ರೋಗಿಗಳ ಸುರಕ್ಷತೆಯಲ್ಲಿ ಫಾರ್ಮಸಿಸ್ಟ್ಗಗಳ ಕೊಡುಗೆ ಅಪಾರ : ಡಾ.ರಾಘವೇಂದ್ರ ಪಾಟೀಲ
ಬೀದರ:ಸೆ.26: ರೋಗಿಗಳ ಆರೈಕೆ, ಸುರಕ್ಷತೆ ಮತ್ತು ಸಮುದಾಯಗಳ ಯೋಗಕ್ಷೇಮಕ್ಕೆ ಔಷಧಿಕಾರರ ಕೊಡುಗೆ ಅಪಾರವಾಗಿದೆ ಎಂದು ಕರ್ನಾಟಕ ಫಾರ್ಮಸಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ರಾಘವೇಂದ್ರ ಪಾಟೀಲ ತಿಳಿಸಿದರು.
ನಗರದ ನೌಬಾದನಲ್ಲಿರುವ ಶಾಹು ಮಹಾರಾಜ ಫಾರ್ಮಸಿ ಕಾಲೇಜಿನಲ್ಲಿ ಸಭಾಂಗಣದಲ್ಲಿ ಆಯೋಜಿಸಿದ ವಿಶ್ವ ಔಷಧಿಕಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದ ಅವರು ವಿಶ್ವ ಫಾರ್ಮಸಿಸ್ಟ್ ದಿನವು ವಿಶ್ವದಾದ್ಯಂತ ಆರೋಗ್ಯ ವ್ಯವಸ್ಥೆಯಲ್ಲಿ ಔಷಧಿಕಾರರು ವಹಿಸುವ ಮಹತ್ವದ ಪಾತ್ರವನ್ನು ಗುರುತಿಸಲು ಮತ್ತು ಪ್ರಶಂಸಿಸಲು ಸೆ. 25 ರಂದು ಈ ಕಾರ್ಯಕ್ರಮ ಆಚರಿಸಲಾಗುತ್ತದೆ. ಔಷಧಿಕಾರರ ಪ್ರಯತ್ನ, ಶ್ರಮ ಮತ್ತು ಪ್ರಮುಖ ಕೊಡುಗೆಗಳ ಕುರಿತು ಜಾಗೃತಿ ಮೂಡಿಸಲು ಕಾಲೇಜಿನ ವತಿಯಿಂದ ವಿಶೇಷ ಜಾಥಾ ಹಮ್ಮಿಕೊಂಡಿದ್ದು ಶ್ಲಾಘನೀಯ ಕಾರ್ಯ ಎಂದರು.
ಶಾಹು ಮಹಾರಾಜ ಸಂಸ್ಥೆಯ ಅಧ್ಯಕ್ಷ ಅನೀಲಕುಮಾರ ಕಾಳೆ ಮಾತನಾಡಿ ಔಷಧಿಕಾರರು ಹೆಚ್ಚು ತರಬೇತಿ ಪಡೆದವರಾಗಿರುತ್ತಾರೆ. ಅವರು ಔಷಧಿಗಳನ್ನು ವಿತರಿಸಲು, ರೋಗಿಗಳಿಗೆ ಔಷಧಿ ಸಲಹೆಯನ್ನು ನೀಡಲು, ಔಷಧಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಮೇಲ್ವಿಚಾರಣೆ ಮಾಡಲು ಜವಾಬ್ದಾರಿಯಿಂದ ಕೆಲಸ ಮಾಡುತ್ತಾರೆ. ದೀರ್ಘಕಾಲೀನ ಕಾಯಿಲೆಗಳನ್ನು ನಿರ್ವಹಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಸಂಜೀವಕುಮಾರ ಬಿರಾದಾರ ಮಾತನಾಡಿ ಔಷಧಿಕಾರರ ಮಹತ್ವ ಕುರಿತು ಜಾಗೃತಿ ಮೂಡಿಸಲು ರ್ಯಾಲಿ ಆಯೋಜಿಸಲಾಗಿದೆ. ಆರೋಗ್ಯ ರಕ್ಷಣೆಯಲ್ಲಿ ಔಷಧಿಕಾರರ ಪ್ರಮುಖ ಪಾತ್ರ, ಎಲ್ಲರಿಗೂ ಸುರಕ್ಷಿತ ಮತ್ತು ಪರಿಣಾಮಕಾರಿ ಔಷಧ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಔಷಧಿಕಾರರು, ಆರೋಗ್ಯ ಪೂರೈಕೆದಾರರು ಮತ್ತು ಸಮುದಾಯದ ನಡುವೆ ನಡೆಯುತ್ತಿರುವ ಸಹಯೋಗವನ್ನು ಈ ದಿನ ಪೆÇ್ರೀತ್ಸಾಹಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಮುಖರಾದ ವೈ.ಮಾಧವರಾವ, ಪೆÇ್ರ. ಎಲ್.ಜಿ. ಕುಲಕರ್ಣಿ, ಪೆÇ್ರ. ಹೆಚ್.ಮಹೇಶ, ಪೆÇ್ರ. ಠಾಕೂರ್ ಲಖನಸಿಂಗ್, ಪೆÇ್ರ. ಮೋಜಮ್ ಖಾನ್, ಆಡಳಿತಾಧಿಕಾರಿ ಲೋಕೇಶ ಸೇರಿದಂತೆ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಔಷಧಿಕಾರರ ಕುರಿತು ಜಾಗೃತಿ ಮೂಡಿಸಲು ನೌಬಾದನ ಶಾಹು ಮಹಾರಾಜ್ ಫಾರ್ಮಸಿ ಕಾಲೇಜಿನಿಂದ ಪ್ರತಾಪನಗರವರೆಗೆ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು.