ರೇಣುಕಾಸ್ವಾಮಿಯ ಹತ್ಯೆ ಖಂಡಿಸಿ ತಹಶೀಲ್ದಾರರಿಗೆ ಮನವಿ
ಇಲಕಲ್ಲ: ಜೂ.26:ಇಲಕಲ್ಲ ತಾಲೂಕಿನ ವೀರಮಾಹೇಶ್ವರ ಜಂಗಮ ಸಮಾಜದ ಬಾಂಧವರಿಂದ
ನಗರದ ನಿರೀಕ್ಷಣ ಮಂದಿರದ ಮುಂಭಾಗದಲ್ಲಿರುವ ಆದಿ ಜಗದ್ಗುರು ರೇಣುಕಾಚಾರ್ಯ ವೃತ್ತದಲ್ಲಿ ರೇಣುಕಾಚಾರ್ಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಇಂದು ಮುಂಜಾನೆ 11 ಕ್ಕೆ ಪ್ರಾರಂಭ ಜಂಗಮ ಸಮಾಜದವರ ನಡಿಗೆ ಬಸ್ ನಿಲ್ದಾಣ, ಮಾರ್ಗವಾಗಿ ಕಂಠಿ ವೃತ್ತದಲ್ಲಿ ಕಂಠಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿಯ ಬರ್ಬರ ಹತ್ಯೆ ಮಾಡಿರುವ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ಪ್ರಾಮಾಣಿಕವಾಗಿ ವಿಚಾರಣೆ ಮಾಡಿ ಯಾವುದೇ ಒತ್ತಡಕ್ಕೂ ಮಣೆಯದೆ ಕೆಲಸ ಮಾಡಿರುವ ಕರ್ನಾಟಕ ಸರ್ಕಾರ ಪೆÇಲೀಸ ಇಲಾಖೆ ಕಮಿಷನರ್ ಬಿ ದಯಾನಂದ,ಡಿಸಿಪಿ ಗೀರಿಶ್ ಎಸಿಪಿ ಚಂದನ,ಎಸ್ .
ನ್ಯಾಯಾಂಗ ಇಲಾಖೆ
ಪಿ .ಪಿ ಪ್ರಸನ್ನ ಕುಮಾರ,ಅವರಿಗೆ ಜಂಗಮ ಸಮಾಜದ ಭಾಂಧವರು ಪುಷ್ಪರುಷ್ಠಿ ಮಾಡುವ ಮೂಲಕ ಅಭಿನಂದನೆಯನ್ನು ತಿಳಿಸಿದರು.
ಈ ಅಭಿನಂದನಾ ನಡಿಗೆ ಇಳಕಲ್ಲ ಜಂಗಮ ಸಮಾಜದ ಪ್ರಧಾನ ಕಾರ್ಯದರ್ಶಿ, ಸಂಗಮೇಶ್ ಜಾವುರಮಠ ಮಾತನಾಡಿ ರೇಣುಕಾ ಸ್ವಾಮಿ ಬರ್ಬರ ಹತ್ಯೆ ಮಾಡಿರುವ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ಪ್ರಾಮಾಣಿಕವಾಗಿ ವಿಚಾರಣೆ ಮಾಡಿದ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಅಭಿನಂದನೆಯನ್ನು ತಿಳಿಸಿದರು.
ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಿಗೆ ಹತ್ತೆಯಾದ ರೇಣುಕಾ ಸ್ವಾಮಿಯ ಧರ್ಮಪತ್ನಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಸಮಾಜದ ಪರವಾಗಿ ಒತ್ತಾಯ ಮಾಡಿದರು.
ಸಮಾಜದ ಹಿರಯರಾದ ವಿಶ್ವನಾಥ್ ವಂಶಾಕೃತ ಮಠ ಮಾತನಾಡಿ ರಾಜ್ಯದಲ್ಲಿ ಸಮಾಜದ ಬಾಂಧವರ ಮೇಲೆ ಆಗುತ್ತಿರುವ ಸರಣಿ ಕೊಲೆಗಳನ್ನು ಖಂಡಿಸುತ್ತೇವೆ ಎಂದರು. ಹಲ್ಲೆಗೊಳಗಾದ ಕುಟುಂಬದವರಿಗೆ ಸರ್ಕಾರ ನ್ಯಾಯ ಧರಿಸುವ ಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಸಮಾಜ ಸೇವಕಿ ಜಯಶ್ರೀ ಸಾಲಿಮಠ ಮಾತನಾಡಿ
ಇತರ ಕೊಲೆ ಮಾಡಿರುವ ನಟ ದರ್ಶನ್ ನನ್ನ ಎನ್ಕೌಂಟರ್ ಮಾಡಬೇಕು ಇಲ್ಲದಿದ್ದರೆ ನಮ್ಮ ಮಹಿಳೆಯರ ಕೈಯಲ್ಲಿ ಕೊಟ್ಟರೆ ನಾವೇ ಎನ್ಕೌಂಟರ್ ಮಾಡಿ ಬಿಸಾಕ್ತೀವಿ. ಕೆಲವೇ ದಿನಗಳಲ್ಲಿ ಸಮಾಜ ಬಾಂಧವರು ಒಂದು ನೇಹಾ ಹಿರೇಮಠ ಪ್ರಕರಣ, ಆಕಾಶ ಮಠಪತಿ ಪ್ರಕರಣ, ಚಿತ್ರದುರ್ಗ ರೇಣುಕ ಸ್ವಾಮಿಯ ಬರ್ಬರಹತ್ಯೆ ಆರೋಪಿಗಳನ್ನ ನಮ್ಮ ಕೈಯಲ್ಲಿ ನೀಡಿ ನಾವು ಏನ್ ಕೌಂಟರ್ ಮಾಡಿ ತೋರುಸ್ತೀವಿ ಎಂದರು.
ರೇಣುಕಾಸ್ವಾಮಿಯ ಬರ್ಬರ ಹತ್ಯೆ ಮಾಡಿರುವ ಪ್ರಕರಣದಲ್ಲಿ ಆರೋಪಿಗಳನ್ನು ಭೇದಿಸಿದ ಕರ್ನಾಟಕ ಸರ್ಕಾರ ಪೆÇಲೀಸ್ ಇಲಾಖೆ ಹಾಗೂ ನ್ಯಾಯ ಇಲಾಖೆ ಅಧಿಕಾರಿಗಳಿಗೆ ಇಲ್ಕಲ್ ತಾಲೂಕು ವೀರಮಾಹೇಶ್ವರ ಜಂಗಮ ಸಮಾಜದ ಬಾಂಧವರು ಸೇರಿ ಇಲಕಲ್ಲ ತಾಲೂಕ ದಂಢಾಧಿಕಾರಿ ಸತೀಶ್ ಬಿ .ಕೂಡಲಗಿ ಅವರಿಗೆ ಮನವಿಸಲ್ಲಿಸಿದರು
ಇದೇ ಸಂಧರ್ಭದಲ್ಲಿ
ಇಳಕಲ್ಲ ನ ವೀರಮಾಹೇಶ್ವರಿ ಜಂಗಮ ಸಮಾಜದ ಅಧ್ಯಕ್ಷಸಂಗಮೇಶ ಸಾರಂಗಮಠ,ಪ್ರಧಾನ ಕಾರ್ಯದರ್ಶಿ ಸಂಗಮೇಶ ಜಾವೂರಮಠ,
ಉಪಾಧ್ಯಕ್ಷ ದೊಡ್ಡಯ್ಯ ತೇಲಕಟ್ಟಮಠ ಹಿರಿಯರಾದ ವಿಶ್ವನಾಥ ವಂಶಾಕ್ಕøತಮಠ,ಜಿ.ವಿ ಹಿರೇಮಠ, ,ಸಂತೋಷ ಮಠ,ಮಹಾಂತೇಶ ಹಿರೇಮಠ,
ಸಮಾಜದ ಮಹಿಳಾ ಮುಖಂಡರಾದ ಜಯಶ್ರೀ ಸಾಲಿಮಠ, ಉಮಾಮಠದ,ಸುಧಾ ಹಿರೇಮಠ,ಸಿದ್ದು ವಸ್ತ್ರದ,ಆದೇಶ ಬೇನಕನಾಳಮಠ,ಉಮೇಶ ಗಣಾಚಾರಿ,ಶಿವುಕುಮಾರ ನಮದಾಪುರಮಠ,ವಿರೂಪಾಕ್ಷಿ ಸರಗಣಾಚಾರಿ,ಶಂಕ್ರಯ್ಯ ಹಿರೇಮಠ, ಸಂಗಯ್ಯ ನಾಗಯ್ಯನವರ,ಈರಣ್ಣ ಕುಂದರಗಿಮಠ,ಜಿ ಎಸ್ ಶಾಸ್ತ್ರೀ,ಸಚಿನ ಸಾಲಿಮಠ,
ಶಿವುಕುಮಾರ ಹಿರೇಮಠ,
ವಿ.ಎನ್. ಹಿರೇಮಠ,ಪ್ರಭು ಬನ್ನಿಗೋಳಮಠ,ಸೋಮಯ್ಯ ಸರಗಣಾಚಾರಿ,ಶಿವಯೋಗಿ ಹಿರೇಮಠ,ವಿಜಯ ಗವಿಮಠ,ಚೆನ್ನು ಗೋನಾಳಮಠ,
ಹಾಗೂ ವೀರಮಹೇಶ್ವರಿ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಮತ್ತು ವೀರ ಮಹೇಶ್ವರಿ ಜಂಗಮ ಮಹಿಳಾ ಸದಸ್ಯರು ಇತರರು ಇದ್ದರು.