ಡಾಮಿನೆಂಟ್ ಶಾಲೆಯಲ್ಲಿ ಶಾಲಾ ಸಂಸತ್ತು ರಚನೆ
ಕಲಬುರಗಿ,ಜೂ.25-ಮಕ್ಕಳಲ್ಲಿ ರಾಜಕೀಯ ಹಾಗೂ ಸಾಮಾಜಿಕ ಜಾಗೃತಿ ಮೂಡಿಸಲು 2024-25ನೇ ಶೈಕ್ಷಣಿಕ ಶಾಲಾ ಸಂಸತ್ತು ಚುನಾವಣೆಯನ್ನು ನಗರದ ಡಾಮಿನೆಂಟ್ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಈಚೆಗೆ ನಡೆಸಲಾಯಿತು.
ಪ್ರಧಾನ ಮಂತ್ರಿ, ಕ್ರೀಡಾ ಮಂತ್ರಿ, ಸಾಂಸ್ಕøತಿಕ ಮತ್ತು ಶಿಸ್ತು ಖಾತೆಗಳನ್ನು ಅವರು ಪಡೆದ ಮತಗಳ ಆಧಾರದ ಮೇಲೆ ಹಂಚಿಕೆ ಮಾಡಲಾಯಿತು. 1 ರಿಂದ 10ನೇ ತರಗತಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತದಾನ ಮಾಡಿದರು.
ಪ್ರಧಾನ ಮಂತ್ರಿಯಾಗಿ ರಿಷಿಕೇಶ್ ಆರ್.ಜಾಧವ್, ಕ್ರೀಡಾ ಮಂತ್ರಿಯಾಗಿ ವಿಕಾಸ ನಾಗರಾಜ, ಸಾಂಸ್ಕøತಿಕ ಮಂತ್ರಿಯಾಗಿ ವೈಶಾಲಿ ಬಿರಾದಾರ, ಶಿಸ್ತಿನ ಮಂತ್ರಿಯಾಗಿ ಸುಕೃತ್ ಕುಲಕರ್ಣಿ ಆಯ್ಕೆಯಾದರು.
ಶಾಲಾ ಸಂಸತ್ತು ರಚನೆಗೆ ಉಪ ಪ್ರಾಂಶುಪಾಲರಾದ ಪೂರ್ಣ ಕುಲಕರ್ಣಿ, ವಿಜ್ಞಾನ ಶಿಕ್ಷಕರಾದ ಪ್ರಮೋದ ಲಂಡನಕರ್ ಮಾರ್ಗದರ್ಶನ ಮಾಡಿದರು.