ಉತ್ಪಾದನಾ ಘಟಕ ಸ್ಥಾಪಿಸಲು ನಿರ್ಧಾರ
ಚನ್ನಮ್ಮನ ಕಿತ್ತೂರು,ಸೆ26: ಕಾರ್ಖಾನೆಯ ಸ್ಥಿತಿಗತಿ ನೋಡಿಕೊಂಡು “ಇಥೆನಾಲ್, ಕೋ-ಜನರೇಶನ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಆಡಳಿತ ಮಂಡಳಿ ನಿರ್ಧರಿಸಿದೆ ಈ ಸಲ 4 ಲಕ್ಷ ಟನ್ ಕಬ್ಬು ನೂರಿಸುವ ಗುರಿಯಿಟ್ಟುಕೊಳ್ಳಲಾಗಿದೆ ಎಂದು ಉದ್ಯಮಿ ಹಾಗೂ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬಸವರಾಜ ಬಾಳೆಕುಂದ್ರಿ ಹೇಳಿದರು.
ಸಮೀಪದ ಬೈಲಹೊಂಗಲ ತಾಲೂಕಿನ ಶ್ರೀ ಸೋ.ಸ.ಸ. ಕಾರ್ಖಾನೆ ಆವರಣದಲ್ಲಿ ನಡೆದ 2023-24ನೇ ವಾರ್ಷಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದವರು. ಕಾರ್ಖಾನೆ ಒಟ್ಟು 30.987 ಸದಸ್ಯರನ್ನು ಹೊಂದಿದ್ದು ಕಳೆದ ಸಾಲಿನಲ್ಲಿ ಶೇ.12.5 ಇಳುವರಿಯೊಂದಿಗೆ 2.49 ಲಕ್ಷ ಸಕ್ಕರೆ ಉತ್ಪಾದಿಸಿ ರಾಜ್ಯಕ್ಕೆ ಹೆಸರು ಮಾಡಿದೆ. ಅದಲ್ಲದೇ 24.9264 ಕ್ವಿಂಟಲ್ ಸಕ್ಕರೆ ಉತ್ಪಾದನೆ ಮಾಡಿ ರೈತರ ಬಿಲ್ ಪಾವತಿ ಮಾಡಲಾಗಿದೆ. ಕಬ್ಬು ಸಾಗಾಣಿಕೆ ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುವುದು. ಇನ್ಮುಂದೆ ವಾಹನದ ಕಿರಿಕಿರಿಯಾಗುವುದಿಲ್ಲ. ಆಡಳಿತ ಮಂಡಳಿಯವರು ಕಾರ್ಖಾನೆ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿ ಅಭಿವೃದ್ಧಿಯತ್ತ ಕೊಂಡ್ಯೊಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆಂದರು.
ಉಪಾದ್ಯಕ್ಷ ಮಹಾಂತೇಶ ಮತ್ತಿಕೊಪ್ಪ ಮಾತನಾಡಿ ಕಾರ್ಖಾನೆ ಎಷ್ಟೇ ನಷ್ಟಕ್ಕೆ ಒಳಗಾದರೂ ರೈತರ ಬಿಲ್ಲುಗಳನ್ನು ಪಾವತಿಸುವುದು ತಪ್ಪಿಸಿಲ್ಲ. ಕಾರ್ಮಿಕರ ಸಂಬಳ ಭರಿಸದೇ ರೈತರ ಕಬ್ಬಿನ ಬಿಲ್ಲು ಮೊದಲಿಗೆ ಪಾವತಿಸಿದ್ದೇವೆ. ಆ ನಿಟ್ಟಿನಲ್ಲಿ ನಮ್ಮ ಕಾರ್ಖಾನೆ ಹೆಸರು ಮಾಡಿದೆ. ಆದ್ದರಿಂದ ಕಾರ್ಖಾನೆ ಬೆಳೆದರೆ ನಾವು-ನೀವು-ಕಾರ್ಮಿಕರು ಬೆಳೆಯಲು ಸಾಧ್ಯವಾಗುತ್ತದೆ. ಅದಕ್ಕಾಗಿ ನಿಮೇಲ್ಲರ ಸಹಕಾರ ಮುಖ್ಯವಾಗಿದೆ ಎಂದರು.
ಸಭೆಯಲ್ಲಿ ರೈತ ಮುಖಂಡರುಗಳು ಮಾತನಾಡಿ ಕಾರ್ಖಾನೆಗೆ ಕೇಂದ್ರ-ರಾಜ್ಯ ಸರಕಾರಗಳ ನೆರವು ಪಡೆದುಕೊಳ್ಳಬೇಕು ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಸಿ ಬೆಳೆಸುವಲ್ಲಿ ಎಲ್ಲರೂ ಮುಂದಾಗಬೇಕು. ಯಾವುದೇ ಹೊಸ ಯೋಜನೆ ರೂಪಿಸಬೇಕಾದರೆ ಅಲ್ಲಿಯ ಸಾಲ ಸೌಕರ್ಯಗಳತ್ತ ಗಮನಹರಿಸಬೇಕು. ಎಂದು ರೈತರು ಸಾಕಷ್ಟು ಸಲಹೆ ನೀಡಿದರು. ಸಭೆ ಯಾವುದೇ ಗೊಂದಲವಿಲ್ಲದೇ ಅರ್ಥಪೂರ್ಣವಾಗಿ ನಡೆಯಿತು.
ಈ ವೇಳೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಬೀರೇಂದ್ರ, ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡ್ಡಗೌಡರ, ನಿರ್ದೇಶಕರುಗಳಾದ ಹಿರಿಯ ನಿರ್ದೇಶಕ ಪ್ರಕಾಶ ಬಾಳೇಕುಂದರಗಿ(ಮೂಗಬಸವ), ರಾಚಪ್ಪ ಮಟ್ಟಿ, ರಾಜು ಕೊಡಸೋಮಣ್ಣವರ, ಅಶೋಕ ಯರಗೊಪ್ಪ, ಅನಿತಾ ಮೆಟ್ಟಗುಡ್ಡ, ಸಣ್ಣಭೀಮಶೆಪ್ಪ ಅಂಬಡಗಟ್ಟಿ, ಕಾರ್ತಿಕ ಮಲ್ಲೂರ, ಮಲ್ಲಪ್ಪ ಅಷ್ಟಗಿ, ಅದೃಶ್ಯ ಕೊಟಬಾಗಿ, ಅಶೋಕ ಬಾಳೇಕುಂದರಗಿ, ಕಸ್ತೂರಿ ಸೋಮನಟ್ಟಿ, ಉಮೇಶ ಬಾಳಿ, ರಾಮಚಂದ್ರ ಕಕ್ಕಯ್ಯನವರ, ರಾಜಶೇಖರ ಎತ್ತಿನಮನಿ, ಶ್ರೀಶೈಲ ಶರಣಪ್ಪನವರ, ಮುರಳಿಧರ ಮಲ್ಲೂರ, ಬಸವರಾಜ ಬೋಳಗೌಡರ, ವರ್ತಕ ಮಲ್ಲಪ್ಪ ಕಿತ್ತೂರ, ರೈತರು, ಕಾರ್ಖಾನೆ ಸಿಬ್ಬಂದಿ ಪಾಲ್ಗೊಂಡಿದ್ದರು. ಬಾಬು ಖಂಡೋಜಿ ರೈತಗೀತೆ ಹಾಡಿದರು. ಕಛೇರಿ ಅಧೀಕ್ಷಕ ಅಶೋಕ ಬೊಮ್ಮನ್ನವರ ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕ ಉಮೇಶ ಬಾಳಿ ವಂದಿಸಿದರು.