ರಕ್ತದಾನ ಶಿಬಿರ
ಧಾರವಾಡ, ಜೂ.26: ಗ್ರಾಮೀಣ ವಿಭಾಗ ಹಾಗೂ ನಗರ ವಿಭಾಗ ಧಾರವಾಡ, ಹೆಸ್ಕಾಂ ಮತ್ತು ಕಿಮ್ಸ್ ಹುಬ್ಬಳ್ಳಿ ಇವರ ಸಹಕಾರ ದಿಂದ ವಿದ್ಯಾಗಿರಿ ಧಾರವಾಡ ಆವರಣದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಕೀಮ್ಸ್ ಆಸ್ಪತ್ರೆಯ ಡಾ. ಕವಿತಾ ರವರು ರಕ್ತದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಗರ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ನದಾಫ್, ಗ್ರಾಮೀಣ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ಮೈಸೂರ್ ದೊಡ್ಡಮನಿ ಹಾಗೂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಗುಲ್ಜಾರ ಮುಲ್ಲಾ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.