ಸದಸ್ಯರಿಗೆ ಆರೋಗ್ಯರಕ್ಷಾ ವಿಮಾಚೆಕ್ ವಿತರಣೆ
ಕೋಲಾರ, ಜೂ,೨೬- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಹಿಳಾ ಸಬಲೀಕರಣಕ್ಕಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದು, ಅದರ ಜೊತೆಗೆ ಆರ್ಥಿPವಾಗಿ ಸದೃಡರನ್ನಾಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತಿರುವುದು ಜಗತ್ ಜಾಹಿರವಾಗಿದೆ.
ಇಷ್ಟೆ ಅಲ್ಲದೆ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವಲ್ಲಿ ಸಂಸ್ಥೆಯೂ ಮುಂಚೂಣಿಯಲ್ಲಿದೆ, ಕೆರೆ ಊಳೆತ್ತುವುದು, ದೇವಸ್ಥಾನಗಳ ಜೀರ್ಣೋದ್ದಾರಕ್ಕೆಅನುದಾನ, ನಿರ್ಗತಿಕರಿಗೆ ಮಾಶಾಸನ ನೀಡುತ್ತಿರುವುದು, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಜ್ಞಾನಿಧಿ ಶಿಷ್ಯವೇತನ, ಆಯ್ದ ಕೊರತೆ ಇರುವ ಶಾಲೆಗಳಿಗೆ ಶಿಕ್ಷಕರ ಒದಗಣೆ, ಇವೆಲ್ಲವುದರ ಜೊತೆಗೆಯೋಜನೆಯ ಸ್ವ-ಸಹಾಯ ಸಂಘದ ಸದಸ್ಯರ ಆರೋಗ್ಯದ ಬಗ್ಗೆಯು ಕೂಡ ಹಲವಾರು ವಿಮಾ ಯೋಜನೆಗಳನ್ನು ಕೂಡ ಸದಸ್ಯರಿU ತಲುಪವಂತಹ ವ್ಯವಸ್ಥೆಗಳನ್ನು ಮಾಡುತ್ತಿದೆ. ಆರೋಗ್ಯ ರಕ್ಷ ಮತ್ತು ಸಂಪೂರ್ಣ ಸುರಕ್ಷ, ಮತ್ತು ಪ್ರಗತಿ ರಕ್ಷಾ ಕವಚ ಹೀಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಮುಂದುವರೆದಿದೆ.
ಕೋಲಾರ ತಾಲ್ಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ದಿ ಕಛೇರಿಯಲ್ಲಿ ಸ್ವ-ಸಹಾಯ ಸಂಘದ ಸದಸ್ಯರಿಗೆ ಆರೋಗ್ಯರಕ್ಷಾ ವಿಮಾ ಸೌಲಭ್ಯ ಮಂಜೂರಾಗಿದ್ದ ೫೭ ಮಂದಿ ಫಲಾನುಭವಿ ಸದಸ್ಯರುಗಳಿಗೆ ಸುಮಾರು ರೂ.೬.೫೦ ಲಕ್ಷಚೆಕ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಸಿ.ಎಂ.ಆರ್ ಶ್ರೀನಾಥ್, ರವರು ಸಾಕೇಂತಿಕ ಫಲಾನುಭವಿಗೆ ಚೆಕ್ ವಿತರಣೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ ಧರ್ಮಸ್ಥಳ ಸಂಸ್ಥೆ ಇಂದು ಕರ್ನಾಟಕ ರಾಜ್ಯಾದಾದ್ಯಂತ ವಿಸ್ತರಣೆಗೊಂಡು ಸುಮಾರು ಶೇ೭೦% ರಷ್ಟು ಮಹಿಳೆಯರಿಗೆ ಆರ್ಥಿಕ ಶಿಸ್ತು ಕಲಿಸುತ್ತಾ ಅವರ ಕುಟುಂಬಕ್ಕೆ ಸಂಸ್ಥೆಯ ಕಡೆಯಿಂದ ಹಲವಾರು ರೀತಿಯ ಪ್ರಯೋಜನಗಳನ್ನು ಸಂಸ್ಥೆಯು ದೊರಕಿಸಿಕೊಡುತ್ತಿರುವುದು ಶ್ಲಾಘನೀಯ ವಿಚಾರಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಗಣೇಶ್,ಕೆ.ಎಸ್. ಮಾತನಾಡಿ ಸಂಸ್ಥೆಯು ಕೋಲಾರ ಜಿಲ್ಲೆಯ ಜನತೆಗೆ ಕಷ್ಟ ಕಾಲದಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು, ವ್ಯವಸಾಯ ಹೈನುಗಾರಿಕೆ ಹೀಗೆ ಹಲವಾರು ರೀತಿಯ ಉದ್ದೇಶಗಳಿಗೆ ಆರ್ಥಿಕ ಸೌಲಭ್ಯ ಒದಗಿಸುತ್ತಿರುವುದು ನಮ್ಮೆಲ್ಲರಿಗೂ ಸಂತಸದ ವಿಚಾರವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿ ಸಿದ್ದಗಂಗಯ್ಯ ಟಿ.ಎಸ್, ಗಣ್ಯರಾದ ಅಶೋಕ್, ಸುಧಾಕರ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಸೌಮ್ಯ ಕೆ.ಜಿ, ಕೃಷಿ ಅಧಿಕಾರಿ ವಿಜಯ್‌ಕುಮಾರ್, ಕಛೇರಿ ಪ್ರಬಂಧಕ ದೀಪಿಕಾ, ಇತರರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಸಿ ಚೆಕ್ ವಿತರಣೆ ಮಾಡಲಾಯಿತು.