ಶಿವು ಸೈನಿಕ ಅಕಾಡೆಮಿ ವತಿಯಿಂದ ಡೆಮೊ ರ್ಯಾಲಿ
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ: ಜೂ.26:- ಜೂ.28ರಂದು ಮಡಿಕೇರಿಯಲ್ಲಿ ಭಾರತೀಯ ಸೇನೆಯ ರ್ಯಾಲಿ ನಡೆಯಲಿದ್ದು ಶಿವು ಸೈನಿಕ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಮುಂಚಿತವಾಗಿ ಡೆಮೋ ರ್ಯಾಲಿಯನ್ನು ಪಿರಿಯಾಪಟ್ಟಣ ಹಾಗೂ ರಾಮಂದೂರಿನಲ್ಲಿ ಇಂದು ನಡೆಸಲಾಯಿತು.
ಉದ್ದೇಶವೇನೆಂದರೆ ರ್ಯಾಲಿ ನಡೆಯುವ ಮುಂಚೆ ಅಲ್ಲಿ ನಡೆಯುವ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಇಲ್ಲೂ ಸಹ ರ್ಯಾಲಿ ಮಾಡಿದಾಗ ವಿದ್ಯಾರ್ಥಿಗಳಿಗೆ ಧೈರ್ಯ ಬರುತ್ತದೆ ಅಲ್ಲಿಗೆ ಹೋಗಿ ವಿದ್ಯಾರ್ಥಿಗಳು ಏನು ಮಾಡಬೇಕು ಏನು ಮಾಡಬಾರದು ಎಂದು ತಿಳಿಯುವುದಿಲ್ಲ ಆದ್ದರಿಂದ ಮುಂಜಾಗ್ರತೆಯಾಗಿ ಅವರಿಗೆ ಅರಿವು ಮೂಡಿಸುವ ಹಾಗೂ ಅಲ್ಲಿ ನಡೆಯುವ ರೀತಿಯಲ್ಲೇ ಮುಂಚಿತವಾಗಿ ಇಲ್ಲಿ ನಡೆಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಹಾಗೂ ವಿದ್ಯಾರ್ಥಿಗಳಿಗೆ ಆತ್ಮಶ್ರೆಯ ತುಂಬುತ್ತದೆ. ಆದುದರಿಂದ ಅವರಿಗೆ ಪ್ರೇರಣೆ ನೀಡಿ ಎಲ್ಲಾ ರೀತಿಯಲ್ಲೂ ಅರಿವು ಮೂಡಿಸಿ ಶುಭಾಶಯ ಕೋರಲಾಯಿತುಅನುಕೂಲವಾಗುತ್ತದೆ ಹಾಗೂ ವಿದ್ಯಾರ್ಥಿಗಳಿಗೆ ಆತ್ಮಶ್ರೆಯ ತುಂಬುತ್ತದೆ ಆದುದರಿಂದ ಅವರಿಗೆ ಪ್ರೇರಣೆ ನೀಡಿ ಎಲ್ಲಾ ರೀತಿಯಲ್ಲೂ ಅರಿವು ಮೂಡಿಸಿ ಶುಭಾಶಯ ಕೋರಲಾಯಿತು.