ಮಾದಕ ವಸ್ತುಗಳು ಸಮಾಜಕ್ಕೆ ಮಾರಕ : ಎಎಸ್‍ಐ ಶಿವಕುಮಾರ
ಸಂಜೆವಾಣಿ ವಾರ್ತೆ
ಬೀದರ :ಜೂ.26: ಅಮಲು ಬರಿಸುವ ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯ ಅನೇಕ ದೈಹಿಕ ಹಾಗೂ ಮಾನಸಿಕ ಕಾಯಿಲೆಗೆ ಒಳಗಾಗಿ ತನ್ನ ಜೀವವನ್ನೆ? ಕಳೆದುಕೊಳ್ಳುತ್ತಿದ್ದಾನೆ ಆದ್ದರಿಂದ ಮಾದಕ ವಸ್ತುಗಳಿಂದ ಯುವಕರು ದೂರ ಇರಬೇಕು ಎಂದು ಬೀದರ ರೈಲ್ವೆ ಪೆÇಲೀಸ್ ಇಲಾಖೆಯ ಎ.ಎಸ್.ಐ ಶಿವಕುಮಾರ ಹೇಳಿದರು.
ಮಂಗಳವಾರ ಪಟ್ಟಣದ ರೈಲ್ವೆ ಪೆÇಲೀಸ್ ಠಾಣೆ ಸಹಯೋಗದಲ್ಲಿ ಜರುಗಿದ ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಆಚರಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಯುವಕರು ಮಾದಕ ವಸ್ತುಗಳ ಸೇವನೆಯಿಂದ ಆರ್ಥಿಕವಾಗಿ ದಿವಾಳಿ ಆಗಿ, ತನ್ನ ಕುಟುಂಬ ಹಾಗೂ ಸಮಾಜಕ್ಕೆ ಬೇಡವಾಗುತ್ತಿದ್ದಾನೆ. ಸಮಾಜ ಮಾದಕ ವಸ್ತುಗಳಿಂದ ಮುಕ್ತವಾಗಿರಬೇಕು. ಮಾದಕ ವಸ್ತುಗಳ ಬಳಕೆ ಹಾಗೂ ಅಕ್ರಮ ಸಾಗಣೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಪ್ರತಿಯೊಬ್ಬರು ಅರಿವು ಮೂಡಿಸುವ ಕಾರ್ಯ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಆರ್ಪಿಸಿ ಲೋಕೇಶ್, ಸಂಜು ಕುಮಾರ್, ಮುಕೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.