ಸಿಲಿಂಡರ್ ಸ್ಫೋಟ: ಮತ್ತೋರ್ವ ಕಾರ್ಮಿಕ ಸಾವು
ಕಲಬುರಗಿ,ಜೂ.25-ನಗರದ ಶರಣಬಸವೇಶ್ವರ ಕೆರೆ ಪಕ್ಕದ ಸಪ್ತಗಿರಿ ಹೋಟೆನಲ್ಲಿ ಈಚೆಗೆ ಸಂಭವಿಸಿದ ಸಿಲಿಂಡರ್ ಸ್ಪೋಟ ಘಟನೆಯಲ್ಲಿ ಗಾಯಗೊಂಡಿದ್ದ 10 ಜನ ಕಾರ್ಮಿಕರ ಪೈಕಿ ಮತ್ತೊಬ್ಬ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಗಿಲ್ಕಿ ಗ್ರಾಮದ ವಿಠ್ಠಲ ಸಿದ್ರಾಮಪ್ಪ ತಾವಡೆ (25) ಮೃತಪಟ್ಟ ಕಾರ್ಮಿಕ. ಆ ಮೂಲಕ ಸಿಲಿಂಡರ್ ಸ್ಫೋಟ ಘಟನೆಯಲ್ಲಿ ಮೃತಪಟ್ಟ ಕಾರ್ಮಿಕರ ಸಂಖ್ಯೆ ಎರಡಕ್ಕೆ ಏರಿಕೆಯಾದಂತಾಗಿದೆ.
ಸಿಲಿಂಡರ್ ಸ್ಫೋಟ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿಠ್ಠಲ ತಾವಡೆ ಅವರನ್ನು ಮಹಾರಾಷ್ಟ್ರದ ಮಿರಾಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜೂ.24 ರಂದು ರಾತ್ರಿ 9.30ಕ್ಕೆ ಕೊನೆಯುಸಿರೆಳೆದಿದ್ದಾರೆ.
ಈ ಮೊದಲು ನಗರದ ರೋಜಾ (ಬಿ) ಬಡಾವಣೆಯ ಮಲ್ಲಿಕಾರ್ಜುನ ಎಂಬ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೆ ಇತ್ತೀಚೆಗಷ್ಟೇ ಮೃತಪಟ್ಟಿದನ್ನು ಇಲ್ಲಿ ಸ್ಮರಿಸಬಹದು. ಉಳಿದ 8 ಜನ ಕಾರ್ಮಿಕರಿಗೆ ನಗರದ ಜಿಮ್ಸ್ ಬೆಂಗಳೂರು ಮತ್ತು ಮಹಾರಾಷ್ಟ್ರದ ಮಿರಾಜ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.