ಯೋಗ ಪ್ರಕಾಶ್‍ಗೆ ಗಡಿನಾಡು ಯೋಗರತ್ನ ಬಿರುದು ಪ್ರಧಾನ
ಸಂಜೆವಾಣಿ ವಾರ್ತೆ
ಮೈಸೂರು, ಜೂ.26:- ವಿಶ್ವ ಯೋಗ ದಿನದಂದು ಯೋಗದ ಬಗ್ಗೆ ಜನರದಲ್ಲಿ ಜಾಗೃತಿ ಮೂಡಿಸಿ, ಕಳೆದ 18 ವರ್ಷಗಳಿಂದ ಉಚಿತವಾಗಿ ಯೋಗಾಭ್ಯಾಸವನ್ನು ಕಲಿಸುತ್ತಿರುವ ಯೋಗ ಗುರು ಹಾಗೂ ಯೋಗ ಪ್ರಕಾಶ್ ಎಂದೇ ಖ್ಯಾತಿಯಾಗಿರುವ ಬಿ.ಪಿ. ಪ್ರಕಾಶ್ ಅವರಿಗೆ ಸಂಜೀವಿನಿ ಟ್ರಸ್ಟ್ ವತಿಯಿಂದ “ಗಡಿನಾಡು ಯೋಗರತ್ನ” ಬಿರುದು ನೀಡಿ ಅಭಿನಂದಿಲಾಯಿತು.
ನಗರದ ಜೆ.ಎಸ್.ಎಸ್ ಮಹಿಳಾ ಕಾಲೇಜು ಆವರಣದಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣಾ ಸೇವಾ ಸಮಿತಿಯ ಸಹಯೋಗದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಚಾ.ನಗರದ ಸಂಜೀವಿನ ಟ್ರಸ್ಟ್ ಅವರು ಯೋಗಪ್ರಕಾಶ್ ಅವರಿಗೆ “ಗಡಿನಾಡು ಯೋಗರತ್ನ” ಬಿರುದು ನೀಡಿ, ಶಾಲು ಹೊದಿಸಿ, ಮೈಸೂರು ಪೇಟಾ ತೊಡಿಸಿ, ಫಲಾತಂಬೂಲ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್‍ನ ಅಧ್ಯಕ್ಷ ಸತೀಶ್ ಅವರು, ಯೋಗ ಪ್ರಕಾಶ್ ಅವರು ನಿರಂತರವಾಗಿ ಯೋಗಾಭ್ಯಾಸವನ್ನು ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಂಡು ಇತರರಿಗೆ ಮಾದರಿ ಆಗಿದ್ದಾರೆ. ಶ್ರೀ ಪಂತಜಲಿ ಯೋಗ ಶಿಕ್ಷಣ ಸೇವಾ ಸಮಿತಿಯನ್ನು ಆರಂಭಿಸಿ, ವರ್ಷ ಪೂರ್ತಿ ಯೋಗಾಭ್ಯಾಸವನ್ನು ಉಚಿತವಾಗಿ ಹೇಳಿಕೊಡುವ ಮೂಲಕ ಜಿಲ್ಲೆಯಲ್ಲಿ ಸಾವಿರಾರು ಮಂದಿ ಯೋಗ ಶಿಕ್ಷಕರನ್ನು ತಯಾರು ಮಾಡಿರುವ ಕೀರ್ತಿ ಅವರಿಗೆ ಸಲ್ಲುತ್ತದೆ. ಆರೋಗ್ಯ ಇಲಾಖೆಯ ನೌಕರರಾಗಿ ಯೋಗದ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿ, ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಯೋಗ ಬಂಧುಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಅವರ ಸೇವೆಯನ್ನು ಪ್ರಶಂಸಿಸಿದರು.
ಅವರ ಸೇವೆಯನ್ನು ಗುರುತಿಸಿ ವಿಶ್ವ ಯೋಗ ದಿನದಂದು ಯೋಗ ರತ್ನ ಬಿರುದು ನೀಡಿ ಸನ್ಮಾನಿಸುವ ಮೂಲಕ ಅವರಿಗೆ ಭಗವಂತ ಇನ್ನು ಹೆಚ್ಚಿನ ಆಯುಷ್ಯ, ಆರೋಗ್ಯವನ್ನು ನೀಡಿ, ಬಹಳಷ್ಟು ಮಂದಿಗೆ ಯೋಗಾಭ್ಯಾಸ ಅವರಿಂದ ದೊರೆಯಲಿದೆ ಎಂದು ಸತೀಶ್ ಅಶಿಸಿಸಿದರು.
ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಮಹದೇವಸ್ವಾಮಿ, ಯೋಗಶಿಕ್ಷಕರಾದ ದೊರೆಸ್ವಾಮಿ, ಲೋಕೇಶ್ವರಿ, ದೈಹಿಕ ಶಿಕ್ಷಕರಾದ ಮಂಜು, ಉಮೇಶ್, ಶಿಕ್ಷಕರಾದ ಕುಮಾರಸ್ವಾಮಿ, ಗೌರಿ, ಅಕ್ಷತಾ ಜೈನ್, ನಾಗು ಮೊದಲಾದವರು ಇದ್ದರು.