ಬೆಳೆವಿಮೆ ಪರಿಹಾರ ಜಮಾ ಮಾಡಿಸುವಂತೆ ರೈತರಿಂದ ಕೃಷಿ ಅಧಿಕಾರಿಗಳಿಗೆ ಮನವಿ
ಇಳಕಲ್ :ಜೂ.26: ಕರ್ನಾಟಕ ರಾಜ್ಯ ರೈತ ಸಂಘ ಇಳಕಲ್ಲ ಹುನಗುಂದ ರೈತ ಸಮಾಜ ಮತ್ತು ಗ್ರಾಮೀಣ ಭಾಗದ ಹಿರೇಓತಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾಗೂ
ವಿವಿಧ ಗ್ರಾಮಗಳ ರೈತರು ತಾವು ತುಂಬಿದ 2023-24 ನೇ ಸಾಲಿನ ಹಿಂಗಾರು ಬೆಳೆವಿಮೆಯನ್ನು ನಷ್ಟಕ್ಕೆ ತಕ್ಕಂತೆ ಬೆಳೆವಿಮೆ ಜಮಾ ಮಾಡಿಸುವಂತೆ
ಕೃಷಿ ಸಹಾಯಕ ನಿರ್ದೇಶಕರು ಹುನಗುಂದ/ಇಳಕಲ್ಲ ಕೃಷಿ ಅಧಿಕಾರಿಗಳಾದ ಸೊಮಲಿಂಗಪ್ಪ ಅಂಟರತಾನಿಯವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ರೈತರ ಬೆಳೆಗಳು ನಷ್ಟವಾದರೂ ಬೆಳೆ ವಿಮೆ ಹಣ ಬಾರದೆ ಇರುವ ಕುರಿತು ಬೆಳೆ ವಿಮೆ ಕಟ್ಟಿದ ರೈತರಿಗೆ ಬೆಳೆ ವಿಮೆ ಹಣ ಕೊಡಿಸಿ ಎಂದು ಎಲ್ಲಾ ರೈತರು ಅರ್ಜಿ ತುಂಬಿ ಮನವಿ ಪತ್ರ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಬಸನಗೌಡ ಪಾಟೀಲ್, ಶರಣಗೌಡ ಕಂದುಕುರ್, ಮತ್ತು ಹಿರೇವತಗಿರಿ ಗ್ರಾಮದ ರೈತರದ ಪರಶುರಾಮ್ ಸುಂಕದ,ಅಮರೇಶ ಗುಣಸಾಗರ,ಶಿವಪ್ಪ ಹಿರೇಗೌಡ್ರ,ಮುತ್ತಪ್ಪ ಸುಂಕದ,ಗದಿಗೆಪ್ಪ ಸುಂಕದ, ಎಮ್ ಆರ್ ಗೌಡರ,ಶಿವನಗೌಡ
ಗೌಡರ,ಈರಣ್ಣ,ಕೆಂಚನಗೌಡ ಗೌಡರ ಹಾಗೂ ವಿವಿಧ ಗ್ರಾಮದ
ರೈತರು ಉಪಸ್ಥಿತರಿದ್ದರು.