ದೀನದಯಾಳ ಉಪಾಧ್ಯಾಯರ ಜನ್ಮದಿನೋತ್ಸವ
ಲಕ್ಷ್ಮೇಶ್ವರ, ಸೆ26: ಪಟ್ಟಣದಲ್ಲಿ ಬುಧವಾರ ಶಿರಹಟ್ಟಿ ಮಂಡಲ ಬಿಜೆಪಿ ಹಾಗೂ ನಗರ ಘಟಕ ಬಿಜೆಪಿ ವತಿಯಿಂದ ದೀನ ದಯಾಳ ಉಪಾಧ್ಯಾಯರ ಜನ್ಮದಿನೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಡಾಕ್ಟರ್ ಚಂದ್ರು ಲಮಾಣಿ ಅವರು ಭಾರತಮಾತೆಯ ಭಾವಚಿತ್ರ ಮತ್ತು ದೀನದಯಾ ಉಪಾಧ್ಯಾಯ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಮಹಾಂತ ಶೆಟ್ಟರ್ ನಗರ ಘಟಕದ ನವೀನ್ ಬೆಳ್ಳಟ್ಟಿ ಗಿರೀಶ್ ಚೌರಡ್ಡಿ ವಿಜಯ್ ಮೆಕ್ಕಿ ಅನಿಲ್ ಮುಳಗುಂದ ಕಲ್ಲಪ್ಪ ಹಡಪದ ಮಾದೇವಪ್ಪ ಅಣ್ಣಿಗೇರಿ ಶಿವಯೋಗಿ ಅಂಕಲಕೋಟಿ ರುದ್ರಪ್ಪ ಉಮಚಗಿ ಪ್ರವೀಣ ಸುರಣಿಗಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.