ಮದಗುಣಕಿ ಶಾಲಾ ಮಕ್ಕಳು ಕ್ರೀಡಾ ವಿಭಾಗ ಮಟ್ಟಕ್ಕೆ ಆಯ್ಕೆ
ಆಳಂದ:ಸೆ.26: 2024-25ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮಾದನಹಿಪ್ಪರಗಾ ವಲಯದ ಮದಗುಣಕಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ತಂಡವು ಬಾಲಕರ ಥ್ರೋ ಬಾಲ್‍ನಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.
ಶಾಲೆಯ ಮುಖ್ಯ ಶಿಕ್ಷಕ ಯಶವಂತ ಭಸ್ತಿ, ದೈಹಿಕ ಶಿಕ್ಷಕ ವಿರೂಪಾಕ್ಷಯ್ಯ ಹಿರೇಮಠ ಹಾಗೂ ಎಲ್ಲಾ ಶಿಕ್ಷಕರು ಮತ್ತು ಎಸ್‍ಡಿಎಮ್‍ಸಿ ಅಧ್ಯಕ್ಷ ಕುಮಾರಸ್ವಾಮಿ ಹಿರೇಮಠ ಹಾಗೂ ಎಲ್ಲಾ ಸದಸ್ಯರೂ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜು ಮಡಿವಾಳ ಹಾಗೂ ಎಲ್ಲಾ ಸದಸ್ಯರು ಗ್ರಾಮಸ್ಥರು ಸೇರಿ ವಿದ್ಯಾರ್ಥಿಗಳ ಸಾಧನೆಗೆ ಹರ್ಷವ್ಯಕ್ತಪಡಿಸಿ ಅಭಿನಂಧಿಸಿ ವಿಭಾಗ ಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡಿ ರಾಜ್ಯಮಟ್ಟಕೆ ಆಯ್ಕೆಯಾಗಿ ಶಾ¯ ಮತ್ತು ಊರಿನ ಕೀರ್ತಿತಲೆಂದು ಅವರು ಹಾರೈಸಿದ್ದಾರೆ.