ಅಂತರರಾಷ್ಟ್ರೀಯ ಯೋಗ ದಿನ ಆಚರಣೆ
ಕಲಬುರಗಿ,ಜೂ.25-ನಗರದ ಡಾಮಿನೆಂಟ್ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲೆಯ ಮಕ್ಕಳು, ಸೂರ್ಯ ನಮಸ್ಕಾರ ಹಾಗೂ ವಿವಿಧ ಆಸನಗಳನ್ನು ಪ್ರದರ್ಶನ ಮಾಡಿದರು. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರಾದ ಶಿವಕುಮಾರ ಡೋಣಿ, ಹಿರಿಯ ಕನ್ನಡ ಶಿಕ್ಷಕಿ ಶ್ವೇತಾ ಎಸ್.ಕುಲಕರ್ಣಿ ಮಾರ್ಗದರ್ಶನ ಮಾಡಿದರು.