ಸಾವಳೇಶ್ವರ ಶಾಲಾ ಮಕ್ಕಳು ವಿಭಾಗ ಮಟ್ಟಕ್ಕೆ ಆಯ್ಕೆ
ಆಳಂದ:ಸೆ.26: ತಾಲೂಕಿನ ಸಾವಳೇಶ್ವರ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟದಲ್ಲಿ ಶಿಕ್ಷಣ ಇಲಾಖೆ ನಡೆಸಿ ಥ್ರೋಬಾಲ್ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ದೈಹಿಕ ಶಿಕ್ಷಕ ಮಹಾದೇವ ಗುಣಕಿ ಅವರು ಹೇಳಿಕೊಂಡಿದ್ದಾರೆ.
ಈ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡಿದ ಅವರು, ಇದೇ ವರ್ಷ ಸಾವಳೇಶ್ವರ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಗೆ ನಿಯುಕ್ತಯಾದ ಮೊದಲು ವರ್ಷದಲ್ಲೇ ಸಾವಳೆಶ್ವರ ಶಾಲೆಯ ನನ್ನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದು ತುಂಬಾ ಖುಷಿ ತಂದುಕೊಟ್ಟಿದೆ ಎಂದಿದ್ದಾರೆ.
ಆಟದಲ್ಲಿ ನಮ್ಮ ಮಕ್ಕಳು ಶಕ್ತಿ ಮೀರಿ ಪ್ರದರ್ಶನ ಮಾಡಿದ್ದು, ಅವರ ಉತ್ಸಾಹ, ಚಾಕಚಕ್ಯತೆ ಹೇಳತೀರದು, ನಮ್ಮ ಯಶಸ್ಸಿನ ಹಿಂದೆ ಅದೆμÉೂ್ಟೀ ಜನರ ಸಹಕಾರ, ಹಾರೈಕೆಗಳು ಇವೆ, ಮಕ್ಕಳ ಈ ಗೆಲುವು ಮರೆಯಲಾರದಂತಹ ಅದ್ಭುತ ಕ್ಷಣ, ಪ್ರೋತ್ಸಾಹಿಸಿದ ತಾಲೂಕಿನ ಶಿಕ್ಷಕ ಸಮೂಹ, ವೃತ್ತಿ ಭಾಂಧವರಿಗೂ ನನ್ನ ಸಹಕರಿಸಿದ ಗ್ರಾಮಸ್ಥರಿಗೂ 17 ವರ್ಷದ ವೃತ್ತಿ ಜೀವನದಲ್ಲಿ 17 ಸಲ ತಾಲೂಕು ಮಟ್ಟ ತಾಲೂಕು ಮಟ್ಟದ ಜಯ, 7 ಸಲ ಜಿಲ್ಲಾಮಟ್ಟ 5 ದ್ವಿತೀಯ 2 ಸಲ ಪ್ರಥಮ 2 ಸಲ ವಿಭಾಗ ಮಟ್ಟ 1- ಮುನ್ನಹಳ್ಳಿ, 2ಬಾರಿ ಸಾವಳೆಶ್ವರ ಈ ಎರಡು ಶಾಲೆಯನ್ನು ಸಾಧನೆಯಾಗಿದೆ ಎಂದು ಹೇಳಿದ್ದಾರೆ.