ಜಾನಪದ ಸಂಸ್ಕøತಿಯಿಂದ ವ್ಯಕ್ತಿತ್ವ ವಿಕಸನ
ಕಲಬುರಗಿ:ಜೂ.25: ಮಾನವೀಯತೆ, ಆಚಾರ-ವಿಚಾರ, ಸಂಸ್ಕಾರ, ಗುರು-ಹಿರಿಯರನ್ನು ಗೌರವಿಸುವದು, ಹೃದಯವಂತಿಕೆ, ದೇಶಪ್ರೇಮ ಸೇರಿದಂತೆ ಮುಂತಾದ ಮಾನವೀಯ, ಸಾಮಾಜಿಕ ಮತ್ತು ರಾಷ್ಟ್ರೀಯ ಮೌಲ್ಯಗಳನ್ನು ಹೊಂದಿರುವ ಜಾನಪದ ಸಂಸ್ಕøತಿ, ಪರಂಪರೆಯನ್ನು ಅಳವಡಿಸಿಕೊಂಡರೆ ವ್ಯಕಿತ್ವ ವಿಕಸನವಾಗಲು ಸಾಧ್ಯವಿದೆ ಎಂದು ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಹೇಳಿದರು.
ನಗರದ ಹೊಸ ಜೇವರ್ಗಿ ರಸ್ತೆಯಲ್ಲಿನ ‘ಗೆಟ್ಸ್ ಡಿಗ್ರಿ ಕಾಲೇಜ್’ನಲ್ಲಿ ‘ಕನ್ನಡ ಜಾನಪದ್ ಪರಿಷತ್’ನ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ‘ವಿಕಾಸಕ್ಕಾಗಿ ಜಾನಪದ’ ಎಂಬ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ದೇಶದ ಭವ್ಯ ಸಂಸ್ಕøತಿ, ಪರಂಪರೆ ಉಳಿದಿದೆ ಎಂದರೆ, ಅದು ಜಾನಪದದಿಂದ ಮಾತ್ರ ಎಂಬುದು ಮರೆಯಬಾರದು. ವಿದೇಶಿ ಸಂಸ್ಕøತಿ ಬೇಡ. ದೇಶದ ಮೂಲ ಸಂಸ್ಕøತಿಯಾದ ಜಾನಪದ ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಳ್ಳಿ. ಜಾನಪದ ಸಂಸ್ಕøತಿ ಪರಿಸರ, ನಿಸರ್ಗದೊಂದಿಗಿನ ಅವಿನಾಭಾವ ಹೊಂದಿದ್ದು, ಪ್ರಗತಿಕೆ ಪೂರಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಜಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಪಾಟೀಲ, ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಬಿ.ಕಂಟೆಗೋಳ್, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಝಾಪುರ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗಣಮುಖಿ, ಕಾಲೇಜಿನ ಉಪನ್ಯಾಸಕರಾದ ಶಿವಲಿಂಗಪ್ಪ ಅಂಗಡಿ, ಪಲ್ಲವಿ ಪಾಟೀಲ, ವೈಶಾಲಿ ಹಿರೇಮಠ, ಸಿಬ್ಬಂದಿ ಕೀರ್ತಿ, ಪ್ರಮುಖರಾದ ಶಾಂತಕುಮಾರ ಬಿರಾದಾರ, ಚಂದ್ರಶೇಖರ ತುಮಕೂರ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.