ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು: ಜಗನ್‍ಮೋಹನ್ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳಿ : ಈಶ್ವರಸಿಂಗ್ ಠಾಕೂರ್
ಬೀದರ:ಸೆ.26: ತೆಲಂಗಾಣದ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದ ವಿತರಣೆಯಲ್ಲಿ ಕೆಲವು ಕಿಡಿಗೇಡಿಗಳು ದನದ ಕೊಬ್ಬು ಮಿಶ್ರಣ ಮಾಡಿ ವಿತರಣೆ ಮಾಡುತ್ತಿರುವ ಕ್ರಮ ಖಂಡನೀಯ ಎಂದು ಭಾರತೀಯ ಜನತಾ ಪಕ್ಷದ ವಿಭಾಗೀಯ ಸಹಪ್ರಭಾರಿ ಈಶ್ವರಸಿಂಗ್ ಠಾಕೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಹಿಂದಿನ ಮುಖ್ಯಮಂತ್ರಿ ಜಗನ್‍ಮೋಹನ್ ರೆಡ್ಡಿ ಇದರ ಹಿಂದಿನ ಕಾಣದ ಕೈಯಾಗಿ ಕೆಲಸ ಮಾಡಿದ್ದಾರೆ. ಬೇಜವಾಬ್ದಾರಿ ವ್ಯಕ್ತಿಯನ್ನು ಟಿಟಿಡಿಸಿ ತೆಲಂಗಾಣ ಮಂದಿರ ಅಭಿವೃದ್ಧಿ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಹೀಗಾಗಿಯೇ ವಿಶೇಷ ಲಾಡು ಪ್ರಸಾದದಲ್ಲಿ ದನದ ಕೊಬ್ಬನ್ನು ಮಿಶ್ರಣ ಮಾಡಿ ಭಕ್ತಾದಿಗಳಿಗೆ ವಿತರಣೆ ಮಾಡಿದ್ದು ಸನಾತನ ಹಿಂದೂ ಧರ್ಮಕ್ಕೆ ಮಾಡಿದ ದೊಡ್ಡ ಅವಮಾನವಾಗಿದೆ.
ಪ್ರತಿದಿನ ಲಕ್ಷಾಂತರ ಜನ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆಗಮಿಸುತ್ತಾರೆ. ಈ ಶುದ್ಧಿಕರಣ ಮಾಡುತ್ತಿರಬಹುದು. ಆದರೆ ಈ ಹಿಂದೆ ದನದ ಕೊಬ್ಬು ಲಡ್ಡುವಿನಲ್ಲಿ ಮಿಶ್ರಣ ಮಾಡಿದ್ದು ಆಕ್ಷೇಪಾರ್ಹ ಸಂಗತಿ. ಆದ್ದರಿಂದ ತೆಲಂಗಾಣ ಸರ್ಕಾರ ಈ ಕುರಿತು ಕೂಲಂಕಶವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನಿನ ಕಠಿಣ ಕ್ರಮ ಕೈಗೊಳ್ಳಬೇಕು. ಇದಕ್ಕೆ ಕುಮ್ಮಕ್ಕು ನೀಡಿದ ಮಾಜಿ ಮುಖ್ಯಮಂತ್ರಿ ಜಗನ್‍ಮೋಹನ್ ರೆಡ್ಡಿ ವಿರುದ್ಧವೂ ಕಠಿಣ ಕೈಗೊಳ್ಳಬೇಕೆಂದು ಈಶ್ವರಸಿಂಗ್ ಠಾಕೂರ್ ಆಗ್ರಹ ಮಾಡಿದ್ದಾರೆ.