ಗಿಡಗಳನ್ನು ಮಕ್ಕಳಂತೆ ಬೆಳೆಸಿ: ಸಜ್ಜನಶೆಟ್ಟಿ
ಕಲಬುರಗಿ,ಜೂ.25-ಗಿಡಗಳನ್ನು ಮಕ್ಕಳಂತೆ ಬೆಳೆಸಿದಾಗ ಮಾತ್ರ ಪರಿಸರವನ್ನು ಕಾಪಾಡಿದಂತೆ ಆಗುತ್ತದೆ. ಗಿಡಗಳು ಆಮ್ಲಜನಕವನ್ನು ನೀಡುವುದರಿಂದ ಮನುಷ್ಯ ಆರೋಗ್ಯವಾಗಿರಲು ಸಾಧ್ಯ ಎಂದು ಕಲಬುರಗಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗುರುಬಸಪ್ಪ ಎಸ್.ಸಜ್ಜನಶೆಟ್ಟಿ ಹೇಳಿದರು.
ಕಲಬುರಗಿ ತಾಲೂಕಿನ ಶರಣಸಿರಸಗಿ ಗ್ರಾಮದಲ್ಲಿ ಶರಣ ಜ್ಯೋತಿ ಕನ್ನಡ ಪ್ರಾಥಮಿಕ ಹಾಗೂ ಗ್ರಾಮೀಣ ಕ್ರೀಡಾ ವಸತಿ ಶಾಲೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಮಕ್ಕಳಿಗೆ ಸಸಿ ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಧರ್ಮಸ್ಥಳದ ಧರ್ಮಾರ್ಧಿಕಾರಿಯಾದ ಡಾ.ಡಿ.ವೀರೇಂದ್ರ ಹೆಗ್ಗಡೆ ಯವರು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಧರ್ಮಸ್ಥಳ ಯೋಜನೆಯ ಮುಖಾಂತರ ಅನುಷ್ಠಾನ ಮಾಡುತ್ತಿದ್ದು ಇದರಿಂದ ಗ್ರಾಮೀಣ ರೈತರಿಗೆ ಎಲ್ಲಾ ವರ್ಗದ ಜನರಿಗೆ ಬಹಳ ಸಹಕಾರಿ ಆಗಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರು ಹಾಗೂ ಸಂಸ್ಥೆಯ ಅಧ್ಯಕ್ಷರಾದ ಸಿ.ಎನ್.ಬಬಲಗಾಂವ ಅವರು ಮಾತನಾಡಿ, ಮಕ್ಕಳು ಸಣ್ಣವಯಸ್ಸಿನಲ್ಲಿ ಮನೆ, ಶಾಲೆಯ ಆವರಣ, ದೇವಸ್ಥಾನಗಳಲ್ಲಿ ತಮ್ಮ ಹುಟ್ಟುಹಬ್ಬದ ದಿನದಂದು ಗಿಡಗಳು ಹಚ್ಚುವ ಮೂಲಕ ಆಚರಣೆ ಮಾಡಬೇಕೆಂದು ಎಂದು ಹೇಳಿದರು. ಶಾಲಾ ಕಮಿಟಿ ಉಪಾಧ್ಯಕ್ಷ ಧನರಾಜ ಬಾಸಗಿ, ಶಾಲಾ ಮುಖ್ಯ ಗುರು ಸಿದ್ದರಾಮ ಮುಗಳಿ, ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಗಂಗಾಧರ್ ಮೇಲಿನಮನಿ ಪ್ರಾಥಮಿಕವಾಗಿ ಮಾತನಾಡಿದರು. ಭೀಮರಾಯ್ ಸನದಿ ವೇದಿಕೆ ಮೇಲೆ ಇದ್ದರು. ಶಿಕ್ಷಕಿ ಚಂದಮ್ಮ ವಡಗೇರಿ ಸ್ವಾಗತಿಸಿದರು. ನಿರೂಪಣೆಯನ್ನು ಗೋದಾವರಿ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ರತಿಕ ಎಸ್ ವಂದಿಸಿದರು.