ಮಹಿಳೆಯರಿಗಾಗಿ ಕ್ಯಾನ್ಸರ್‌ ಜಾಗೃತಿ ಸಪ್ತಾಹ
ಕಲಬುರಗಿ:ಜೂ.25: ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಜಿಲ್ಲಾ ಶಾಖೆ ಕಲಬುರಗಿ ಮತ್ತು ಪ್ರೌಢ ದೇವರಾಯ ವಿಜ್ಞಾನ ಪದವಿ ಪೂರ್ವ ಕಾಲೇಜ ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ “ಮಹಿಳೆಯರಿಗಾಗಿ ಕ್ಯಾನ್ಸರ್‌ ಜಾಗೃತಿ ಸಪ್ತಾಹ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಡಾ. ಮಹಾನಂದಾ ಮೇಳಕುಂದಿ ವೈದ್ಯಕೀಯ ಅಧೀಕ್ಷಕರು, ಹೈ.ಕ. ಸಂಸ್ಥೆಯ ಸಂಗಮೇಶ್ವರ ಆಸ್ಪತ್ರೆ ಹಾಗೂ ಪ್ರಾಧ್ಯಾಪಕರು ಓ.ಬಿ.ಜಿ., ಎಮ್. ಆರ್. ಎಮ್. ಸಿ. ಕಲಬುರಗಿ ಸಮಾರಂಭವನ್ನು ಉದ್ಘಾಟಿಸಿ ಕ್ಯಾನ್ಸರ್ ಕುರಿತು ಮಾತನಾಡಿ ಕ್ಯಾನ್ಸರ್ ಲಕ್ಷಣಗಳು, ಹಾಗೂ ಅದನ್ನು ಹೇಗೆ ತಡೆಗಟ್ಟವ ಪ್ರಕ್ರಿಯೆಯನ್ನು ಡೇಟಾ ವಿಧಾನಗಳ ಪ್ರದರ್ಶನ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿದರು. ಮತ್ತು ಡಾ. ಸಂದೀಪ ಕೆ. ಎಸ್‌ ವೈದ್ಯಕೀಯ ಆಂಕೊಲಾಜಿಸ್ಟ್‌, ಹೆಚ್.ಸಿ.ಜಿ ಕ್ಯಾನ್ಸರ್‌ ಸೆಂಟರ್‌, ಕಲಬುರಗಿ ಇವರು ಮಹಿಳೆಯರಿಗೆ ಆಗುವ ಸ್ತನ ಕ್ಯಾನ್ಸರ್‌, ಹೆಚ್.ಪಿ.ವಿ ಮತ್ತು ಗರ್ಭಕಂಠದ ಕಾನ್ಯರ್‌ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು ಅದನ್ನು ತಡೆಗಟ್ಟುವ ವ್ಯಾಕ್ಸಿನ ಬಗ್ಗೆ ವೀಶೆಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ವೇದಿಕೆ ಮೇಲೆ ರೆಡ್‌ ಕ್ರಾಸ್‌ ಸಂಸ್ಥೆಯ ಉಪಸಭಾಪತಿ ಶ್ರೀಮತಿ ಭಾಗ್ಯಲಕ್ಷ್ಮೀ ಎಮ್. ಗೌರವ ಕಾರ್ಯದರ್ಶಿ ಶ್ರೀ ರವೀಂದ್ರ ಶಾಬಾದಿ, ಆರೋಗ್ಯ ಸಮಿತಿ ಸಂಚಾಲಕರಾದ ಶ್ರೀ ಪರಮೇಶ್ವರ ಶೆಟಕಾರ, ಶ್ರೀ ರಾಜೇ ಶಿವಶರಣಪ್ಪ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿನಿಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.