ಕನ್ನಡ ಭವನಕ್ಕೆ ಅನುದಾನ-ಧನ್ಯವಾದ
ಕೋಲಾರ.ಜೂ೨೬: ನಗರದಲ್ಲಿ ೪ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕನಕ ಸಮುದಾಯ ಭವನಕ್ಕೆ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ವಿಶೇಷ ಅನುದಾನದಡಿಯಲ್ಲಿ ೧೦ ಲಕ್ಷ ರೂ. ನೀಡಿದ್ದು, ಕುರುಬ ಸಮಾಜದ ಮುಖಂಡರು ಹಾಗೂ ಕುಲಬಾಂಧವರು ಧನ್ಯವಾದ ಸಲ್ಲಿಸಿದ್ದಾರೆ.
ನಗರದ ಕುವೆಂಪು ನಗರದಲ್ಲಿ ನಿರ್ಮಿಸುತ್ತಿರುವ ಕನಕ ಭವನಕ್ಕೆ ಧನ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದ ಇಂಚರ ಗೋವಿಂದರಾಜು. ೧೦ ಲಕ್ಷ ರೂ. ಚೆಕ್ಕನ್ನು ಕುರುಬ ಸಮುದಾಯ ಮುಖಂಡ ಕೆ.ಎನ್.ಪ್ರಕಾಶ್ ಅವರಿಗೆ ಹಸ್ತಾಂತರ ಮಾಡಿದರು.
ಈ ವೇಳೆ ಎಂ.ಎಲ್.ಸಿ ಇಂಚರ ಗೋವಿಂದರಾಜು ಮಾತನಾಡಿ, ಕನಕ ಭವನ ಸಮುದಾಯದವರ ಚಟುವಟಿಕೆಗಳು ನಡೆಸಲು ಅನುಕೂಲವಾಗುತ್ತದೆ. ವಿದ್ಯಾರ್ಥಿಗಳ ಹಾಸ್ಟೆಲ್‌ಗೂ ನೆರವು ನೀಡಲಾಗುವುದು. ಶಾಶ್ವತ ಆಸ್ತಿಯನ್ನಾಗಿಸಿ ಸಮಾಜ, ಸಮುದಾಯದ ಅಭಿವೃದ್ಧಿಗೆ ಬಳಸಿ, ಶೈಕ್ಷಣಿಕವಾಗಿ ಮುನ್ನಡೆಯಿರಿ ಎಂದು ಕಿವಿಮಾತು ಹೇಳಿದರು.