ಶ್ರೀಕಂಠೇಶ್ವರ ಹುಂಡಿ ಎಣಿಕೆ: 1 ಕೋಟಿ 69 ಲಕ್ಷ ಸಂಗ್ರಹ
ಸಂಜೆವಾಣಿ ವಾರ್ತೆ
ನಂಜನಗೂಡು:ಜೂ.26:- ಶ್ರೀ ಶ್ರೀಕಂಠೇಶ್ವರ ದೇವಾಲಯದಲ್ಲಿ ಹುಂಡಿ ಏಣಿಕೆ ನಡೆಯಿತು. ಸುಮಾರು 1 ಕೋಟಿ 69 ಲಕ್ಷ 69 ಸಾವಿರ ರೂ ಸಂಗ್ರಹವಾಗಿದೆ.
ಇದರ ಜೊತೆಗೆ ಚಿನ್ನ 134 ಗ್ರಾಂ ಬೆಳ್ಳಿ 2 ಕೆಜಿ 350 ಗ್ರಾಂ 23 ವಿದೇಶ ಕರೆನ್ಸಿಗಳು ದೊರೆತಿವೆ ಎಂದು ಶ್ರೀಕಂಠೇಶ್ವರ ದೇವಾಲಯದ ಇಒ ಜಗದೀಶ್ ತಿಳಿಸಿದರು.
ಎಣಿಕೆ ಕಾರ್ಯದಲ್ಲಿ ಬ್ಯಾಂಕಿನ ಸಿಬ್ಬಂದಿಗಳು ಮತ್ತು ದೇವಸ್ಥಾನದ ಸಿಬ್ಬಂದಿಗಳು ಸಂಘ ಸಂಸ್ಥೆಗಳು ಭಾಗವಹಿಸಿದರು.