ಮಹಾಲಕ್ಷ್ಮಿ ಲೇಔಟ್ ಕ್ಲಬ್‌ನಿಂದ ಫೋರಂ ಡೇ ಸಂಭ್ರಮ
ಬೆಂಗಳೂರು.ಸೆ.೨೬-ಮಹಾಲಕ್ಷ್ಮಿ ಲೇಔಟ್ ಕ್ಲಬ್‌ನ ಫೋರಂ ಡೇ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫೋರಂ ಅಧ್ಯಕ್ಷರಾದ ಕೆ. ಆರ್. ನವೀನ್ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ೭೭ ವರ್ಷಕ್ಕಿಂತ ಮೇಲ್ಪಟ್ಟ ೮೫ ವರ್ಷದೊಳಗಿನ ಹಿರಿಯ ೨೧ ಸದಸ್ಯರನ್ನು ಸನ್ಮಾನಿಸಲಾಯಿತು.
ಫೋರಂನ ಉಪಾಧ್ಯಕ್ಷ ಸಂಪಿಗೆ ಶಿವಪ್ರಕಾಶ್ ರವರ ಮೊಮ್ಮಗಳಾದ ಕು. ಸಾನಿಕಾ ಸುಜಿತ್ ಸಂಪಿಗೆ ರವರ ಭರತನಾಟ್ಯ ನೋಡುಗರ ಮನಸೂರೆಗೊಂಡಿತು. ಜೊತೆಗೆ ಫೋರಂನ ಮಹಿಳಾ ಸದಸ್ಯರಿಂದ ದೇಶದ ಎಲ್ಲ ರಾಜ್ಯಗಳ ಕುರಿತು “ವೈಬ್ರೆಂಟ್ ಕಲರ್‍ಸ್ ಆಫ್ ಇಂಡಿಯಾ” ಎಂಬ ಕಿರು ನಾಟಕವೂ ಪ್ರದರ್ಶಿತಗೊಂಡಿತು.
ಸದಸ್ಯರೆಲ್ಲರೂ ಕುಟುಂಬ ಸಹಿತರಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಸುಮಾರು ೧೫೦೦ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.