲ್ಲ ಎಂದಿದ್ದಾರೆ.ಈಗಲಾದರೂ ಗ್ರಾಮ ಪಂಚಾಯಿತಿಯವರು, ನೀರ ಗಂಟಿಗಳು, ಸದಸ್ಯರು, ಈ ನಿಟ್ಟಿನಲ್ಲಿ ಕಾರ್ಯೋನ್ಮುಕರಾಗಿ, ಬೆಳಗ್ಗೆ ಆರಕ್ಕೆ ಬೀದಿ ದೀಪವನ್ನು ಆರಿಸಿ, ಸಂಜೆ ಆರಕ್ಕೆ ಆನ್ ಮಾಡುವಂತ ವ್ಯವಸ್ಥೆ ಮಾಡಿ, ಗ್ರಾಮಸ್ಥರಿಗೆ ಮಾದರಿಯಾಗಬೇಕು. ಅನಾವಶ್ಯಕವಾಗಿ ಹಗಲು ಹೊತ್ತು ಬೀದಿ ದೀಪಗಳನ್ನು ಉರಿಸುವುದು ಬೇಡ. ಪಂಚಾಯಿತಿಗಳು ಸಾರ್ವಜನಿಕರ ಹಣಕ್ಕೆ ಬೆಲೆ ನೀಡಬೇಕು, ಪ್ರತಿಯೊಂದು ವಸ್ತುವಿಗೂ ಸಹ ಬೆಲೆ ಕಟ್ಟುವ ಇಂದಿನ ಕಾಲದಲ್ಲಿ, ಪ್ರತಿಯೊಂದು ಯೂನಿಟ್ ವಿದ್ಯುತ್ ಸಹ ವ್ಯರ್ಥವಾಗದಂತೆ ನೋಡಿಕೊಳ್ಳಬೇಕಾದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದಿದ್ದಾರೆ.ನಾಗರಿಕರು ಸಹ ಹಗಲೆಲ್ಲ ಉರಿಯುತ್ತಿರುವ ಬೀದಿ ದೀಪಗಳು ಕಂಡ ತಕ್ಷಣ ಅಧಿಕಾರಿಗಳಿಗೆ ಗಮನಕ್ಕೆ ತಂದು, ಅವುಗಳನ್ನು ಆರಿಸುವ ಮಟ್ಟಿಗಾದರೂ ನಾವು ಪರಿಸರ ಪ್ರಜ್ಞೆಯನ್ನು ಮೂಡಿಸಬೇಕಾಗಿದೆ, ಈಗ ವಿದ್ಯುತ್ ಉಳಿಸುವಂತ ಉಪಕರಣಗಳನ್ನು ಕಂಡುಹಿಡಿದಿರುವುದರಿAದ, ಹಗಲು ಹೊತ್ತು ತನ್ನಿಂದ ತಾನೆ ದೀಪಗಳನ್ನು ಆರಿಸಬಹುದು. ಅನವಶ್ಯಕವಾಗಿ ವಿದ್ಯುತ್ ಉರಿಸದಂತೆ ಎಲ್ಲಾ ಗ್ರಾಮಗಳಿಗೂ ಅರಿವುಂಟುಮಾಡಬೇಕು. ಈಗ ಮನೆ ಮನೆಗಳಲ್ಲಿ ವಿದ್ಯುತ್ ಬಿಲ್ ಏರಿಕೆಯಾಗಿದೆ ಎಂದು ಜನರು ಚಿಂತಿತರಾಗಿದ್ದಾರೆ, ಒಂದು ಯೂನಿಟ್‌ಗೆ 5 ರಿಂದ 7 ರೂಪಾಯಿಯಷ್ಟು ವೆಚ್ಚ ತಗುಲತ್ತದೆ, ಗ್ರಾಮ ಪಂಚಾಯಿತಿಯ ಅಧಿಕಾರಿಗಳೇ ಜನರ ಮನಸ್ಸಿಗೆ ಇಂತಹ ವಿಚಾರಗಳನ್ನ ತಿಳಿಸಬೇಕು ಎಂದಿದ್ದಾರೆ.