ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದಲ್ಲಿ ದೇಶಪಾಂಡೆ ಫೌಂಡೇಶನ್ ತರಬೇತಿಕೇಂದ್ರ ಹುಬ್ಬಳ್ಳಿ ವತಿಯಿಂದ ವಿವಿಧ ಹುದ್ದೆಗಳ ಸೇರಲು ಕುರಿತು ಕಾರ್ಯಗಾರ
ಬೀದರ : ಜೂ.26: ನಗರದ ಪ್ರತಿಷ್ಠಿತ ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದ ದೇಶಪಾಂಡೆ ಫೌಂಡೇಶನ್ ತರಬೇತಿ ಕೇಂದ್ರ ಹುಬ್ಬಳ್ಳಿ ವತಿಯಿಂದ ವಿವಿಧ ಹುದ್ದೆಗಳ ಸೇರಲು ನಡೆದ ಕಾರ್ಯಗಾರವನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿಯವರು ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಶ್ರೀ ಅನೀಲಕುಮಾರ ಅಣದೂರೆಯವರು ಮಾತನಾಡುತ್ತಾ ಇಂತಹ ಮೇಳಗಳು ವಿದ್ಯಾರ್ಥಿಗಳಿಗೆ ಪರೀಕ್ಷಾ ಫಲಿತಾಂಶದ ಜೊತೆಗೆ ಉತ್ತಮ ತರಬೇತಿ ನೀಡಿ ಅವರಿಗೆ ಉನ್ನತ ಹುದ್ದೆ ಪಡೆಯಲು ದಂಪತಿಗಳಾದ ಗುರುರಾಜ ಕುಲಕರ್ಣಿ ಹಾಗೂ ಶ್ರೀಮತಿ ಶಾರದಾ ಕುಲಕರ್ಣಿಯವರ ಶ್ರಮ ಶ್ಲಾಘನೀಯವಾಗಿದೆ ಗ್ರಾಮೀಣ ಭಾಗದಲ್ಲಿ ಅತೀ ಹಿಂದುಳಿದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ರಾಜಧಾನಿ ಕೇಂದ್ರಗಳಾದ ಬೆಂಗಳೂರು, ಮುಂಬೈ, ಮದ್ರಾಸ್ ಹಾಗೂ ಹೈದ್ರಾಬಾದನ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಹುದ್ದೆ ಪಡೆಯಲು ದಾರಿದೀಪವಾಗಿದೆ ಎಂದು ನುಡಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿಯಾದ ದೇಶಪಾಂಡೆ ಫೌಂಡೇಶನ ಜಿಲ್ಲಾ ಸಂಚಾಲಕಾರದ ಶ್ರೀ ಅಜೀತ ಕುಲಕರ್ಣಿಯವರು ಮಾತನಾಡುತ್ತಾ ಇವತ್ತಿನ ಯುಗದಲ್ಲಿ ಕಂಪ್ಯೂಟರ್ ಮಾನವನ ಏಳಿಗೆಯಲ್ಲಿ ಅವಿಭಾಜ್ಯ ಅಂಗವಾಗಿದೆ, ಪ್ರತಿಯೊಬ್ಬ ವಿದ್ಯಾರ್ಥಿ ಕಂಪ್ಯೂಟರ್ ಅಂತರಾಳದಲ್ಲಿ ಹಲವಾರು ಅಂಶಗಳು ಅಡಗಿವೆ ನಾಯಕತ್ವ ಗುಣ, ಇ-ಮೇಲ್ ಸಂದೇಶ, ಪಾಠ ಹೇಳುವ ಕೌಶಲ, ಅನುವಾದ ಕೌಶಲ ಮುಂತಾವುಗಳನ್ನು ನಮ್ಮ ಫೌಂಡೇಶನಲ್ಲಿ ಸುಮಾರು 1,10,000ಕ್ಕೂ ಅಧೀಕ ವಿದ್ಯಾರ್ಥಿಗಳಿಗೆ ದ್ವಾರ ಪರೀಕ್ಷೆ (ಸಿ.ಇ.ಟಿ) ಮುಖಾಂತರ ಆಯ್ಕೆ ಮಾಡಿ ಅವರಿಗೆ 90 ದಿನಗಳ ತರಬೇತಿಕೊಟ್ಟು ಅವರಿಗೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಅನೇಕ ವಿದ್ಯಾರ್ಥಿಗಳು ಸ್ಥಾನಗಳನ್ನು ಪಡೆಯಲು ನಾವು ಹಗಲಿರಳು ಶ್ರಮ ಪಡುತ್ತಿದ್ದೇವೆ ಇದರ ಸದುಪಯೋಗ ಪಡೆದ ವಿದ್ಯಾರ್ಥಿಗಳು ಅಮೇರಿಕಾದಲ್ಲಿರುವ ಗುರುರಾಜ ಕುಲಕರ್ಣಿ ದಂಪತಿಗಳ ಕಾರ್ಯ ಶ್ಲಾಘನೀಯ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಮೋಬಲೈಜೇಷನ್ ಮ್ಯಾನೇಜರ ಶ್ರೀ ಪ್ರದೀಪ ಹಾಗೂ ಮೋಬಲೈಜೇಷನ್ ಕಾರ್ಯಕಾರಣಿ ಸದಸ್ಯೆ ಕು. ಪವಿತ್ರಾ ಆರ್.ಕೆ. ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲಿಗೆ ಬಿ.ಕಾಂ.6ನೇ ಸೆಮಿಸ್ಟರನ ವಿದ್ಯಾರ್ಥಿ ಎ.ನಾರಾಯಣ ಸ್ವಾಗತಿಸಿದರೆ, ಬಿ.ಕಾಂ.6ನೇ ಸೆಮಿಸ್ಟರಿನ ವಿದ್ಯಾರ್ಥಿನಿ ವೈಷ್ಣವಿ ಸಂಚಾಲನೆ ಮಾಡಿದರೆ ಬಿ.ಕಾಂ.6ನೇ ಸೆಮಿಸ್ಟರಿನ ವಿದ್ಯಾರ್ಥಿನಿ ಕುಂಕುಂಮ ವಂದಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.