ಮದುವೆಯಾದ 2 ತಿಂಗಳಲ್ಲೇ ಸ್ಮಶಾನ ಸೇರಿದ ಯುವತಿ
ವಾಡಿ,ಜೂ.25-ಮದುವೆಯಾಗಿ ಗಂಡನ ಜತೆಯಲ್ಲಿ ಸುಖಜೀವನ ನಡೆಸುವ ಕನಸು ಕಂಡಿದ್ದ ಯುವತಿಯೊಬ್ಬಳು 2 ತಿಂಗಳಲ್ಲೇ ಮಸಣ ಸೇರಿದ ಘಟನೆ ಚಿತ್ತಾಪುರ ತಾಲೂಕಿನ ಕಮರವಾಡಿ ಗ್ರಾಪಂ ವ್ಯಾಪ್ತಿಯ ಮೋಳಿ ತಾಂಡಾದಲ್ಲಿ ಗುರುವಾರ ಮದ್ಯಾಹ್ನ ನಡೆದಿದೆ.
ಮೋಳಿತಾಂಡಾದ ವಿಶಾಲ ಎನ್ನುವ ಯುವಕನ ಜೊತೆ ಕಳೆದ ಎರಡು ತಿಂಗಳ ಹಿಂದೆ ಮದುವೆಯಾಗಿತ್ತು. ಅಣಿಕೇರಿ ಗ್ರಾಮದ ನಿವಾಸಿಯಾಗಿದ್ದ ಯುವತಿ ಸಾವಿತ್ರಿ (22), ಗುರುವಾರ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಗಾಬರೀಗೊಂಡ ಯುವತಿ ಕುಟುಂಬಸ್ಥರು ಪೆÇಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪಿಎಸ್‍ಐ ಶೀಶೈಲ್ ಅಂಬಾಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಮ್ಮ ಮಗಳಿಗೆ ಬಹುದಿನಗಳಿಂದ ಮಾನಸಿಕ ಕಾಯಿಲೆ ಆವರಿಸಿಕೊಂಡ ಪರಿಣಾಮ ಚಿಕಿತ್ಸೆ ನೀಡಲಾಗುತ್ತಿತ್ತು. ಜೀವನದಲ್ಲಿ ಜಿಗುಪ್ಸೆ ಹೊಂದಿದ್ದು, ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತನ ಕುಟುಂಬಸ್ಥರು ಚಿತ್ತಾಪುರ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಚಿತ್ತಾಪುರ ಪೆÇಲೀಸ್ ಠಾಣೆಯಲ್ಲಿ ಅಸಹಜ ಪ್ರಕರಣ ದಾಖಲಾಗಿದೆ.