ರಸ್ತೆ ಅಗಲಿಕರಣಕ್ಕೆ 5 ಕೋಟಿ ಮಂಜೂರು ಶೀಘ್ರ ಕಾಮಗಾರಿ ಆರಂಭ : ಶಾಸಕ ಪಾಟೀಲ್
ಸಂಜೆವಾಣಿ ವಾರ್ತೆ
ಹುಮನಾಬಾದ :ಜೂ.26: ಪಟ್ಟಣದ ಶಿವಾಜಿ ಚೌಕದಿಂದ ಬಾಬು ಜಗಜೀವನ್ ರಾಮ್ ಚೌಕದವರೆಗೆ ರಾಷ್ಟಿಯ ಹೆದ್ದಾರಿಗೆ ಸಂಪರ್ಕಿಸುವ ರಸ್ತೆ ತೀರಾ ಅದಗೆಟ್ಟಿದ್ದು ಮನಗಂಡು ಈ ರಸ್ತೆ ಅಗಲಿಕರಣಕ್ಕೆ ಮುಖ್ಯ ಮಂತ್ರಿ ನಿಧಿಯಿಂದ ಐದು ಕೋಟಿ ಮಂಜೂರಾಗಿದೆ ಎಂದು ಶಾಸಕ ಸಿದ್ದು ಪಾಟೀಲ ರಸ್ತೆ ನಿರ್ಮಾಣದ ಸ್ಥಳ ಪರಿಶೀಲಿಸಿ ಮಾತನಾಡುತ್ತಾ ತಿಳಿಸಿದರು. ಈ ರಸ್ತೆ ನಿರ್ಮಾಣ ಸಂಬಂಧವಾಗಿ 41 ಗಿಡಗಳು ಕಡಿಯಲಾಗುವುದು ಈ ಸಂಬಂಧ ಅರಣ್ಯ ಇಲಾಖೆಗೆ ಆದೇಶಿಸಲಾಗಿದೆ. ವಿದ್ಯುತ ಕಂಬ ಕೂಡಾ ಕೇಲವು ಕಡೆ ತೆಗೆಯಲಾಗುತ್ತಿದೆ. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಟೆಂಡರ ಪ್ರಕ್ರಿಯೇಗೆ ವಿಳಂಬ ವಾಗಿದೆ. ಈ ಟೆಂಡರ ಪ್ರಕ್ರಿಯೆ ಕಾರ್ಯ ಶಿಘ್ರದಲ್ಲಿ ಆರಂಭ ವಾಗುತ್ತದೆ ಎಂದು ಸಿದ್ದು ಪಾಟೀಲ ತಿಳಿಸಿದ್ದಾರೆ. ಲೋಕೊಪಯೋಗಿ ಇಲಾಖೆಯ ಎಇಇ ಸುನಿಲ್ ಕುಮಾರ್, ಅರಣ್ಯಲಯ ಅಧಿಕಾರಿ ಸಂತೋಷ್, ಬಿಜೆಪಿ ಮುಖಂಡರಾದ ಡಾ. ಬದ್ರೇಶ್ ಪಾಟೀಲ್, ಮಲ್ಲಿಕಾರ್ಜುನ್ , ರಮೇಶ್ ಕಲ್ಲೂರು, ನಾಗಭೂಷಣ್ ಸಂಗಮ, ಸುನಿಲ್ ಪುತ್ರಿ, ಸೇರಿದಂತೆ ಅನೇಕರು ಇದ್ದರು.